Mysore
13
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಜ.೧೩ರಿಂದ ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ ಸಂಭ್ರಮ

ಎಂ.ಬಿ.ರಂಗಸ್ವಾಮಿ

ಮೂಗೂರು: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಜ.೧೩ರಿಂದ ೧೭ರವರೆಗೆ ನಡೆಯಲಿದ್ದು, ಜ.೧೫ ರಂದು ಮಹಾ ರಥೋತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ತ್ರಿಪುರ ಸುಂದರಿ ಅಮ್ಮನವರಜಾತ್ರೆಯ ಅದ್ಧೂರಿ ಆಚರಣೆಗೆ ಈಗಾಗಲೇ ಜಾತ್ರಾ ಪೂರ್ವಸಿದ್ಧತಾ ಸಭೆ ನಡೆಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದಿಶಕ್ತಿ ಶ್ರೀ ತ್ರಿಪುರ ಸುಂದರಿ ಅಮ್ಮ ತಿಬ್ಬಾದೇವಿಗೆ ರಥೋತ್ಸವಕ್ಕೂ ಮುನ್ನ ಒಂದು ವಾರ ಮೊದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿವೆ.

ಜ.೩ರಂದು ಹಸ್ತಾನ ಅಂಕುರಾರ್ಪಣೆ ಮೂಲಕ ಜಾತ್ರಾ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ. ಜ.೧೦ ರಂದು ವಧೆ ಉತ್ಸವ ನಡೆದಿದೆ. ಜ.೧೧ರಂದು ಶೇಷ, ಪಕ್ಷಿ ವಾಹನೋತ್ಸವ, ಜ.೧೨ರಂದು ಸಿಂಹ ವಾಹನೋತ್ಸವ ಹಾಗೂ ಚಂದ್ರ ಮಂಡಲ ಉತ್ಸವ, ಜ.೧೩ರಂದು (ಮೂಗೂರು ಬಂಡಿ) ರುದ್ರಾಕ್ಷಿ ಮಂಟಪದ ಉತ್ಸವ, ೧೪ರಂದು ಹೂವಿನ ಪಲ್ಲಕ್ಕಿಯಲ್ಲಿ ತೆಪ್ಪೋತ್ಸವ, ೧೫ ರಂದು ಶ್ರೀ ಅಮ್ಮನವರ ಮಹಾ ರಥೋತ್ಸವ ನಂತರ ರಾತ್ರಿ ಆನೆ ವಾಹನೋತ್ಸವ, ೧೬ರಂದು ಅಮ್ಮನ ವರು ಹೊಸಹಳ್ಳಿಗೆ ದಯಮಾಡಿ ಚಿಗುರು ಕಡಿಯುವುದು ನಂತರ ಮೂಗೂರಿಲ್ಲಿ ಕುದುರೆ ಹಾಗೂ ಮಂಟಪದಲ್ಲಿ ಉಯ್ಯಾಲೆ ಉತ್ಸವ, ೧೭ರಂದು ಪಲ್ಲಕ್ಕಿಯಲ್ಲಿ ವೈಮಾಳಿಗೆ ಉತ್ಸವ, ರಾತ್ರಿ ವೇಳೆ ದೇಗುಲದಲ್ಲಿ ಪೂರ್ಣಾಭಿಷೇಕ, ವಿಶೇಷ ಪೂಜೆ, ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಧಾರ್ಮಿಕ ಆಚರಣೆಗೆ ತೆರೆ ಬೀಳಲಿದೆ.

” ಈ ಬಾರಿಯ ಜಾತ್ರೆಯು ಸಂಕ್ರಾಂತಿ ಹಬ್ಬ ದಂದು ಜರುಗ ಲಿದ್ದು, ಅಮ್ಮನವರ ಉತ್ಸವ ಮತ್ತಷ್ಟು ಮೆರುಗು ಪಡೆಯಲಿದೆ. ಅಮ್ಮನವರ ಜಾತ್ರೆಗೆ ಆಗಮಿಸುವ ಸಾವಿರಾರು ಜನರಿಗೆ ಮೂಲಸೌಕರ್ಯ ಒದಗಿಸಬೇಕಿದೆ.”

-ಎಂ.ಪಿ.ಛಾಯಕುಮಾರ್, ಉದ್ಯಮಿ, ಮೂಗೂರು

Tags:
error: Content is protected !!