Mysore
27
scattered clouds

Social Media

ಬುಧವಾರ, 24 ಡಿಸೆಂಬರ್ 2025
Light
Dark

ಓದುಗರ ಪತ್ರ: ಮಾನವ ಸರಪಳಿಯಲ್ಲಿ ಗಾಂಧೀಜಿಯ ಕರಗಳಿಲ್ಲ!

ಸೆಪ್ಟೆಂಬರ್ 15ರ ಭಾನುವಾರ ಕರ್ನಾಟಕ ಸರ್ಕಾರ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸುತ್ತಿದ್ದು, ಬೀದರ್‌ನಿಂದ ಚಾ ರಾಜನಗರದವರೆಗೆ ಮಾನವ ಸರಪಳಿ ನಿರ್ಮಿಸುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಸ್ವಾವಲಂಬಿ, ಸ್ವರಾಜ್ಯ, ಸಾಮರಸ್ಯಪೂರ್ಣ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ಕಟ್ಟದ ಹೊರತು ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆದ್ದರಿಂದ ಎಲ್ಲ ಹಂತಗಳಲ್ಲಿಯೂ ಪ್ರಜಾಪ್ರಭುತ್ವವನ್ನು ಶಕ್ತಗೊಳಿಸಬೇಕೆಂಬುದು ಗಾಂಧೀಜಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ರವರ ಆಶಯವಾಗಿತ್ತು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಸಾಧಿಸುವ ಸಲುವಾಗಿಯೇ ಗಾಂಧೀಜಿಯವರು ಅಸ್ಪ್ಯಶ್ಯತೆ, ಜಾತೀಯತೆ, ಮಹಿಳಾ ಅಸಮಾನತೆ,ಅಸಮಾನ ಶಿಕ್ಷಣ ಮೊದಲಾದ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದ್ದರು.

ಮುಷ್ಕರ, ಚಳವಳಿ, ಸತ್ಯಾಗ್ರಹಗಳ ಮೂಲಕ ಅಖಂಡ ಭಾರತವನ್ನು ಸುತ್ತಿ ಜನರಿಗೆ ರಾಜಕೀಯ ಮತ್ತು ಸಾಮಾಜಿಕ ಶಿಕ್ಷಣ ನೀಡಿ ತಮ್ಮ ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆಯನ್ನೂ ಮೂಡಿಸಿ ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ದುಡಿದವರು ಮಹಾತ್ಮ ಗಾಂಧೀಜಿ. ಆದರೆ ಗಾಂಧೀಜಿಯವರ ಹೆಸರನ್ನು ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವು ಕೇವಲ ಮತ ಗಳಿಕೆಗಾಗಿ ಮಾತ್ರ ಬಳಸಿಕೊಂಡು ಉಳಿದ ಸಮಯದಲ್ಲಿ ಅವರನ್ನು ಮರೆತಿದೆ ಅನಿಸುತ್ತದೆ. ಅದಕ್ಕೆ ಉದಾಹರಣೆ ಎಂಬಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದಂದು ನಡೆಸುವ ಮಾನವ ಸರಪಳಿಯಲ್ಲಿ ಗಾಂಧೀಜಿಯವರ ಆಶಯಗಳನ್ನು ಕೈಬಿಟ್ಟಿದ್ದು, ಅವರ ಆಶಯಗಳಿಲ್ಲದೆ ಮಾನವ ಸರಪಳಿಯ ಉದ್ದೇಶ ಎಷ್ಟರಮಟ್ಟಿಗೆ ಜನರ ಹೃದಯ ತಲುಪಬಲ್ಲದು? -ಬ್ಯಾ. ರಾ. ಪ್ರಸನ್ನಕುಮಾರ್, ಬ್ಯಾಡರಹಳ್ಳಿ, ಕೆ. ಆರ್. ನಗರ ತಾ.

 

Tags:
error: Content is protected !!