Mysore
22
scattered clouds

Social Media

ಭಾನುವಾರ, 11 ಜನವರಿ 2026
Light
Dark

ಸಿದ್ದಾಪುರ ಪಟ್ಟಣದಲ್ಲಿ ಎಎನ್‌ಪಿಆರ್‌ ಕ್ಯಾಮೆರಾ ಕಣ್ಗಾವಲು..!

ಕೃಷ್ಣ ಸಿದ್ದಾಪುರ

ಸಿದ್ದಾಪುರ: ಸಂಚಾರ ನಿಯಮ ಪಾಲನೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವುದೂ ಸೇರಿ ದಂತೆ ಹಲವು ಉದ್ದೇಶಗಳೊಂದಿಗೆ ಸಿದ್ದಾಪುರ ಪಟ್ಟಣ ದಲ್ಲಿ ಎಎನ್‌ಪಿಆರ್ ಕ್ಯಾಮೆರಾ ಅಳವಡಿಸಲಾಗಿದ್ದು, ಪಟ್ಟಣದ ಭದ್ರತೆ ಹಚ್ಚಿಸುವುದರ ಜತೆಗೆ ಸಮಾಜ ಘಾತುಕ ಕೃತ್ಯಗಳಿಗೆ ಕಡಿವಾಣ ಬೀಳಲಿದೆ.

ಪ್ರವಾಸಿಗರ ನೆಚ್ಚಿನ ತಾಣ ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಅದೇ ರೀತಿ ಪ್ರವಾಸೋದ್ಯಮವೂ ಅಭಿವೃದ್ಧಿ ಹೊಂದುತ್ತಿದೆ. ಮೈಸೂರುಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಸಾಗುವ ಮಧ್ಯೆ ಸಿಗುವ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಪಟ್ಟಣದಲ್ಲಿಯೂ ವಾಹನಗಳ ಸಂಚಾರ ಹೆಚ್ಚುತ್ತಿದೆ. ಹಾಗಾಗಿ ವಾಹನಗಳ ಮೇಲೆ ನಿಗಾ ಇಡುವ ದೃಷ್ಟಿಯಿಂದ ಹಾಗೂ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಸುಲಭವಾಗಿ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶದಿಂದ ಪೊಲೀಸ್ ಇಲಾಖೆ ಖಾಸಗಿ ಸಂಸ್ಥೆಯ ಸಹಭಾಗಿತ್ವದೊಂದಿಗೆ ಎಐ ತಂತ್ರಜ್ಞಾನದ ನೂತನ ಕ್ಯಾಮೆರಾ ಅಳವಡಿಸಿದೆ. ದಿನದ ೨೪ ಗಂಟೆಗಳೂ ಕಾರ್ಯನಿರ್ವಹಿಸುವ ಈ ಕ್ಯಾಮೆರಾ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನದ ಮೇಲೆ ನಿಗಾ ಇರಿಸಿದೆ.

ಸಿದ್ದಾಪುರದ ನೂತನ ಠಾಣಾಽಕಾರಿಯಾಗಿ ಅಽಕಾರ ಸ್ವೀಕರಿಸಿದ ಮಂಜುನಾಥ್ ಅವರು, ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಈಗಾಗಲೇ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರಕಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಪಟ್ಟಣದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪತ್ತೆ ಹಾಗೂ ಕಾನೂನು ಬಾಹಿರ ಕಳ್ಳ ಸಾಗಾಣಿಕೆಯ ಮೇಲೆ ನಿಗಾ, ದುಷ್ಕೃತ್ಯ ಎಸಗಿ ಸಂಚರಿಸುವ ವಾಹನಗಳ ಪತ್ತೆ ಸೇರಿದಂತೆ ಹಲವು ಉದ್ದೇಶಗಳೊಂದಿಗೆ ಕ್ಯಾಮೆರಾ ಅಳವಡಿಸಿದ್ದಾರೆ.

ಪ್ರತಿದಿನ ನಗರದಲ್ಲಿ ಸಂಚರಿಸುವ ವಾಹನಗಳ ವಿವರ ಠಾಣೆಯಲ್ಲಿ ರೆಕಾರ್ಡ್ ಆಗುತ್ತಿದ್ದು, ಠಾಣೆಯಲ್ಲಿರುವ ಸಿಬ್ಬಂದಿ ಕೂಡ ಪರಿಶೀಲನೆ ಮಾಡಬಹುದಾಗಿದೆ. ಕಳ್ಳತನದಂತಹ ಪ್ರಕರಣಗಳು ನಡೆದ ಸಂದರ್ಭ ಈ ಕ್ಯಾಮೆರಾ ಆರೋಪಿ ಪತ್ತೆಗೆ ಸಹಕಾರಿಯಾಗಲಿದೆ.

ಈ ಹಿಂದೆ ಪೊಲೀಸರು ವಾಹನಗಳ ಪತ್ತೆಗೆ ಅಂಗಡಿಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಬೇಕಿತ್ತು. ಬಹುತೇಕ ಕ್ಯಾಮೆರಾಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ದೊರಕುತ್ತಿರಲಿಲ್ಲ. ಆದರೆ,ಇದೀಗ ಅಳವಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ನಂಬರ್ ಪ್ಲೇಟ್ ಗಳನ್ನು ಸ್ಪಷ್ಟವಾಗಿ ಗುರುತಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಆ ನಂಬರ್‌ಗಳನ್ನು ಶೇಖರಿಸಿಟ್ಟು ಪೊಲೀಸರಿಗೆ ಮಾಹಿತಿ ಒದಗಿಸಲಿದೆ. ಇದರಿಂದ ಅಕ್ರಮ ಚಟುವಟಿಕೆಗಳಿಗೆ

ಕಡಿವಾಣ ಬೀಳಲಿದ್ದು, ಈ ಬಗ್ಗೆ ಸಾರ್ವಜನಿಕ ವಲಯ ದಲ್ಲಿಯೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಎಎನ್‌ಪಿಆರ್ ಕ್ಯಾಮೆರಾ ಉಪಯೋಗವೇನು? 

ಸಿದ್ದಾಪುರದಲ್ಲಿ ಅಳವಡಿಸಿರುವ ಎಎನ್‌ಪಿಆರ್ ಕ್ಯಾಮೆರಾ ೫೦ ದಿನಗಳ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ವಾಹನದ ನೋಂದಣಿ ಸಂಖ್ಯೆ, ಬಣ್ಣ, ವಿಮೆ, ಹೊಗೆ ತಪಾಸಣೆಯಂತಹ ಮಾಹಿತಿಯು ಕುಳಿತಲ್ಲೇ ಪೊಲೀಸರಿಗೆ ಲಭ್ಯವಾಗಲಿದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದೂ ಸೇರಿದಂತೆ ಸಂಚಾರ ನಿಯಮ ಪಾಲಿಸದೆ ಸವಾರಿ ಮಾಡುವವರಿಗೆ ದಂಡ ವಿಽಸಲು ಈ ಕ್ಯಾಮೆರಾ ಸಹಕಾರಿಯಾಗಲಿದೆ. ಅತೀ ವೇಗದ ಚಾಲನೆ, ಕಾನೂನು ಬಾಹಿರವಾಗಿ ಕಳ್ಳ ಸಾಗಣೆ, ವಾಹನ ಕಳ್ಳತನ ಪ್ರಕರಣ ಪತ್ತೆ ಹಚ್ಚಲು ಈ ಕ್ಯಾಮೆರಾ ನೆರವಾಗಲಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನ ಹಾಗೂ ನಿರ್ದೇ ಶನದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸವಾಗುತ್ತಿದೆ. ಸಿದ್ದಾಪುರದಲ್ಲಿ ಎಎನ್‌ಪಿಆರ್ ಕ್ಯಾಮೆರಾ ಅಳವಡಿಸಲಾಗಿದ್ದು, ನಂಬರ್‌ಪ್ಲೇಟ್‌ಗಳು ಸೇವ್ ಆಗಿ ಸ್ಟೋರ್ ಮಾಡಿಕೊಳ್ಳುವುದು ಇದರ ವಿಶೇಷತೆಯಾಗಿದೆ. ದುಷ್ಟ್ರತ್ಯ ನಡೆದ ಸಂದರ್ಭ ಸ್ಟೋರೇಜ್‌ನಿಂದ ಪರಿಶೀಲಿಸಿಕೊಳ್ಳಬಹುದು. ಜೊತೆಗೆ ಇತರ ಅಪರಾಧ, ಸಂಚಾರಿ ನಿಯಮ ಉಲ್ಲಂಘನೆಗಳ ಪತ್ತೆಗೆ ಸಹಕಾರಿಯಾಗಲಿದೆ. ಸಂಘ ಸಂಸ್ಥಗಳ ಸಹಯೋಗದಲ್ಲಿ ಈ ಕ್ಯಾಮೆರಾ ಅಳವಡಿಸಲಾಗುತ್ತಿದ್ದು, ದಾನಿಗಳು ಸಹಕರಿಸಿದರೆ ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಿ,ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಲು ಸಹಕಾರಿಯಾಗಲಿದೆ. -ಪಿ. ಕೆ. ರಾಜು, ವೃತ್ತ ನಿರೀಕ್ಷಕರು, ಮಡಿಕೇರಿ ನಗರ ಪೊಲೀಸ್ ಠಾಣೆ

ಅತೀ ಸೂಕ್ಷ ಪ್ರದೇಶವಾಗಿ ಗುರುತಿಸಿ ಕೊಂಡಿರುವ ಸಿದ್ದಾಪುರ ಪುಟ್ಟಣದಲ್ಲಿ ಎಐ ತಂತ್ರಜ್ಞಾನದ ಕ್ಯಾಮೆರಾ ಅಳವಡಿಸಿರುವುದು ಸ್ವಾಗತಾರ್ಹ. ಇಲ್ಲಿ ನಡೆಯುವ ಅಕ್ರಮ ಚಟುವಟಿಕೆ ಗಳನ್ನು ಪತ್ತೆ ಹಚ್ಚಲು ತುಂಬಾ ಸಹ ಕಾರಿ ಆಗಲಿದ್ದು, ಮುಂದಿನ ದಿನಗಳಲ್ಲಿ ನೆಲ್ಲಿಹುದಿಕೇರಿ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಸಿದಲ್ಲಿ ಅಕ್ರಮ ಕಳ್ಳ ಸಾಗಣೆ ಪತ್ತೆ ಹಚ್ಚಲು ಸಹಾಯಕಾರಿ ಆಗಲಿದೆ. -ವಿ. ಕೆ. ಲೋಕೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ

Tags:
error: Content is protected !!