Mysore
20
few clouds

Social Media

ಶನಿವಾರ, 31 ಜನವರಿ 2026
Light
Dark

ಕುಶಾಲನಗರ ಪುರಸಭೆ ೨೩ವಾರ್ಡ್‌ಗಳಾಗಿ ವಿಂಗಡಣೆ 

corporate camplaint

ಮೇಲ್ದರ್ಜೆಗೆ ಏರಿದ ಮೂರು ವರ್ಷಗಳ ಬಳಿಕ ವಿಂಗಡಣೆ; ಶೀಘ್ರ ಚುನಾವಣೆ ನಡೆಸಲು ಒತ್ತಾಯ 

ಕುಶಾಲನಗರ: ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಮೂರು ವರ್ಷಗಳ ಬಳಿಕ ಕುಶಾಲನಗರ ಪುರಸಭೆಯ ವಾರ್ಡ್‌ಗಳ ವಿಂಗಡಣೆ ಮಾಡಲಾಗಿದ್ದು, ಆಕ್ಷೇಪಣೆ ಅಥವಾ ಸಲಹೆಗಳನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯು ೨೦೨೧ರಲ್ಲಿ ಪುರಸಭೆಯಾಗಿ ಘೋಷಣೆಯಾಗಿತ್ತು. ಅಂದು ಕುಶಾಲನಗರ ಪಟ್ಟಣ ಪಂಚಾಯಿತಿ ೧೬ ವಾರ್ಡ್‌ಗಳನ್ನು ಒಳಗೊಂಡಿತ್ತು. ಇದೀಗ ೨೩ ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ. ೨೦೧೧ರ ಜನಗಣತಿ ಪ್ರಕಾರ ವಾರ್ಡ್ ವಿಂಗಡಣೆ ಮಾಡಲಾಗಿದೆ.

ಇದನ್ನೂ ಓದಿ: ಯುವ ಸಂಭ್ರಮ | ಮೋಡಿ ಮಾಡಿದ ಶಿವತಾಂಡವ, ಶಿಳ್ಳೆ ಚಪ್ಪಾಳೆಯ ಝೇಂಕಾರ

ಕುಶಾಲನಗರ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಿದ ಹಿನ್ನೆಲೆಯಲ್ಲಿ ಒಂದಷ್ಟು ಮಂದಿ ಸಂತಸ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದರು. ಕುಶಾಲನಗರ ಪಟ್ಟಣ ಪಂಚಾಯಿತಿಯೊಂದಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರು ಗ್ರಾಮದ ಒಂದಷ್ಟು ವ್ಯಾಪ್ತಿ ಕುಶಾಲನಗರ ಪುರಸಭೆಗೆ ಸೇರ್ಪಡೆಯಾಗಿವೆ. ಇದರಿಂದ ನಗರದ ಅಭಿವೃದ್ಧಿ ಕುಂಠಿತವಾಗಲಿದೆ ಎಂಬ ಆರೋಪಗಳು ಕೇಳಿ ಬಂದಿವೆ.

೨೦೧೧ರ ಜನಗಣಿತಿಯ ನಂತರ ೨೦೨೧ ಜನಗಣತಿ ನಡೆಯದ ಕಾರಣ ಈ ಸಮಸ್ಯೆ ಎದುರಾಗಿದ್ದು, ೨೦೨೧ರ ಜನಗಣತಿ ಆಗಿದ್ದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜನಸಂಖ್ಯೆಯೇ ಸಾಕಷ್ಟಿತ್ತು ಎಂಬ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ. ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿದ ವೇಳೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಬಹುತೇಕ ಸದಸ್ಯರು ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. ಇದರಿಂದ ವಾರ್ಡ್ ವಿಂಗಡಣೆ ತಡವಾಗಿತ್ತು. ಕುಶಾಲನಗರ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಚುನಾಯಿತ ಸದಸ್ಯರೇ ಪುರಸಭೆ ಸದಸ್ಯರಾಗಿ ಮುಂದುವರಿದಿದ್ದರು. ಪುರಸಭೆಯ ನಾಮನಿರ್ದೇಶಿತ ಸದಸ್ಯರ ಆಯ್ಕೆಯಲ್ಲೂ ಕೂಡ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದೀಗ ವಾರ್ಡ್ ವಿಂಗಡಣೆಯಾಗಿದ್ದು, ಆದಷ್ಟು ಬೇಗನೇ ಚುನಾವಣೆ ನಡೆಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಕ್ಷೇಪಣೆ ಸಲ್ಲಿಸಲು ಅವಕಾಶ: ಕುಶಾಲನಗರ ಪಟ್ಟಣ ಪಂಚಾಯಿತಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾ ಯಿತಿಯ ಮಾದಾಪಟ್ಟಣ ಗ್ರಾಮದ ಭಾಗಶಃಪ್ರದೇಶಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿ ಅಽಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಸಲ್ಲಸಲು ಇಚ್ಚಿಸುವವರು ಲಿಖಿತ ರೂಪದಲ್ಲಿ ಸಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಜಿಲ್ಲಾಽಕಾರಿಗೆ ಸಲ್ಲಿಸಬೇಕು ಹಾಗೂ ಆಕ್ಷೇಪಣೆ, ಸಲಹೆಗಳನ್ನು ಸದರಿ ಅವಧಿಯ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವು ದಿಲ್ಲವೆಂದು ಆದೇಶದಲ್ಲಿ ತಿಳಿಸಲಾಗಿದೆ.

” ಪುರಸಭೆ ವಾರ್ಡ್‌ಗಳು ವಿಂಗಡಣೆಯಾಗಿವೆ. ಆದಷ್ಟು ಬೇಗನೆ ಚುನಾವಣೆ ನಡೆಸುವ ಕೆಲಸ ಸರ್ಕಾರದಿಂದ ಆಗಬೇಕು. ಕೆಲವು ಸದಸ್ಯರು ಅಧಿಕಾರದ ಆಸೆಯಿಂದ ಆಕ್ಷೇಪಣೆ ಸಲ್ಲಿಸಲು ಮುಂದಾಗಿರುವುದು ಸರಿಯಲ್ಲ. ಈ ಹಿಂದೆ ಕೆಲವರು ಸಲ್ಲಿಸಿದ ಆಕ್ಷೇಪಣೆಯಿಂದ ಕುಶಾಲನಗರ ಅಭಿವೃದ್ಧಿ ಕುಂಠಿತವಾಗಿದೆ. ಆದ್ದರಿಂದ ಊರಿನ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು.”

-ಸುಮನ್ ಗೌಡ, ಬಿಜೆಪಿ ಯುವ ಮುಖಂಡ, ಕುಶಾಲನಗರ

” ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೇರಿ ಮೂರು ವರ್ಷಗಳಾಗಿವೆ. ಇದೀಗ ರಾಜ್ಯ ಸರ್ಕಾರ ವಾರ್ಡ್ ವಿಂಗಡಣೆ ಮಾಡಿ ರಾಜ್ಯಪತ್ರ ಹೊರಡಿಸಿರುವುದು ಸ್ವಾಗತಾರ್ಹ. ಆದಷ್ಟು ಬೇಗನೇ ಚುನಾವಣೆ ನಡೆಯಲಿ. ಕುಶಾಲನಗರ ಪುರಸಭೆಯ ಅಭಿವೃದ್ಧಿ ಕೆಲಸ ಆಗಲಿ.”

-ಸಿ.ಎಂ.ಅಜ಼ೀಜ್, ನಗರ ಕಾಂಗ್ರೆಸ್ ಮುಖಂಡ

Tags:
error: Content is protected !!