ಮೈಸೂರು: ರಾಜ್ಯದಲ್ಲಿ ಇತ್ಯಾರ್ಥವಾಗಿರುವ ಅತ್ಯಾಚಾರ ಪ್ರಕರಣಗಳ ಲಿಸ್ಟ್ ಕೊಡಿ ಎಂದ ವಿದ್ಯಾರ್ಥಿನಿ. ಮಹಿಳೆಯ ದಿನಾಚರಣೆ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಿ ಪ್ರಶ್ನಿಸಿದ ವಿದ್ಯಾರ್ಥಿನಿ.
ಮಹಿಳಾ ಆಯೋಗದ ಅಧ್ಯಕ್ಷೆಗೆ ಸೌಜನ್ಯ ಪ್ರಕರಣದ ಬಗ್ಗೆ ಪ್ರಶ್ನಿಸಿದ ವಿದ್ಯಾರ್ಥಿನಿ. ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ. ವಿದ್ಯಾರ್ಥಿನಿ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಎಸ್ಕೇಪ್ ಆದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ.
ರಾಜ್ಯದಲ್ಲಿ ಮಹಿಳೆಯರ ಎಷ್ಟು ಪ್ರಕರಣ ಇತ್ಯಾರ್ಥ ಆಗಿದೆ ನಿಮ್ಮ ಸರ್ಕಾರದಿಂದ ಮಾಹಿತಿ ಕೊಡಿ. ಸೌಜನ್ಯ ಪ್ರಕರಣದಲ್ಲಿ ಇನ್ನೂ ಯಾಕೆ ನ್ಯಾಯ ಸಿಕ್ಕಿಲ್ಲ ಎಂದು ಪ್ರಶ್ನಿಸಿದ ಅಂತಿಮ ಬಿಎ ವಿದ್ಯಾರ್ಥಿನಿ ಸ್ವಾತಿ. ಇದಕ್ಕೆ ನ್ಯಾಯಾಲಯದ ಆದೇಶ ನಾವು ಪ್ರಶ್ನಿಸಲು ಸಾಧ್ಯವಿಲ್ಲ, ಎಲ್ಲದಕ್ಕೂ ಸಾಕ್ಷಿ ಮುಖ್ಯ ಎಂದು ಕಾನೂನು ಹೇಳುತ್ತದೆ ಎಂದು ಉತ್ತರಿಸಿ ಸುಮ್ಮನಾದ ನಾಗಲಕ್ಷ್ಮಿ ಚೌಧರಿ. ನಮ್ಮ ಪ್ರಶ್ನೆಗೆ ಸಮಂಜಸ ಉತ್ತರ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಸ್ವಾತಿ.





