ಕೇಂದ್ರ ಸರ್ಕಾರ ಜಿಎಸ್‌ಟಿ(ಸರಕು ಮತ್ತು ಸೇವಾತೆರಿಗೆ)ಯನ್ನು ನಾಲ್ಕು ಹಂತದಿಂದ ಎರಡು ಹಂತಗಳಿಗೆ ಪರಿಷ್ಕರಣೆ ಮಾಡಿದ್ದು, ಸೆ.೨೨ರಿಂದಲೇ ಇದು ಜಾರಿಗೆ ಬರುವುದರಿಂದ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಕಡಿಮೆಯಾಗಿ ಜನ ಸಾಮಾನ್ಯರಿಗೆ ಇದರ ಸಂಪೂರ್ಣ ಪ್ರಯೋಜನ ದೊರೆಯಲಿದೆ.
ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಆಸ್ತಿ ನೋಂದಣಿ ತೆರಿಗೆ, ಬಸ್ ಪ್ರಯಾಣದರ , ಮೆಟ್ರೋ ಪ್ರಯಾಣದರ, ವಿದ್ಯುತ್ ದರಗಳನ್ನು ಇಳಿಸುವ ಮೂಲಕ ರಾಜ್ಯದ ಜನತೆಗೆ ಅನುಕೂಲ ಕಲ್ಪಿಸಬೇಕಾಗಿದೆ.
–ಬಿ.ಎಂ.ಭ್ರಮರಾಂಬ, ಕನಕದಾಸನಗರ, ಮೈಸೂರು





