Mysore
24
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಆಮೆಗತಿಯಲ್ಲಿ ಕೊಡವ ಹೇರಿಟೇಜ್‌ ಯೋಜನೆ

ಮಡಿಕೇರಿ: ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ, ಪದ್ಧತಿ, ಪರಂಪರೆಯಿಂದ ಪ್ರಪಂಚದಾದ್ಯಂತ ಗಮನ ಸೆಳೆಯುತ್ತಿರುವ ಕೊಡವ ಜನಾಂಗದ ಬಗ್ಗೆ ಬೇರೆ ಜಿಲ್ಲೆ, ರಾಜ್ಯ, ದೇಶದ ಪ್ರವಾಸಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ರೂಪಿಸಲಾದ ಕೊಡವ ಹೆರಿಟೇಜ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ.

ಹೌದು, ೨೦೧೧ರಿಂದಲೂ ಕಾಮಗಾರಿ ನಡೆಯುತ್ತಿದೆ. ಕಟ್ಟಡ ತಲೆಎತ್ತಿ ನಿಂತರೂ ಇತರ ಕಾಮಗಾರಿ ಪೂರ್ಣಗೊಳ್ಳದೆ ಕೊಡವ ಪಾರಂಪರಿಕ ತಾಣ ಜನರ ದರ್ಶನಕ್ಕೆ ಸಿಗದೆ ಅನಾಥ ಸ್ಥಿತಿಯಲ್ಲಿದೆ. ಅಲ್ಲದೇ, ಶಿಥಿಲಗೊಂಡು ಹಾಳಾಗುವ ಭೀತಿಯೂ ಸೃಷ್ಟಿಯಾಗಿದೆ.

ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಮಡಿಕೇರಿ ನಗರದಿಂದ ಅನತಿ ದೂರದ ಕರವಲೆ ಬಾಡಗ ಗ್ರಾಮದಲ್ಲಿ(ವಿದ್ಯಾನಗರ) ನೂತನವಾಗಿ ನಿರ್ಮಾಣವಾದ ಜಿ ನ್ಯಾಯಾಲಯ ಸಮೀಪದಲ್ಲಿಯೇ ೫ ಎಕರೆ ಜಾಗದಲ್ಲಿ ೨೦೦೯-೧೦ರಲ್ಲಿ ಯೋಜನೆ ಕಾರ್ಯಗತಕ್ಕೆ ಮಂಜೂರಾತಿ ಪಡೆದುಕೊಂಡು ೨೦೧೧ರಲ್ಲಿ ಕೆಲಸ ಆರಂಭಗೊಂಡರೂ ಇಂದಿಗೂ ಕಾಮಗಾರಿ ಪೂರ್ಣಗೊಳ್ಳದೆ ತೆವಳುತ್ತ ಸಾಗಿದೆ. ಕೊಡವ ಹೆರಿಟೇಜ್ ಎಂದು ಪೂರ್ಣಗೊಳ್ಳುತ್ತೆ? ಎಂದು ಚಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

೧೫ ವರ್ಷಗಳಿಂದಲೂ ಕಾಮಗಾರಿ ಅಂತ್ಯವಾಗದೆ ಇದೀಗ ಕೆಲಸ ಸ್ಥಗಿತಗೊಂಡಿದೆ. ನಿರ್ಮಾಣ ಹಂತದಿಂದಲೂ ಒಂದಿಂದು ಸಮಸ್ಯೆಗಳು, ಕಳಪೆ ಕಾಮಗಾರಿ, ಗುತ್ತಿಗೆದಾರರ ಬದಲಾವಣೆ ಇದರೊಂದಿಗೆ ಅಽಕಾರಿ, ಜನಪ್ರತಿನಿಽಗಳ ಇಚ್ಛಾಶಕ್ತಿಯ ಕೊರತೆಯಿಂದ ಕೆಲಸ ಕುಂಠಿತಗೊಂಡಿದೆ. ಇದೀಗ ಕಾಮಗಾರಿಗೆ ಹೆಚ್ಚುವರಿಯಾಗಿ ೪. ೯೫ ಕೋಟಿ ರೂ. ಅವಶ್ಯ ಇದ್ದು, ಪ್ರವಾಸೋದ್ಯಮ ಇಲಾಖೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿದೆ. ಕೊಡವ ಜನಾಂಗದ ಸಾಂಸ್ಕೃತಿಕ ಶ್ರೀಮಂತಿಕೆ, ಜೀವನ ಶೈಲಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಕೊಡವ ಹೆರಿಟೇಜ ಸೆಂಟರ್ ಸ್ಥಾಪಿಸಲು ಚಿಂತನೆ ನಡೆಸಲಾಗಿತ್ತು. ಐನ್‌ಮನೆ, ಸಭಾಂಗಣ, ಕೊಡವರ, ಸಂಸ್ಕೃತಿ, ಪದ್ಧತಿ, ಪರಂಪರೆಯ ಅನಾವರಣ, ಉಡುಗೆ-ತೊಡುಗೆ, ಆಭರಣಗಳ ಪ್ರದರ್ಶನ, ಕೊಡಗಿನ ಪ್ರಮುಖ ಬೆಳೆ ಹಾಗೂ ಕೊಡವರ ಪೂರ್ವಿಕರು ಬಳಸುತ್ತಿದ್ದ ಪಾರಂಪರಿಕ ವಸ್ತುಗಳ ಪ್ರದರ್ಶನ ಇಡಲು ವಸ್ತು ಸಂಗ್ರಹಾಲಯ ಹಾಗೂ ಇನ್ನಿತರ ವ್ಯವಸ್ಥೆಗಳೊಂದಿಗೆ ಕೊಡವರ ಸಂಸ್ಕೃತಿ ಬಗ್ಗೆ ಪೂರಕ ಮಾಹಿತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಕೊಡವ ಹೆರಿಟೇಜ ಸೆಂಟರ್ ನಿರ್ಮಾಣ ಕಾಮಗಾರಿಯಲ್ಲಿ ಪ್ರಮುಖವಾಗಿ ಗೋಡೆಗಳಿಗೆ ಪಾಲಿಷಿಂಗ್ ಆಗಬೇಕಿದ್ದು, ಕಟ್ಟಡದ ಮುಂಭಾಗ ಗೇಟ್ ಮತ್ತು ಸುತ್ತುಗೋಡೆ ನಿರ್ಮಿಸಬೇಕಿದೆ. ಮೆಟ್ಟಿಲುಗಳಿಗೆ ರೇಲಿಂಗ್ಸ್ ಮತ್ತು ಪ್ರೋರಿಂಗ್ ಮಾಡಬೇಕಿದೆ. ರಂಗಮಂದಿರಕ್ಕೆ ಮೇಲ್ಚಾವಣಿ ಅಳವಡಿಕೆ ಹಾಗೂ ಇತರ ಕೆಲಸಗಳು ಬಾಕಿ ಇವೆ. ಇದರೊಂದಿಗೆ ರಸ್ತೆ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್, ನೀರು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಕೊಡವ ಹೆರಿಟೇಜ ಸೆಂಟರ್ ನಿರ್ಮಾಣ ಸಂಬಂಧ ೩,೩೦,೪೫,೧೧೦ ರೂ. ಗಳ ಕಾಮಗಾರಿಗೆ ಅನುಮೋದನೆ ದೊರೆತು ಸದ್ಯಕ್ಕೆ ೨ ಐನ್ ಮನೆಗಳ ಕೆಲಸ, ಪ್ರವೇಶದ್ವಾರ, ಅಡುಗೆ ಕೊಠಡಿ, ಮೆಟ್ಟಿಲುಗಳು, ಗ್ರಂಥಾಲಯ, ರಂಗ ಮಂದಿರ, ವಿದ್ಯುದೀಕರಣ, ಕಿಟಕಿ, ಬಾಗಿಲುಗಳ ಅಳವಡಿಕೆ ಕೆಲಸ ನಡೆದಿವೆ. ಇನ್ನೂ ಅನೇಕ ಕೆಲಸಗಳು ಬಾಕಿ ಉಳಿದಿವೆ.

ಕೊಡವ ಪಾರಂಪರಿಕ ಕೇಂದ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಲಹಾ ಸಮಿತಿ ಮತ್ತು ಕಾರ್ಯಕಾರಿ ಸಮಿತಿಯನ್ನು ನೇಮಿಸುವ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯೂ ಕಡತದಲ್ಲಿಯೇ ದೂಳು ಹಿಡಿಯುತ್ತಿದ್ದು, ಸಮಿತಿಯಲ್ಲಿ ಜಿ ಉಸ್ತುವಾರಿ ಸಚಿವರು ಅಧ್ಯಕ್ಷರಾಗಿ, ಜಿಯ ಜನಪ್ರತಿನಿಧಿಗಳು ಸದಸ್ಯರಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು. ಆದರೆ, ಈ ಸಮಿತಿಯನ್ನು ಇನ್ನೂ ಕಾರ್ಯೋನ್ಮುಖಗೊಳಿಸಲು ಸಾಧ್ಯವಾಗಲಿಲ್ಲ.

ಹೆರಿಟೇಜ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುವ ಮೊದಲು ಇಲಾಖೆ ಇದಕ್ಕೆ ಸೂಕ್ತ ಭದ್ರತೆ ಕಲ್ಪಿಸಬೇಕು. ಜಿಡಳಿತ ಈ ಬಗ್ಗೆ ಎಚ್ಚೆತ್ತು ಕಾಮಗಾರಿ ಚುರುಕುಗೊಳಿಸಲು ಮುಂದಾಗಬೇಕಾಗಿದೆ.

೧೫ ವರ್ಷಗಳು ಕಳೆದರೂ ಪೂರ್ಣಗೊಳ್ಳದ ಕಾಮಗಾರಿ ಕೊಡವ ಹೆರಿಟೇಜ್ ಕಟ್ಟಡ ಕಾಮಗಾರಿ ಮುಗಿದಿದೆ. ಆದರೆ, ಒಳ ವಿನ್ಯಾಸ ಸೇರಿದಂತೆ ಇನ್ನಿತರ ಕೆಲಸಗಳಿಗೆ ೪. ೯೫ ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೆಟಿವಿಜಿ ಮೂಲಕ ಅನುದಾನ ಬಿಡುಗಡೆಯಾಗಲಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. -ಅನಿತಾ ಭಾಸ್ಕರ್, ಉಪನಿರ್ದೇಶಕರು, ಕೊಡವ ಹೆರಿಟೇಜ ಕಟ್ಟಡದ ಹೊರನೋಟ. ಪ್ರವಾಸೋದ್ಯಮ ಇಲಾಖೆ

Tags:
error: Content is protected !!