Mysore
15
broken clouds

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಮೈಸೂರು-ನಂಜನಗೂಡು ಹೆದ್ದಾರಿಗೆ ಕಾಯಕಲ್ಪ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 2 ಕೆಳಸೇತುವೆ, 5 ಮೇಲ್ಸೇತುವೆಗಳ ನಿರ್ಮಾಣ

ಶ್ರೀಧರ್ ಆರ್.ಭಟ್
ನಂಜನಗೂಡು: ನಂಜನಗೂಡು-ಮೈಸೂರು ಮಧ್ಯದ ರಾಷ್ಟ್ರೀಯ ಹೆದ್ದಾರಿಗೆ ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಮೂಲಕ ಕಾಯಕಲ್ಪ ದೊರೆಯುತ್ತಿದೆ.

ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೭೬೬ಕ್ಕೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ೧೨೭ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಲಾಗುತ್ತಿದೆ.

ಮೈಸೂರು-ನಂಜನಗೂಡು ಮಧ್ಯದ ಚತುಷ್ಪಥ ರಸ್ತೆಯಲ್ಲಿ ಪ್ರತಿದಿನ ೩೦ ಸಾವಿರಕ್ಕೂ ಹೆಚ್ಚು ವಾಹನ ಗಳು ಸಂಚರಿಸುತ್ತಿದ್ದು, ಹಿಂದೆ ಆಗಿರುವ ಅಪಘಾತ ಗಳು ಮುಂದೆ ಆಗಬಹುದಾದ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡ ಹೆದ್ದಾರಿ ಪ್ರಾಧಿಕಾರ ಆರು ಕಡೆ ಸುರಕ್ಷತಾ ವಲಯವನ್ನು ಈಗಾಗಲೇ ಗುರುತಿಸಿದ್ದು, ಅಲ್ಲಿ ೧೨೭ ಕೋಟಿ ರೂ. ವೆಚ್ಚದಲ್ಲಿ ಕೆಳಸೇತುವೆ ಮತ್ತು ಮೇಲ್ಸೇತುವೆ ನಿರ್ಮಿಸಲು ವರದಿ ಸಿದ್ಧಪಡಿಸಿತ್ತು.

ಆ ವರದಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, ಈ ಕಾಮಗಾರಿಯಿಂದಾಗಿ ವಾಹನ ದಟ್ಟಣೆಗೆ ಕಡಿವಾಣ ಬೀಳುವುದರೊಂದಿಗೆ ಈ ಹೆದ್ದಾರಿಯಲ್ಲಿ ಸರಣಿ ಅಪಘಾತಗಳನ್ನು ತಪ್ಪಿಸಲು ಸಾಧ್ಯವಾಗಬಹುದು ಎನ್ನಲಾಗಿದೆ.

ಎಲ್ಲೆಲ್ಲಿ ಕೆಳಸೇತುವೆ? : ನಂಜನಗೂಡು ತಾಲ್ಲೂಕಿನ ಎಲಚಗೆರೆ ಹಾಗೂ ಕಳಲೆ ಗೇಟ್ ಬಳಿ ನಾಲ್ಕು ಪಥದ ಕೆಳಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಉಳಿದಂತೆ ಹೊಸಹಳ್ಳಿ ಹಾಗೂ ಕಡಕೊಳ ಮತ್ತು ಸಚ್ಚಿದಾನಂದ ಆಶ್ರಮದ ಸಮೀಪ ಸ್ಥಳಾವಕಾಶ ಕಡಿಮೆ ಇರುವುದರಿಂದ ಅಲ್ಲಿ ಎರಡು ಪಥದ ಮೇಲ್ಸೇತುವೆ ನಿರ್ಮಿಸಲು ಉದ್ದೇಶಿಸಲಾ ಗಿದೆ. ಈ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತ ಸಂಚಾರಕ್ಕೆ ಆದ್ಯತೆ ನೀಡಲಾಗಿದೆ.

Tags:
error: Content is protected !!