Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ನಿವಾಸಿಗಳ ನೆಮ್ಮದಿ ಕೆಡಿಸಿದ ಮ್ಯಾನ್‌ಹೋಲ್‌ಗಳು

ಪ್ರಶಾಂತ್ ಎಸ್.

ಉಕ್ಕಿ ಹರಿಯುತ್ತಿರುವ ಒಳಚರಂಡಿಯಿಂದ ಸಮಸ್ಯೆ; ಅಗ್ರಹಾರದ ರಾಮಾನುಜ ರಸ್ತೆಯ ೧೫ನೇ ಕ್ರಾಸ್ ಜನರ ಪರದಾಟ

ಫೋನ್ ಮಾಡಿದರೂ ಸ್ಪಂದಿಸದ ನಗರಪಾಲಿಕೆ ಅಧಿಕಾರಿಗಳು

ಮ್ಯಾನ್‌ಹೋಲ್ ನೀರಿನಿಂದ ಕೆರೆಯಂತಾದ ಮನೆ ಆವರಣಗಳು

ಚರಂಡಿಗಳಲ್ಲಿ ಮಡುಗಟ್ಟಿ ನಿಂತ ನೀರಿನಲ್ಲಿ ಸೊಳ್ಳೆ ಸಂತಾನ

ಮೈಸೂರು: ‘ಸ್ವಚ್ಛ ನಗರಿ’ ಪಟ್ಟ ಅಲಂಕರಿಸಲು ಹೆಣಗಾಡುತ್ತಿರುವ ಮೈಸೂರು ನಗರಪಾಲಿಕೆಯ ಆಡಳಿತ ವರ್ಗ, ಪಾಲಿಕೆಯ ಕಣ್ಣಳತೆ ದೂರದಲ್ಲಿರುವ ರಾಮಾನುಜ ರಸ್ತೆಯ ೧೫ನೇ ಕ್ರಾಸ್‌ನಲ್ಲಿ ಉಕ್ಕಿ ಹರಿಯುತ್ತಿರುವ ಮ್ಯಾನ್‌ಹೋಲ್ ದುರಸ್ತಿಪಡಿಸಲು ಮುಂದಾಗದಿರುವುದರಿಂದ ಮ್ಯಾನ್‌ಹೋಲ್‌ಗಳು ನಿವಾಸಿಗಳ ನೆಮ್ಮದಿ ಕೆಡಿಸಿದೆ.

ಅವೈಜ್ಞಾನಿಕ ಚರಂಡಿಗಳಿಂದ ಮೊದಲೇ ಇಲ್ಲಿ ತ್ಯಾಜ್ಯ ನೀರು ಸರಾಗವಾಗಿ ಹರಿಯುವುದಿಲ್ಲ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ಯುಜಿಡಿ ಮಾರ್ಗದಲ್ಲಿ ಹರಿಯುವ ಮಲಮೂತ್ರ ಮಿಶ್ರಿತ ಕೊಳಚೆ ನೀರು ಉಕ್ಕಿ ಹರಿಯುತ್ತಿರುವುದರಿಂದ ಇಡೀ ಬೀದಿ ದುರ್ವಾಸನೆ ಬೀರುತ್ತಿದೆ. ಇದರಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.

ಮೃತ್ಯುಕೂಪಗಳಾದ ಒಳಚರಂಡಿಗಳು: ಕೆಲವು ಮ್ಯಾನ್‌ಹೋಲ್‌ಗಳು ರಸ್ತೆಗಿಂತ ನಾಲ್ಕೈದು ಇಂಚು ಕೆಳಗಿದ್ದರೆ ಕೆಲವು ಕಡೆಗಳಲ್ಲಿ ರಸ್ತೆಗಿಂತ ಒಂದು ಅಡಿಯಷ್ಟು ಮೇಲೆ ನಿರ್ಮಿಸಲಾಗಿದೆ. ಇದರಿಂದಾಗಿ ಪಾದಚಾರಿಗಳು, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ರಾತ್ರಿ ವೇಳೆ ಪಾದಚಾರಿಗಳು ಹಾಗೂ ವಾಹನ ಸವಾರರು ಬಿದ್ದು ಕೈ-ಕಾಲು ಮುರಿದುಕೊಳ್ಳುವಂತಾಗಿದೆ.

ಅಧಿಕಾರಿಗಳ ವಿರುದ್ಧ ಅಸಮಾಧಾನ: ನಗರದ ಮೂರು ಕಡೆಗಳಲ್ಲಿ ಯುಜಿಡಿ ನೀರು ಸಂಸ್ಕರಿಸುವ ಘಟಕ ನಿರ್ಮಾಣವಾಗಿದೆ. ಈ ಘಟಕಗಳು ಎಷ್ಟರಮಟ್ಟಿಗೆ ಕಾರ್ಯನಿರ್ವಹಿಸುತ್ತಿವೆ? ಈ ಘಟಕಗಳಲ್ಲಿ ಸಂಸ್ಕರಣೆಗೊಂಡ ನೀರನ್ನು ಎಲ್ಲಿಗೆ ಹರಿಸಲಾಗುತ್ತಿದೆ ಎಂಬುದರ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮೂಲಕ, ಖುದ್ದು ಕಚೇರಿಗೆ ತೆರಳಿ ವಿಚಾರಿಸಿದರೂ ಅಽಕಾರಿಗಳು ಮಾಹಿತಿ ನೀಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

” ಮಳೆ ಸಮಯದಲ್ಲಿ ರಸ್ತೆ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಲು ಒಳಚರಂಡಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಸಹಜವಾಗಿ ನೀರು ಮ್ಯಾನ್‌ಹೋಲ್‌ಗಳಲ್ಲಿನ ಕೊಳಚೆ ನೀರಿನೊಂದಿಗೆ ಮಿಶ್ರಣಗೊಂಡು ರಸ್ತೆ ಮೇಲೆ ಹರಿಯುತ್ತದೆ. ಒಳಚರಂಡಿ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುತ್ತೇವೆ. ನಗರಪಾಲಿಕೆ ಇಂಜಿನಿಯರ್‌ಗಳು ಅದರ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಲಾಗುವುದು.”

ಶೇಖ್ ತನ್ವೀರ್ ಆಸೀಫ್, ನಗರಪಾಲಿಕೆ ಆಯುಕ್ತ

” ಯುಜಿಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿದು ಯುಜಿಡಿ ನೀರು ಸಂಸ್ಕರಣಾ ಘಟಕಗಳನ್ನು ಹೆಚ್ಚಿಸಿ, ಈ ನೀರನ್ನು ಮರುಬಳಕೆ ಮಾಡಿಕೊಳ್ಳಬೇಕು. ಯುಜಿಡಿ ಸಮಸ್ಯೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.”

ಸಿದ್ದರಾಜು, ರಾಮಾನುಜ ರಸ್ತೆ ನಿವಾಸಿ

Tags:
error: Content is protected !!