Mysore
19
overcast clouds
Light
Dark

ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ಚುರುಕು

ಸುಣ್ಣ-ಬಣ್ಣ ಬಳಿಯುವ ಕೆಲಸ ಬಿರುಸು; ಸಸ್ಯಕಾಶಿಗೂ ಸಿದ್ಧತೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆ ಆವರಣದಲ್ಲಿ ಸಿದ್ಧತಾ ಕಾರ್ಯ ಚುರುಕುಗೊಂಡಿದ್ದು, ಸುಣ್ಣ-ಬಣ್ಣ ಬಳಿಯುವ ಕೆಲಸ ಶುರುವಾಗಿದೆ.

ಅರಮನೆ ಮುಂಭಾಗದ ಕೆಲವು ಪ್ರದೇಶಗಳಲ್ಲಿ ಇಂಟರ್‌ ಲಾಕ್ ಬದಲಿಸುವ ಕಾರ್ಯಕ್ಕೂ ಕೈ ಹಾಕಲಾಗಿದೆ. ಆರಂಭಿಕ ಹಂತದಲ್ಲಿಯೇ ಅರಮನೆ ಸುತ್ತಲೂ ಇರುವ ಕಾಂಪೌಂಡ್, ದ್ವಾರದ ಗೋಡೆಗಳಿಗೆ ಬಣ್ಣ ಬಳಿಯುವ ಕಾರ್ಯ ಬಿರುಸಿನಿಂದ ಸಾಗಿದೆ. ಅ.3ರಿಂದ 12ರವರೆಗೆ ನವರಾತ್ರಿ ಮಹೋತ್ಸವ ಜರುಗಲಿದ್ದು, ಅಷ್ಟರೊಳಗೆ ಅರಮನೆಯಲ್ಲಿ ಸಿದ್ಧತಾ ಕಾರ್ಯ ಪೂರ್ಣಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಕಾರ್ಯಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ.

ಸಸ್ಯಕಾಶಿಗೂ ಸಿದ್ಧತೆ: ನವರಾತ್ರಿ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಸಂಭ್ರಮ ಮನೆ ಮಾಡಲಿದ್ದು, ಅರಮನೆ ಆವರಣದಲ್ಲಿರುವ ವಿವಿಧ ಪಾರ್ಕ್‌ಗಳಲ್ಲೂ ಬಣ್ಣ-ಬಣ್ಣದ ಹೂವಿನ ಗಿಡಗಳು ತಲೆ ಎತ್ತಲಿವೆ. ಈಗಾಗಲೇ ಅರಮನೆಯ ತೋಟಗಾರಿಕಾ ಸಿಬ್ಬಂದಿ ನೂರಾರು ಗಿಡಗಳನ್ನು ಬೆಳೆಸಿದ್ದು, ಅವುಗಳನ್ನು ಪಾಲನೆ ಮಾಡುತ್ತಿದ್ದಾರೆ.

ವಿವಿಧ ತಳಿಯ, ಬಣ್ಣ-ಬಣ್ಣದ ಆಕರ್ಷಕ ಹೂವಿನ ಗಿಡ ಗಳನ್ನು ಹೂಕುಂಡ ಗಳಲ್ಲಿ ಬೆಳೆಸಲಾಗಿದೆ. ಹೂವಿನ ಗಿಡಗಳಿಗೆ ಅಂತಿಮ ಹಂತದ ಪಾಲನೆ ಮಾಡಲಾಗುತ್ತಿದ್ದು, 15 ದಿನಗಳ ನಂತರ ಹೂಕುಂಡಗಳನ್ನು ಅರಮನೆ ಆವರಣದ ಪಾಕ್ ೯ಗಳಲ್ಲಿ ವಿವಿಧ ಆಕಾರದಲ್ಲಿ ಜೋಡಣೆ ಮಾಡಲಾಗುತ್ತದೆ.