Mysore
29
few clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಓದುಗರ ಪತ್ರ: ವಿಪಕ್ಷಗಳಲ್ಲಿ ಒಮ್ಮತವಿದೆಯೇ?

ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ- ಇವೆರಡರ ಹಗರಣಗಳ ಆರೋಪವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಪಾದಯಾತ್ರೆ ನಡೆಸಿವೆ.

ಈ ಎರಡೂ ಹಗರಣಗಳ ತನಿಖೆಯನ್ನು ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿದ್ದು, ವಾಲ್ಮೀಕಿ ನಿಗಮ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರದ ಮೂರು ತನಿಖಾ ಸಂಸ್ಥೆಗಳ ಜತೆಗೆ ಕೇಂದ್ರ ಸರ್ಕಾರದ ಸಿಬಿಐ ಮತ್ತು ಇಡಿ ತನಿಖಾ ಸಂಸ್ಥೆಗಳೂ ನಡೆಸುತ್ತಿವೆ. ಇದರೊಂದಿಗೆ ಮುಡಾ ಹಗರಣದ ತನಿಖೆಯನೂ ಸಿಬಿಐಗೆ ಒಪ್ಪಿಸಬೇಕು ಎಂಬುದು ವಿರೋಧ ಪಕ್ಷಗಳ ಒತ್ತಾಯ.

ವಿರೋಧ ಪಕ್ಷಗಳು ಜನಪರ ಧ್ವನಿಯಾಗಬೇಕು. ಆದರೆ, ಈ ಪಾದಯಾತ್ರೆಯನ್ನು ಗಮನಿಸಿದರೆ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ಜನಧ್ವನಿಯಾಗಿವೆಯೇ? ಎಂಬ ಪ್ರಶ್ನೆ ಮೂಡುತ್ತದೆ. ಪಾದಯಾತ್ರೆ ಮಾಡುತ್ತಿರುವ ಈ ಪಕ್ಷಗಳಲ್ಲಿಯೇ ಒಮ್ಮತ ಇಲ್ಲ. ಅಲ್ಲದೆ ಜಾ.ದಳ ತಾನು ಈ ಪಾದಯಾತ್ರೆಯಲ್ಲಿ ಏಕೆ ಭಾಗವಹಿಸುವುದಿಲ್ಲ ಎಂಬುದಕ್ಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡ ನೀಡಿದ ಹೇಳಿಕೆಗಳು ಎರಡೂ ಪಕ್ಷಗಳಲ್ಲಿ ಒಮ್ಮತವಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿವೆ.

ಮುಡಾ ಪ್ರಕರಣದಲ್ಲಿ ಎಲ್ಲ ಪಕ್ಷಗಳ ಕೆಲ ನಾಯಕರು ಫಲಾನುಭವಿಗಳಾಗಿದ್ದಾರೆ. ಎಲ್ಲಿ ಈ ಪ್ರಕರಣದ ಸಮಗ್ರ ತನಿಖೆ ನಡೆದು ತಾವೂ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೋ ಎಂದು ಜಾ.ದಳದಲ್ಲಿ ಆಂತರಿಕ ಭಯ ಹೆಚ್ಚಾಗಿದೆ ಅನಿಸುತ್ತಿದೆ. ಇದೂ ಕೂಡ ಪಾದಯಾತ್ರೆಯಲ್ಲಿ ಭಾಗಿಯಾಗದಿರಲು ಒಂದು ಕಾರಣವಿರಬಹುದು.

ಇನ್ನು ಎಚ್.ಡಿ.ಕುಮಾರಸ್ವಾಮಿ ‘ನಮ್ಮ ಕುಟುಂಬಕ್ಕೆ ವಿಷ ಉಣ್ಣಿಸುವವರ ಜೊತೆಯಲ್ಲಿ ನಾನು ಸೇರಬೇಕೆ?’ ಎಂದು ಪ್ರಶ್ನಿಸಿರುವುದು ಹೊಂದಾಣಿಕೆ ಸರಿಯಾಗಿಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಟಿಕೊಡುತ್ತದೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವುದೇ ಪಾದಯಾತ್ರೆಯ ಉದ್ದೇಶ ಎಂಬುದು ಸ್ಪಷ್ಟ. ಈಗ ಚೆಂಡು ರಾಜ್ಯಪಾಲರ ಅಂಗಳದಲ್ಲಿದೆ. ಕೇಂದ್ರ ಸರ್ಕಾರ ನೇಮಿಸಿರುವ ರಾಜ್ಯಪಾಲರು ಹೇಗೆ ಕಾರ್ಯ ನಿಭಾಯಿಸುತ್ತಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ.

-ಪ್ರೊ.ಹಿ.ಶಿ.ರಾಮಚಂದ್ರೇಗೌಡ, ಸಿ.ಬಸವಲಿಂಗಯ್ಯ (ಬಸು), ಜಿ.ಪಿ.ಬಸವರಾಜು, ಪ್ರೊ.ಪಂಡಿತಾರಾಧ್ಯ, ನಾ.ದಿವಾಕರ, ಡಾ.ರತಿ ರಾವ್, ಕೆ.ಸುಶೀಲಾ, ಸವಿತಾ ಪ.ಮಲ್ಲೇಶ್, ಮೈಸೂರು.

Tags:
error: Content is protected !!