Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮ.ಬೆಟ್ಟ: ೩.೩೭ ಕೋಟಿ ರೂ. ಆದಾಯ

ಮಹಾದೇಶ್‌ ಎಂ ಗೌಡ 

ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ಐದು ದಿನಗಳ ಅವಧಿಯಲ್ಲಿ ೩.೩೭ ಕೋಟಿ ರೂ. ಆದಾಯ ಬಂದಿದೆ.

ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಎಣ್ಣೆ ಮಜ್ಜನ, ಅಮಾವಾಸ್ಯೆ, ಮಹಾರಥೋತ್ಸವದ ದಿನಗಳಲ್ಲಿ ಹೆಚ್ಚಿನ ಭಕ್ತಾದಿಗಳು ಆಗಮಿಸಿ ೧,೨೯೮ ಚಿನ್ನದ ರಥೋತ್ಸವ, ೧೨೨ ಬೆಳ್ಳಿ ರಥೋತ್ಸವ, ೮,೮೮೯ ಹುಲಿ ವಾಹನ, ೫೩೦ ರುದ್ರಾಕ್ಷಿ ಮಂಟಪ, ೧,೩೧೫ ಬಸವ ವಾಹನ ಉತ್ಸವಗಳನ್ನು ನೆರವೇರಿಸಿದ್ದಾರೆ. ಉತ್ಸವಗಳಿಂದ ೯೪,೨೪,೩೪೭ ರೂ. ವಿವಿಧ ಸೇವೆಗಳಿಂದ ೬,೫೮,೬೦೦ ರೂ., ಪ್ರಸಾದದಿಂದ ೯,೩೧,೨೫೦ ರೂ. ಸೇರಿ ದಂತೆ ವಿವಿಧ ಸೇವೆಗಳಿಂದ ಒಟ್ಟು ೩,೩೭, ೦೮,೨೪೭ ರೂ. ಸಂದಾಯವಾಗಿದೆ.

ಫೆ.೨೫ರಿಂದ ಮಾ.೧ರವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಬಾರಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೇವಸ್ಥಾನದ ಆವರಣ, ಮುಖ್ಯದ್ವಾರ, ಜಡೇಕಲ್ಲು ಮಂಟಪ, ಇನ್ನಿತರ ಕಡೆಗಳಲ್ಲಿ ವಿನೂತನ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ದಾನಿಗಳು ದೇವಾಲಯದ ಒಳಭಾಗದಲ್ಲಿ ವಿವಿಧ ಬಗೆಯ ಫಲ ಪುಷ್ಪಗಳಿಂದ ಆಕರ್ಷಣೀ ಯವಾಗಿ ಅಲಂಕಾರ ಮಾಡಿದ್ದರು.

ಮುಂದಿನ ತಿಂಗಳು ನಡೆಯಲಿರುವ ಯುಗಾದಿ ಜಾತ್ರಾ ಮಹೋತ್ಸವಕ್ಕೆ ಮ.ಬೆಟ್ಟಕ್ಕೆ ತಮಿಳುನಾಡು ಹಾಗೂ ರಾಜ್ಯದಿಂದ ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವುದರಿಂದ ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ ತಿರುಪತಿಗೂ ತೆರಳಿ, ಅಲ್ಲಿನ ವ್ಯವಸ್ಥೆಯ ಬಗ್ಗೆ ಟಿಟಿಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಬಂದಿದ್ದೇವೆ. ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಡಾ.ಶ್ರೀ ಶಾಂತ ಮಲ್ಲಿ ಕಾರ್ಜುನ ಸ್ವಾಮಿಗಳ ಮಾರ್ಗದರ್ಶನದಲ್ಲಿ ಬೆಟ್ಟವನ್ನು ಅಭಿವೃದ್ಧಿಪಡಿಸಲು ಪ್ರಾಧಿಕಾರವು ಬದ್ಧವಾಗಿದೆ ಎಂದು ಶ್ರೀ ಮಲೆ ಮಾದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ.

Tags:
error: Content is protected !!