ಪೀಪಲ್ ಪಾರ್ಕ್‌ಗೆ ಸೇರಿದ 3.5 ಎಕರೆ ಜಾಗ ಪಡೆಯಲು ಚಿಂತನೆ
ಕೆ.ಬಿ.ರಮೇಶನಾಯಕ
ಮೈಸೂರು: ನಗರದ ಹೃದಯ ಭಾಗದಲ್ಲಿರುವ ಮೈಸೂರು ಕೇಂದ್ರೀಯ ಬಸ್ ನಿಲ್ದಾಣವು (ಸಬ್ ಅರ್ಬನ್) ಕಿಷ್ಕಿಂಧೆಯಂತಾಗಿದ್ದು, ತನ್ನ ಸಾಮರ್ಥ್ಯಕ್ಕೆ ಮೀರಿದ ಬಸ್‌ಗಳು ಮತ್ತು ಜನರ ಓಡಾಟದಿಂದ ನಲುಗಿದೆ. ಅಲ್ಲದೆ, ಭವಿಷ್ಯದಲ್ಲಿ ಎದುರಾಗಬಹುದಾದ ಇಕ್ಕಟ್ಟು ನಿವಾರಣೆಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್‌ಟಿಸಿ)ದ ಮೈಸೂರು ಗ್ರಾಮಾಂತರ ವಿಭಾಗವು ಎರಡು ಯೋಜನೆಗಳನ್ನು ರೂಪಿಸಿದ್ದು, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯದ ವಿವಿಧೆಡೆಗೆ ಹಾಗೂ ನೆರೆ ರಾಜ್ಯ ಗಳಾದ ಕೇರಳ, ತಮಿಳುನಾಡು, ಮಹಾ ರಾಷ್ಟ್ರ ರಾಜ್ಯಗಳಿಗೆ ಸಂಚರಿಸುವ ಬಸ್‌ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನಗರದ ಹೃದಯ ಭಾಗದಲ್ಲಿರುವ ಈ ನಿಲ್ದಾಣದಿಂದ ಪ್ರಯಾಣಿಕರಿಗೆ ಅನುಕೂಲ ವಾದರೂ ಬಸ್‌ಗಳ ನಿಲುಗಡೆಗೆ ಇಕ್ಕಟ್ಟಾ ಗಿದೆ. ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ಬಸ್‌ಗಳು ನಿಲ್ದಾಣವನ್ನು ಪ್ರವೇಶಿಸಲು ಹಾಗೂ ಹೊರ ಹೋಗಲು ಗಂಟೆ ಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದವು.
ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ನಿಲ್ದಾಣ ವನ್ನು ಸ್ಥಳಾಂತರಿಸಬೇಕೆಂಬ ಕೂಗು ಬಹಳ ವರ್ಷಗಳಿಂದಲೂ ಕೇಳಿಬರುತ್ತಿದೆ.
ಬನ್ನಿಮಂಟಪದಲ್ಲಿರುವ ನಿಗಮದ ಜಾಗದಲ್ಲೇ ಸಮಗ್ರ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲು ಅಧಿಕಾರಿಗಳು ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಈಗಾಗಲೇ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನಿಲ್ದಾಣ ಸ್ಥಳಾಂತರ ಮಾಡಿದರೆ ಪ್ರಯಾಣಿಕರಿಗೆ ಆಗುವ ಅನುಕೂಲ ಅಥವಾ ಅನಾನುಕೂಲದ ಬಗ್ಗೆ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಈ ಸಂಬಂಧ ಶೀಘ್ರದಲ್ಲೇ ರಾಮಲಿಂಗಾರೆಡ್ಡಿ ಅವರು ಮೈಸೂರಿನಲ್ಲೇ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ.
ಮೈಸೂರು ಕೇಂದ್ರೀಯ ಬಸ್ ನಿಲ್ದಾಣದ ಎದುರು ಇರುವ ಪೀಪಲ್ಸ್ ಪಾರ್ಕ್ ಇದಲ್ಲದೆ, ಹಾಲಿ ಬಸ್ ನಿಲ್ದಾಣದ ಎದುರು ಇರುವ ಪೀಪಲ್ಸ್ ಪಾರ್ಕ್ ಗೆ ಸೇರಿದ ಮೂರೂ ವರೆ ಎಕರೆ ಜಾಗವನ್ನು ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾರ್ಕ್‌ಗೆ ಬೇಕಾದ ಜಾಗವನ್ನು ನಿಗಮದ ಜಾಗದಲ್ಲಿ ಕೊಡುವ ಜತೆಗೆ ಉದ್ಯಾನವನವನ್ನೂ ನಿರ್ಮಾಣ ಮಾಡಿ ಕೊಡಲಾಗುವುದು. ಪಾರ್ಕ್ ಜಾಗ ನೀಡಿದರೆ, ಅದರ ಜೊತೆಗೆ ನಿಲ್ದಾಣದ ಎದುರಿನ ಟ್ಯಾಕ್ಸಿ ಸ್ಟ್ಯಾಂಡ್ ತೆರವುಗೊಳಿಸಿ ಈಗಿರುವಬಸ್ ನಿಲ್ದಾಣ ವನ್ನು ಪೀಪಲ್ಸ್ ಪಾರ್ಕ್‌ನ ಜಾಗಕ್ಕೂ ವಿಸ್ತರಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ನಿಗಮದ ಅಧಿಕಾರಿಗಳ ಮತ್ತೊಂದು ಪ್ರಸ್ತಾವನೆ.
ಬೆಂಗಳೂರಿನಲ್ಲಿ ಕೆಂಪೇಗೌಡ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣ ಅಕ್ಕಪಕ್ಕದಲ್ಲಿ ಇರುವ ಕಾರಣ ಪ್ರಯಾಣಿಕರಿಗೆ ಅನುಕೂಲವಾದಂತೆ ಇಲ್ಲಿಯೂ ಬಳಕೆ ಮಾಡುತ್ತಾರೆ ಎನ್ನುವುದು ಅಧಿಕಾರಿಗಳ ಚಿಂತನೆ ಆಗಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ನಿಗಮದ ಮೂಲಗಳು ಹೇಳಿವೆ.
100 ಬಸ್‌ಗಳಿಗೆ ಬೇಡಿಕೆ: ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಮೇಲೆ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆ ಯಾಗಿರುವುದರಿಂದ ಬಸ್‌ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಮೈಸೂರು ಗ್ರಾಮಾಂತರಕ್ಕೆ 60, ನಗರ ವಿಭಾಗಕ್ಕೆ 40 ಸೇರಿ 100 ಬಸ್‌ಗಳಿಗಾಗಿ ಬೇಡಿಕೆ ಸಲ್ಲಿಸಲಾಗಿದೆ.
ಕೊರೊನಾ ಸಂದರ್ಭದಲ್ಲಿ ಕೆಲವು ಮಾರ್ಗ ಗಳಲ್ಲಿ ಓಡಾಡುತ್ತಿದ್ದ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಆದರೆ, ಈಗ ಗ್ರಾಮಸ್ಥರು ಮತ್ತು ಜನ ಪ್ರತಿನಿಧಿಗಳಿಂದ ಮತ್ತೆ ಕಾರ್ಯಾಚರಣೆ ಮಾಡುವಂತೆ ಒತ್ತಡಗಳು ಬರುತ್ತಿವೆ. ಹೀಗಾಗಿ, ನೂರು ಬಸ್‌ಗಳ ಬೇಡಿಕೆ ಜತೆಗೆ ದೈನಂದಿನ ಕಾರ್ಯಾಚರಣೆಗೆ ಗ್ರಾಮಾಂತರ ವಿಭಾಗಕ್ಕೆ 361 ಜನ ಚಾಲನಾ, 229 ತಾಂತ್ರಿಕ ಸಿಬ್ಬಂದಿ, ನಗರ ಸಾರಿಗೆಗೆ 201 ಜನ ಚಾಲನಾ, 214 ತಾಂತ್ರಿಕ ಸಿಬ್ಬಂದಿ ಒದಗಿಸುವಂತೆ ಕೇಂದ್ರ ಕಚೇರಿಗೆ ಪ್ರಸ್ತಾ ವನೆಸಲ್ಲಿಸಲಾಗಿದೆ. ಪ್ರಯಾಣಿಕರ ಬೇಡಿಕೆಗಳಿಗೆ ಅನುಗುಣವಾಗಿ ಸಾರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಸ್ಥಗಿತಗೊಳಿಸಿರುವ ನಗರ ಸಾರಿಗೆ ವಿಭಾಗದ ಬನ್ನಿಮಂಟಪ ಘಟಕವನ್ನು ಪುನಾರಂ ಭಿಸಲು ಕೂಡ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅನುಮೋದನೆಗಾಗಿ ಕೆಎಸ್‌ಆಟಿಸಿಯಿಂದ ಎರಡು ಪ್ರಸ್ತಾವನೆ ಸಲ್ಲಿಕೆ
ಪೀಪಲ್ಸ್ ಪಾರ್ಕ್‌ಗೆ ಸೇರಿದ 3.5 ಎಕರೆ ಜಾಗ ಪಡೆಯಲು ಚಿಂತನೆ
ಬನ್ನಿಮಂಟಪದ ಕೆಎಸ್‌ಆರ್‌ಟಿಸಿ ಡಿಪೊದಲ್ಲಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ
ಶೀಘ್ರದಲ್ಲೇ ಸಚಿವರಿಂದ ಸಭೆ ಸಾಧ್ಯತೆ: ಮೈಸೂರಿನ ಸಬ್ ಅರ್ಬನ್ ಬಸ್ ನಿಲ್ದಾಣದ ಜಾಗ ಇಕ್ಕಟ್ಟಾಗಿರುವ ಕಾರಣಕ್ಕೆ ಬನ್ನಿಮಂಟಪದ ಡಿಪೊ ಜಾಗ ಅಥವಾ ಪೀಪಲ್ಸ್ ಪಾರ್ಕ್‌ನ ಮೂರೂವರೆ ಎಕರೆ ಜಾಗ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬನ್ನಿಮಂಟಪಕ್ಕೆ ಸ್ಥಳಾಂತರಿಸಿದರೆ ಆಗುವ ಅನುಕೂಲ- ಅನನುಕೂಲದ ಬಗ್ಗೆ ಚರ್ಚಿಸಲಾಗುತ್ತಿದೆ. ಶೀಘ್ರದಲ್ಲೇ ಸಾರಿಗೆ ಸಚಿವರು ಸಭೆ ನಡೆಸಲಿದ್ದಾರೆ.
-ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ ಆರ್‌ಟಿಸಿ ಮೈಸೂರು ಗ್ರಾಮಾಂತರ ವಿಭಾಗ,