Mysore
17
few clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಮ.ಬೆಟ್ಟ: ೩ ದಿನಗಳಲ್ಲಿ ೧.೫೨ ಕೋಟಿ ರೂ. ಆದಾಯ

ಅಕ್ಷಯ ತದಿಗೆ ಅಮಾವಾಸ್ಯೆ ಜಾತ್ರೆ ಪ್ರಯುಕ್ತ ಆಗಮಿಸಿದ್ದ ಲಕ್ಷಾಂತರ ಜನರು

ಮಹಾದೇಶ್ ಎಂ.ಗೌಡ

ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಅಕ್ಷಯ ತದಿಗೆ ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಆಗಮಿಸಿದ್ದ ಲಕ್ಷಾಂತರ ಭಕ್ತಾದಿಗಳಿಂದ ೩ ದಿನಗಳ ಅವಧಿಯಲ್ಲಿ ೧.೫೨ ಕೋಟಿ ರೂ. ಆದಾಯ ಬಂದಿದೆ.

ಅಕ್ಷಯ ತದಿಗೆ ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ೧,೧೯೨ ಚಿನ್ನದ ರಥೋತ್ಸವ, ೭೦ ಬೆಳ್ಳಿ ರಥೋತ್ಸವ, ೨,೭೬೭ ಹುಲಿ ವಾಹನ, ೨೪೧ ರುದ್ರಾಕ್ಷಿ ಮಂಟಪ, ೭೭೬ ಬಸವ ವಾಹನ ಉತ್ಸವಗಳನ್ನು ನೆರವೇರಿಸಿದ್ದಾರೆ.

ಉತ್ಸವಗಳಿಂದ ೪೮,೫೮,೭೧೨ ರೂ., ವಿವಿಧ ಸೇವೆಗಳಿಂದ ೫,೩೮,೦೦೦ ರೂ., ಮಿಶ್ರ ಪ್ರಸಾದದಿಂದ ೧೧,೩೧,೨೫೦ ರೂ., ಮಾಹಿತಿ ಕೇಂದ್ರದಿಂದ ೫,೩೭,೩೦೦ ರೂ., ಲಾಡು ಮಾರಾಟದಿಂದ ೩೭,೫೧,೦೫೦ ರೂ., ಕಲ್ಲು ಸಕ್ಕರೆ ಮಾರಾಟದಿಂದ ೨೮,೪೪೦ ರೂ., ತೀರ್ಥ ಪ್ರಸಾದದಿಂದ ೧,೧೩,೮೪೦ ರೂ., ಬ್ಯಾಗ್‌ಗಳ ಮಾರಾಟದಿಂದ ೧೧,೩೧,೨೫೦ ರೂ., ಪುದುವಟ್ಟುವಿನಿಂದ ೯೪,೬೪೫ ರೂ., ಅಕ್ಕಿ ಸೇವೆಯಿಂದ ೧,೪೩,೦೦೦ ರೂ., ಜನವನ ವಾಹನದಿಂದ ೧,೨೫೦ ರೂ., ಇ-ಹುಂಡಿಯಿಂದ ೫೩,೫೩೭ ರೂ. ಸೇರಿ ಒಟ್ಟು ೧,೫೨,೭೫,೩೪೪ ರೂ. ಆದಾಯ ಬಂದಿದೆ.

ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೇವಸ್ಥಾನದ ಆವರಣ, ಮುಖ್ಯದ್ವಾರ ಜಡೇಕಲ್ಲು ಮಂಟಪ, ಇನ್ನಿತರ ಕಡೆಗಳಲ್ಲಿ ವಿನೂತನ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಮಾವಾಸ್ಯೆ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಇದನ್ನು ಕೂಡ ಮುಂದುವರಿಸಲಾಗಿತ್ತು.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಇರುವುದರಿಂದ ಪೋಷಕರು ಹಾಗೂ ಮಕ್ಕಳು ಮಲೆ ಮಹದೇಶ್ವರ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅಕ್ಷಯ ತದಿಗೆ ಅಮಾವಾಸ್ಯೆ ಜಾತ್ರಾ ಮಹೋತ್ಸವ ಪ್ರಯುಕ್ತ ಮ.ಬೆಟ್ಟಕ್ಕೆ ಲಕ್ಷಾಂತರ ಜನರು ಭೇಟಿ ನೀಡಿದ್ದರು. ಮಹಾಶಿವರಾತ್ರಿ ಜಾತ್ರೆಗೆ ಬರುತ್ತಿದ್ದ ಭಕ್ತರಂತೆ ಈ ಅಮಾವಾಸ್ಯೆಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು ಎಂದು ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ.

Tags:
error: Content is protected !!