Mysore
25
scattered clouds

Social Media

ಬುಧವಾರ, 15 ಜನವರಿ 2025
Light
Dark

ಉತ್ತಮ ಶಿಕ್ಷಕರನ್ನು ಇಲಾಖೆಯೇ ಗುರುತಿಸಲಿ

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರತಿ ವರ್ಷ ಸರ್ಕಾರದ ವತಿಯಿಂದ ಉತ್ತಮ ಶಿಕ್ಷಕರನ್ನು ಗುರುತಿಸಿ ಜಿಲ್ಲಾ ಹಾಗೂ ರಾಜ್ಯಮಟ್ಟದ ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ಪಡೆಯಲು ಸ್ವತಃ ಶಿಕ್ಷಕರೇ ತಮ್ಮ ಸ್ವವಿವರಗಳ ಜತೆ ಕರ್ತವ್ಯದ ಅವಧಿ, ಸಾಧನೆಗಳ ಮಾಹಿತಿಗಳನ್ನು ಲಗತ್ತಿಸಿ ಆನ್‌ಲೈನ್ ಮೂಲಕ ಪ್ರಶಸ್ತಿ ನೀಡುವ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಇತ್ತೀಚೆಗೆ ಎಲ್ಲರಿಗೂ ಪ್ರಶಸ್ತಿ ಪಡೆಯುವುದು ಎಂದರೆ ಒಂದು ಪ್ರತಿಷ್ಠೆಯ ಸಂಕೇತ ಎಂಬಂತಾಗಿದೆ. ಇದರಿಂದಾಗಿ ಪ್ರಶಸ್ತಿ ಪಡೆಯಲು ಕೆಲ ಶಿಕ್ಷಕರು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದ್ದು, ಅನರ್ಹರೂ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಸಾಕಷ್ಟು ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ ಇದ್ದರೂ ಮಕ್ಕಳನ್ನು ಶಾಲೆಗೆ ಕರೆತರುವ ಪ್ರಯತ್ನದಿಂದ ಹಿಡಿದು ಅವರಿಗೆ ವಿದ್ಯಾಭ್ಯಾಸ ನೀಡಿ, ಅವರಲ್ಲಿನ ಇತರೆ ಕಲೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಿ ಸಾಧನೆಯ ಹಾದಿ ತೋರುವ ಶಿಕ್ಷಕರೂ ಇದ್ದಾರೆ. ಇವರು ನಿಜವಾಗಿಯೂ ಪ್ರಶಸ್ತಿಗಳಿಗೆ ಅರ್ಹರಾಗಿದ್ದರೂ ಅದರ ಗೋಜಿಗೇ ಹೋಗದೆ ಎಲೆಮರೆಯ ಕಾಯಿಯಂತೆ ಉಳಿದುಬಿಡುತ್ತಾರೆ. ಆದ್ದರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸುವ ಬದಲು ಇಂತಹ ಶಿಕ್ಷಕರನ್ನು ಸ್ವತಃ ಶಿಕ್ಷಣ ಇಲಾಖೆಯೇ ಗುರುತಿಸಿ ಪ್ರಶಸ್ತಿ ನೀಡುವ ಪ್ರಯತ್ನ ಮಾಡಬೇಕಿದೆ. ಆಗ ಪ್ರಶಸ್ತಿಯ ಮೌಲ್ಯವೂ ಹೆಚ್ಚಲಿದೆ.
-ದೇವರಹಳ್ಳಿ ಲೋಕೇಶ್, ಪಾಂಡವಪುರ.

Tags: