Mysore
19
clear sky

Social Media

ಶುಕ್ರವಾರ, 30 ಜನವರಿ 2026
Light
Dark

ಮಡಿಕೇರಿ: ಪ್ರಗತಿ ಸಾಧಿಸಿದ ಗ್ಯಾರಂಟಿ ಯೋಜನೆ

ಯೋಜನೆ ಸದುಪಯೋಗಪಡಿಸಿಕೊಂಡ ಅರ್ಹ ಫಲಾನುಭವಿಗಳು; ಗ್ರಾಪಂ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆಗೆ ನಿರ್ಧಾರ 

ಮಡಿಕೇರಿ: ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳು ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ಪ್ರಗತಿ ಸಾಧಿಸಿವೆ. ಆ ಮೂಲಕ ಅರ್ಹ ಫಲಾನುಭವಿಗಳು ಯೋಜನೆ ಸದುಪಯೋಗಪಡಿಸಿಕೊಂಡಿದ್ದಾರೆ.

ಗೃಹಲಕ್ಷ್ಮಿ ಯೋಜನೆ: ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು ೩೧,೮೧೧ ಪಡಿತರ ಚೀಟಿ ಇದ್ದು, ಗೃಹಲಕ್ಷ್ಮೀ ಯೋಜನೆಯಡಿ ೩೧,೪೮೯ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ೩೨೨ ಪಡಿತರ ಚೀಟಿ ನೋಂದಣಿಗೆ ಬಾಕಿ ಇದ್ದು, ಜೂನ್ ಮಾಹೆಗೆ ೩೦,೫೩೯ ಪಡಿತರ ಚೀಟಿ ಫಲಾನುಭವಿಗಳಿಗೆ ಶಿಶು ಅಭಿವೃದ್ದಿ ಅಧಿಕಾರಿ ಮಡಿಕೇರಿಯವರಿಂದ ನೇರವಾಗಿ ಡಿಬಿಟಿ ಮೂಲಕ ಹಣ ಮಂಜೂರಾಗಿದೆ. ಒಟ್ಟು ೧೩,೭೬೪ ಮಂದಿಗೆ ಹಣ ಪಾವತಿಯಾಗಲು ಬಾಕಿ ಇದ್ದು, ಐ.ಟಿ, ಜಿ.ಎಸ್.ಟಿ. ಪಾವತಿದಾರ ರೆಂದು ೭೮೪ ಅರ್ಜಿಗಳು ತಿರಸ್ಕೃತಗೊಂಡಿವೆ. ಎನ್‌ಪಿಸಿಐ, ಇಕೆವೈಸಿ ಮಾಡಿಸಲು ೧೬೬ ಫಲಾನುಭವಿಗಳು ಬಾಕಿ ಇದ್ದಾರೆ.

ಜೂನ್ ೨೦೨೫ರ ಮಾಹೆಯ ಒಟ್ಟು ೧೫,೩೭೬ ಎಸ್‌ಸಿ ಫಲಾನುಭವಿಗಳಿಗೆ ರೂ.೩,೦೭,೫೨,೦೦೦ ಹಾಗೂ ೮,೨೩೩ ಎಸ್.ಟಿ. ಫಲಾನುಭವಿಗಳಿಗೆ ರೂ.೧,೬೪,೬೬,೦೦೦ ಗಳನ್ನು ಡಿ.ಬಿ.ಟಿ. ಲಾಗ್ ಇನ್ ಮೂಲಕ ಬ್ಯಾಂಕ್ ಮೋಡ್‌ನಲ್ಲಿ ಧನಸಹಾಯ ಪಾವತಿಸಲು ಅನುದಾನ ಬಿಡುಗಡೆಯಾಗಿದೆ.

ಇದರಲ್ಲಿ ಡಿಬಿಟಿ ಲಾಗ್ ಇನ್ ನಿಂದ ಬ್ಯಾಂಕ್ ಮೋಡ್ ಮೂಲಕ ಎನ್‌ಪಿಸಿಐ ಸಕ್ಸಸ್ ಆದ ಒಟ್ಟು ೧೪,೯೮೬ ಎಸ್‌ಸಿ ಫಲಾನುಭವಿಗಳಿಗೆ ರೂ.೨,೯೯,೭೨,೦೦೦ಗಳು ಹಾಗೂ ೭೯೦೮ ಎಸ್.ಟಿ ಫಲಾನುಭವಿಗಳಿಗೆ ರೂ.೧೫,೮೧,೬೦೦ ಡಿ.ಬಿ.ಟಿ.ಲಾಗ್ ಇನ್ ನಿಂದ ಜಂಟಿ ನಿಯಂತ್ರಕರು, ಲೆಕ್ಕ ಶಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರಿಗೆ ಅಪ್ರೂವ್ ಮಾಡಲಾಗಿದೆ.

ಶಕ್ತಿ ಯೋಜನೆ: ಶಕ್ತಿ ಯೋಜನೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು ೧,೨೫,೫೩,೧೪೨ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೨,೮೯,೮೩೩ ಹೆಣ್ಣು ಮಕ್ಕಳು ಹಾಗೂ ಶಾಲಾ- ಕಾಲೇಜು ವಿದ್ಯಾರ್ಥಿನಿಯರು ನಿಗಮದ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆ ಪಡೆದಿದ್ದಾರೆ. ಸರಾಸರಿ ೧೫,೮೧೬ ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿದ್ದಾರೆ. ಒಟ್ಟು ಮೊತ್ತ ೫೪,೧೯,೧೫,೬೫೭ ಸಂಸ್ಥೆಗೆ ಆದಾಯ ಬಂದಿದ್ದು, ಸರಾಸರಿ ಒಂದು ದಿನದ ಆದಾಯ ರೂ.೬,೬೭,೩೮೪ ದೊರೆತಿದೆ. ಯುವನಿಧಿ ಯೋಜನೆ: ೨೦೨೩-೨೦೨೪ರಲ್ಲಿ ಪದವಿ ಮತ್ತು ಡಿಪ್ಲೊಮಾ ಉತ್ತೀರ್ಣರಾಗಿ ಕನಿಷ್ಠ ೬ ತಿಂಗಳ ಅವಧಿಯವರೆಗೆ ಸರ್ಕಾರಿ, ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೆ ಇರುವವರು ಈ ಯೋಜನೆಗೆ ಅರ್ಹರಾಗಿದ್ದಾರೆ. ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಽ ಯೋಜನೆಯಲ್ಲಿ ಜೂನ್ ಮಾಹೆವರೆಗೆ ೪೪೦ ಜನ ನೋಂದಣಿಯಾಗಿದ್ದು, ಜೂನ್ ಮಾಹೆವರೆಗೆ ಫಲಾನುಭವಿಗಳಿಗೆ ರೂ.೯೨,೫೦,೫೦೦ ಹಣ ಬಿಡುಗಡೆಯಾಗಿದೆ.

ಗೃಹಜ್ಯೋತಿ ಯೋಜನೆ: ಗೃಹಜ್ಯೋತಿ ಯೋಜನೆಯಡಿ ಮಡಿಕೇರಿ ತಾಲ್ಲೂಕಿನಲ್ಲಿ ಶೇ.೯೯.೩೦ ಶೇಕಡಾವಾರು ಪ್ರಗತಿಯಾಗಿದೆ. ತಾಲ್ಲೂಕಿನಲ್ಲಿ ೫೧,೮೫೬ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ೫೧,೪೯೪ ನೋಂದಣಿಗೊಂಡ ಅರ್ಜಿಗಳಿವೆ. ೩೬೨ ಬಾಕಿ ಇರುವ ಸ್ಥಾವರಗಳಿದ್ದು, ೧೪೫.೬೫ ಲಕ್ಷ ಸಹಾಯಧನ ಇಲಾಖೆಗೆ ಬಂದಿದೆ.

ಅನ್ನಭಾಗ್ಯ ಯೋಜನೆ: ಮಡಿಕೇರಿ ತಾಲ್ಲೂಕಿನಲಿ ೭,೯೪೦ ಎಎವೈ ಫಲಾನುಭವಿಗಳು, ೨೨,೬೨೫ ಬಿಪಿಎಲ್ ಕಾರ್ಡ್ದಾರರು, ೧೩,೭೭೯ ಎಪಿಎಲ್ ಯೋಜನೆ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ೪೦೧ ಮಂದಿ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲಾಗಿದೆ.

” ಮಡಿಕೇರಿ ತಾಲ್ಲೂಕಿನಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇಲಾಖೆಗಳು ಉತ್ತಮ ಪ್ರಗತಿ ಸಾಧಿಸಿವೆ. ಮುಂದಿನ ದಿನಗಳಲ್ಲಿಯೂ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಸರ್ಕಾರದ ಮಹಾತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕಿದೆ. ಗ್ಯಾರಂಟಿ ಯೋಜನೆಗಳ ಮತ್ತಷ್ಟು ಪರಿಣಾಮಕಾರಿ ಅನುಷ್ಠಾನದ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆ ನಡೆಸಲಾಗುತ್ತದೆ.”

-ಮಂದ್ರೀರ ಮೋಹನ್ ದಾಸ್, ಮಡಿಕೇರಿ ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರು

Tags:
error: Content is protected !!