Mysore
33
scattered clouds

Social Media

ಬುಧವಾರ, 23 ಏಪ್ರಿಲ 2025
Light
Dark

ಇಂದಿನಿಂದ ಕೊಡವ ಕೌಟುಂಬಿಕ ಚೆಕ್ಕೇರ ಕ್ರಿಕೆಟ್ ನಮ್ಮೆ

ಪುರುಷರ ವಿಭಾಗದಲ್ಲಿ 281 ತಂಡಗಳು
ಮಹಿಳೆಯರ 84 ತಂಡಗಳು ಭಾಗಿ

ಪುನೀತ್ ಮಡಿಕೇರಿ
ಮಡಿಕೇರಿ: ಚೆಕ್ಟೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಾಗಿರುವ ‘ಚೆಕ್ಕೇರ ಕ್ರಿಕೆಟ್ ಕಪ್’ ಪಂದ್ಯಾವಳಿ ಭಾನುವಾರ ಆರಂಭವಾಗಲಿದೆ.

ಕೊಡವ ಕೌಟುಂಬಿಕ ಕ್ರಿಕೆಟ್‌ನಲ್ಲಿ 8 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆಕ್ಟೇರ ಕುಟುಂಬ ಈ ಬಾರಿ ಕೊಡವ ಕೌಟುಂಬಿಕ “ಬಾರಿ ಎಲ್ಲಾರ : ಕೂಡನಾ, ಆಮಕ, ಸಮಯ ಕಳಿ ಕನಾ ಕ್ರಿಕೆಟ್ ನಮ್ಮೆಯ ಸಾರಥ್ಯವನ್ನು ವಹಿಸಿದೆ. ಏ.6ರ ಭಾನುವಾರ ಪಂದ್ಯಾವಳಿಗೆ ಚಾಲನೆ ದೊರೆಯಲಿದ್ದು, ಹುದಿಕೇರಿ ಜನತಾ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕ್ರಿಕೆಟ್ ನಮ್ಮ ನಡೆಯಲಿದೆ. ಏ.6ರಿಂದ ಪುರುಷರಿಗೆ 8 ಓವರ್‌ಗಳ ಕ್ರಿಕೆಟ್‌ ಪಂದ್ಯಾವಳಿ ನಡೆದರೆ, ಮಹಿಳೆಯರಿಗಾಗಿ 6 ಓವರ್‌ಗಳ ಕ್ರಿಕೆಟ್ ಪಂದ್ಯಾವಳಿ ಏ.28ರಿಂದ ಆರಂಭಗೊಳ್ಳಲಿದೆ. ಪುರುಷರ ವಿಭಾಗದಲ್ಲಿ 281 ತಂಡಗಳು ಹಾಗೂ ಮಹಿಳೆಯರ 84 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಕೋಣಗೇರಿ, ತಿತಿಮತಿ, ಹುದಿಕೇರಿ, ಬಾಳೆಲೆ, ಕುಟ್ಟ, ಬೀರುಗ, ಕಡಂಗ ಭಾಗಗಳಲ್ಲಿ ಚೆಕ್ಕೇರ ಕುಟುಂಬಗಳು ಇದ್ದು, ಹಬ್ಬ ಹರಿ ದಿನಗಳನ್ನು ಒಟ್ಟಾಗಿ ಆಚರಿಸುತ್ತಿವೆ. ಸುಮಾರು 350 ಸದಸ್ಯರನ್ನು ಚೆಕ್ಕೇರ ಕುಟುಂಬ ಒಳಗೊಂಡಿದ್ದು, ಚೆಕ್ಕೇರ ಕುಟುಂಬದ ತಕ್ತರಾಗಿ ಪಿ.ರಾಜೇಶ್ ಕೆಲಸ ನಿರ್ವಹಿ ಸುತ್ತಿದ್ದಾರೆ. ಚೆಕ್ಕೇರ ಕ್ರಿಕೆಟ್ ಕಪ್ ಅಧ್ಯಕ್ಷರಾಗಿ ಚೆಕ್ಕೇರ ಚಂದ್ರ ಪ್ರಕಾಶ್, ಕೊಡವ ಕ್ರಿಕೆಟ್ ಕಾರ್ಯದರ್ಶಿಯಾಗಿ ಕೊಕ್ಕೇಂಗಡ ರಂಜನ್, ಚೆಕ್ಕೇರ ಕ್ರಿಕೆಟ್ ಕಪ್ ನಮ್ಮೆಯ ಸಂಚಾಲಕರಾಗಿ ಚೆಕ್ಕೇರ ಆದರ್ಶ್, ಕ್ರಿಕೆಟ್ ಸಮಿತಿಯ ನಿರ್ದೇಶಕರಾಗಿ ಚಿಟ್ಯಪ್ಪ, ಖಜಾಂಚಿಯಾಗಿ ವಿವೇಕ್ ಹಾಗೂ ಇತರರು ಕ್ರಿಕೆಟ್ ನಮ್ಮೆಯ ಯಶಸ್ಸಿಗಾಗಿ ಶ್ರಮ ವಹಿಸಿದ್ದಾರೆ.

ಅಂದಾಜು 40 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಕೂಟ ನಡೆಯಲಿದೆ. ಲೋಗೋದಲ್ಲಿ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳಿಗೆ ಸಮಾನ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಸಮಾನ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಐನ್ದನೆಯ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಬಿಂಬಿಸಲಾಗಿದೆ.

ಕ್ರಿಕೆಟ್‌ನೊಂದಿಗೆ ಸಾಹಿತ್ಯಕ್ಕೆ ಒತ್ತು: ಕ್ರಿಕೆಟ್ ನೊಂದಿಗೆ ಸಾಹಿತ್ಯಕ್ಕೆ ಒತ್ತು ನೀಡಲು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಕೊಡವ ಹಾಕಿ ಮತ್ತು ಕೊಡವ ಕ್ರಿಕೆಟ್ ವಿಷಯದಲ್ಲಿ 4 ಪುಟ ಮೀರದಂತೆ ಪ್ರಬಂಧ ಸ್ಪರ್ಧೆ ನಡೆಸಲಾಗಿದ್ದು, ಉತ್ತಮ ಬರಹಕ್ಕೆ ನಮ್ಮ ಉದ್ಘಾಟನೆಯಂದು ಬಹುಮಾನ ವಿತರಿಸ ಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ನಡುವೆ ಒಂದು ದಿನ ರಿಲೇ ಆಯೋಜಿಸುವ ಚಿಂತನೆ ಇದೆ. ರಿಲೇಯಲ್ಲಿ ಪ್ರತಿ ತಂಡದಲ್ಲಿಯೂ ಓರ್ವ ಮಹಿಳಾ ಸದಸ್ಯೆಯರ ಪಾಲ್ಗೊಳ್ಳು ಎಂದು ಆಯೋಜಕರು ವಿಕೆಯನು ಕಡ್ಡಾಯ ಮಾಡಲಾಗಿದೆ. ಮೂವರು ಪುರುಷರು ಓಡಬಹುದಾಗಿದೆ. ಓರ್ವ ಸ್ಪರ್ಧಿ 2 ಕಿ.ಮೀ.ನಂತೆ ಒಟ್ಟು 8 ಕಿ.ಮೀ ಕ್ರಮಿಸಬೇಕಾಗುತ್ತದೆ. ಪೊನ್ನಂಪೇಟೆಯಿಂದ ಆರಂಭವಾಗುವ ರಿಲೇ ಹುದಿಕೇರಿಯಲ್ಲಿ ಅಂತ್ಯಗೊಳ್ಳಲಿದೆ.

ಪ್ರದರ್ಶನ ಪಂದ್ಯ: ಕೊಡವ ಮತ್ತು ಅಮೃಕೊಡವರೊಂದಿಗೆ ಬಾಂಧವ್ಯ ವೃದ್ಧಿಸಲು ಪ್ರದರ್ಶನ ಪಂದ್ಯ ಏರ್ಪಡಿಸಲಾಗಿದೆ. ಉದ್ಘಾ ಟನಾ ದಿನದಂದು ಕೊಡವ ಇಲೆವೆನ್ ಮತ್ತು ಅಮೃಕೊಡವ ಇಲೆವೆನ್ ತಂಡಗಳ ನಡುವೆ ಪ್ರದರ್ಶನ ಪಂದ್ಯವನ್ನು ಬೆಳಿಗ್ಗೆ 11.30 ಏರ್ಪಡಿಸಲಾಗಿದೆ ಎಂದು ಚೆಕ್ಕೇರ ಕ್ರಿಕೆಟ್ ಕಪ್ ಅಧ್ಯಕ್ಷ ಚೆಕ್ಕೇರ ಚಂದ್ರ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಬಹುಮಾನಗಳ ವಿವರ
ಪುರುಷರ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 1 ಲಕ್ಷ ರೂ.ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನವಾಗಿ 75 ಸಾವಿರ ರೂ., ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೆ ತಲಾ 25 ಸಾವಿರ ರೂ. ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುತ್ತದೆ. ಜತೆಗೆ ವಿವಿಧ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು, ಮಹಿಳೆಯರ ಕ್ರಿಕೆಟ್ ಪಂದ್ಯಾವಳಿ ವಿಜೇತರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂ., ದ್ವಿತೀಯ 30 ಸಾವಿರ ರೂ., ತೃತೀಯ ಮತ್ತು ಚತುರ್ಥ ಸ್ಥಾನ ಪಡೆದ ತಂಡಗಳಿಗೆ ತಲಾ 15 ಸಾವಿರ ರೂ.ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. ರಿಲೇ ಸ್ಪರ್ಧೆ ವಿಜೇತರಿಗೆ ಪ್ರಥಮ ಬಹುಮಾನವಾಗಿ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ ಬಹುಮಾನವಾಗಿ 10ಸಾವಿರ ರೂ.ನೀಡಲಾಗುವುದು. ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಥಮ 7 ಸಾವಿರ ರೂ., ದ್ವಿತೀಯ 5 ಸಾವಿರ ರೂ. ಹಾಗೂ ತೃತೀಯ
ಬಹುಮಾನವಾಗಿ 3 ಸಾವಿರ ರೂ. ನೀಡಲಾಗುವುದು ಎಂದು ಚೆಕ್ಕೇರ ಚಂದ್ರ ಪ್ರಕಾಶ್ ತಿಳಿಸಿದ್ದಾರೆ.

ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ 23ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಾಗಿರುವ ಚೆಕ್ಕೇರ ಕ್ರಿಕೆಟ್ ಕಪ್ ಏ.6 ರಿಂದ ಆರಂಭಗೊಳ್ಳಲಿದೆ. ಈಗಾಗಲೇ ಪುರುಷರ ವಿಭಾಗದಲ್ಲಿ 281 ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ 84 ತಂಡಗಳು ನೋಂದಾಯಿಸಿಕೊಂಡಿವೆ.. -ಚೆಕ್ಕೇರ ಚಂದ್ರ ಪ್ರಕಾಶ್, ಅಧ್ಯಕ್ಷರು, ಚೆರ ಕ್ರಿಕೆಟ್ ಕಪ್

ಕೊಡವ ಕೌಟುಂಬಿಕ ಕ್ರಿಕೆಟ್ ಕ್ರೀಡಾಕೂಟದ ಮೂಲಕ ಕುಟುಂಬದಲ್ಲಿ ಪರಸ್ಪರ ಒಗ್ಗಟ್ಟು,
ಸಾಮರಸ್ಯ ಮೂಡುತ್ತದೆ. ಹಿಂದೆ ಇದ್ದ ಅವಿಭಕ್ತ ಕುಟುಂಬಗಳು ಇತ್ತೀಚೆಗೆ ವಿಭಕ್ತ ಕುಟುಂಬಗಳಾಗಿವೆ. ಇಂತಹ ಕ್ರೀಡಾಕೂಟ ಆಯೋಜನೆಯಿಂದ ವಿಭಕ್ತ ಕುಟುಂಬಗಳು ಪರಸ್ಪರ ಬೆರೆಯಲು ಸಹಕಾರಿಯಾಗಿದೆ.
ಪಿ.ರಾಜೇಶ್‌, ನಾಡ್‌ ತಕ್ಕ, ಚಕ್ಕೇರ ಕುಟುಂಬ

Tags: