Mysore
24
clear sky

Social Media

ಭಾನುವಾರ, 12 ಏಪ್ರಿಲ 2026
Light
Dark

ಮೇಟಗಳ್ಳಿ : ಹಾವು-ಚೇಳುಗಳದ್ದೇ ದರ್ಬಾರು

ಮೈಸೂರು : ನಗರದ ಜನ ವಸತಿ ಹಾಗೂ ಕೈಗಾರಿಕಾ ಪ್ರದೇಶವಾಗಿರುವ ಮೇಟಗಳ್ಳಿ ಬಡಾವಣೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾವು-ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದ್ದು, ಬೇಸಿಗೆಯ ಈ ರಜಾ ದಿನಗಳಲ್ಲೂ ಮಕ್ಕಳು ಮನೆಯ ಹೊರಗೆ ಆಟವಾಡಲು, ಮಹಿಳೆ ಯರು,ಹಿರಿಯ ನಾಗರಿಕರು ವಾಯು ವಿಹಾರ ಮಾಡಲು ಭಯದಲ್ಲೇ ಮನೆಯ ಹೊರಗೆ ಕಾಲಿಡುವಂತಾಗಿದೆ.

ಈ ಪ್ರದೇಶದಲ್ಲಿನ ಖಾಲಿನಿವೇಶನಗಳಲ್ಲಿ ಹೊಂಗೆ, ಮಾವು,ಬೇವು ಸೇರಿದಂತೆ ವಿವಿಧ ಬಗೆ ಯ ಮರಗಳು ಸಮೃದ್ಧವಾಗಿ ಬೆಳೆದುನಿಂತಿದ್ದರೆ, ಇಲ್ಲಿನ ಮಥುರಾ ಉದ್ಯಾನ, ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನ, ಶ್ರೀ ಮಾರಮ್ಮ ದೇವಸ್ಥಾನದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಗಿಡ-ಗಂಟಿಗಳು ಸೊಂಪಾಗಿ ಬೆಳೆದು ನಿಂತಿದ್ದು, ಹಾವು-ಚೇಳುಗಳ ಆವಾಸ ಸ್ಥಾನವಾಗಿದೆ. ಹಾವುಗಳು ಕಂಡ ತಕ್ಷಣ ಇಲ್ಲಿನ ನಾಗರಿಕರು ಉರಗ ತಜ್ಞ ಸ್ನೇಕ್‌ಶ್ಯಾಂ ಅವರಿಗೆ ಕರೆ ಮಾಡುತ್ತಾರೆ. ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸುವ ಸ್ನೇಕ್ ಶ್ಯಾಂ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆಬಿಡುತ್ತಾರೆ.

ಈ ಕಾರ್ಯದಲ್ಲಿ ಸ್ನೇಕ್‌ಶ್ಯಾಂ ಅವರ ಮಗ ಸೂರ್ಯ ಕೀರ್ತಿಕೂಡ ಕೈಜೋಡಿಸುತ್ತಾರೆ. ಜೊತೆಗೆ ಈ ಭಾಗದ ಜನರೂ ಈಗೀಗ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದು, ಆಗಾಗ್ಗೆ ಕಂಡುಬರುವ ಹಾವುಗಳನ್ನು ಸ್ನೇಕ್‌ಶ್ಯಾಂ ಹಿಡಿಯುವುದನ್ನು ನೋಡಿ ಇಲ್ಲಿನ ಜನರು ಕಲಿತು ಕೊಂಡಿದ್ದಾರೆ. ಆ ಪೈಕಿ ಪಿ. ಮಂಜುನಾಥ್ ಕೂಡ ಒಬ್ಬರು. ಸಂಬಂಧ ಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಹಾವು ಗಳಉಪಟಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ಸ್ಥಳೀಯರಿಗೆ,ಅದರಲ್ಲೂ ವಿಶೇಷವಾಗಿ ಆಟವಾಡುವ ಮಕ್ಕಳಿಗೆ ಅನುಕೂಲ ಕಲ್ಪಿಸಿ ಕೊಡಬೇಕು ಎನ್ನುತ್ತಾರೆ ಮೇಟಗಳ್ಳಿನಿವಾಸಿ ಪಿ.ಮದನ್.

ರಸ್ತೆ ಬದಿ ಕಸದ ರಾಶಿ
ಮಥುರಾ ಉದ್ಯಾನ ಆವರಣದ ಗೋಡೆಗೆ ಹೊಂದಿಕೊಂಡಂತೆಯೇ ಹಸಿ ತ್ಯಾಜ್ಯ, ಒಣ ಕಸ ಸುರಿಯಲಾಗುತ್ತಿದೆ. ಮಥುರಾ ನಗರ ೩ನೇ ‘ಬಿ’ ಅಡ್ಡರಸ್ತೆ ನಾಮ-ಲಕದ ಬಳಿಯೂ ಕಸ ಸುರಿಯಲಾಗಿದೆ. ಮಥುರಾ ಉದ್ಯಾನದ
ಒಳಭಾಗದಲ್ಲಿಯೂ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ರಸ್ತೆ ಬದಿಯೂ ಕಸದ ರಾಶಿ ಇದೆ. ಕಸದ ರಾಶಿಯಿಂದಾಗಿ ಶಾಲೆಯಲ್ಲಿ ಮಕ್ಕಳ ಬಿಸಿಯೂಟ ನೀಡಲು ಆಗದಂತೆ
ಅನೈರ್ಮಲ್ಯ ತಾಂಡವವಾಡುತ್ತಿದೆ. ಮೇಟಗಳ್ಳಿಯಲ್ಲಿ ಹಾದು ಹೋಗಿರುವ ರೈಲು ಮಾರ್ಗದ ಇಕ್ಕೆಲಗಳಲ್ಲೂ ರಾಶಿ ರಾಶಿ ಕಸ ಬಿದ್ದಿದೆ. ರಸ್ತೆಯ ಇಕ್ಕೆಲಗಳಲ್ಲಿ ಬಿದ್ದಿರುವ ಕಸದಿಂದಾಗಿ ಪಾದಚಾರಿಗಳು, ವಾಯು ವಿಹಾರಿಗಳು ಕಿರಿ ಕಿರಿ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಕಸದ ರಾಶಿ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ. ಇದರ ಜತೆ ಕಸವನ್ನು ಎಲ್ಲೆಂದರಲ್ಲಿ ಹಾಕದಂತೆ ನಿರ್ಬಂಧ ವಿಧಿಸುವಂತೆಯೂ ಒತ್ತಾಯಿಸುತ್ತಾರೆ.

Tags:
error: Content is protected !!