ಪುನೀತ್
ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣ; ಮಾರ್ಚ್ ಅಂತ್ಯಕ್ಕೆ ಉದ್ಘಾಟನೆ ಸಾಧ್ಯತೆ
ಮಡಿಕೇರಿ: ನಗರದ ಜಿ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಭರದಿಂದ ಸಾಗುತ್ತಿದೆ.
ಕೊಡಗು ಜಿಯಲ್ಲಿ ೨೦೨೩ರ ನವೆಂಬರ್ ತಿಂಗಳಲ್ಲಿ ಹೊಸದಾಗಿ ಮೂರು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಅದರಂತೆ ಮಡಿಕೇರಿಯಲ್ಲಿ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಒಂದೆರಡು ವಾರಗಳಲ್ಲಿ ಪೂರ್ಣಗೊಂಡು, ಮಾರ್ಚ್ ಅಂತ್ಯಕ್ಕೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಸಿ.ಎಂ. ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾಗಿರುವ ಕೇವಲ ಐದು ರೂಪಾಯಿಗೆ ತಿಂಡಿ ಹಾಗೂ ಹತ್ತು ರೂ.ಗೆ ಊಟ ಒದಗಿಸುವ ಇಂದಿರಾ ಕ್ಯಾಂಟೀನ್ ಯೋಜನೆ ಇಡೀ ದೇಶದ ಗಮನ ಸೆಳೆದಿತ್ತು. ಆದರೆ, ಕಳೆದ ಬಿಜೆಪಿ ಸರ್ಕಾರದ ಅವಽಯಲ್ಲಿ ಇಂದಿರಾ ಕ್ಯಾಂಟೀನ್ ರಾಜ್ಯದ ಕೆಲವು ಕಡೆಗಳಲ್ಲಿ ಬಾಗಿಲು ಮುಚ್ಚಿತ್ತು.
೨೦೨೩ರಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳಿಗೆ ಮರುಜೀವ ನೀಡಲು ಯೋಜನೆ ರೂಪಿಸಿ ಹೊಸದಾಗಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದರು. ಇದರ ಫಲವಾಗಿ ಕೊಡಗು ಜಿಯ ಮಡಿಕೇರಿ, ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ನೂತನವಾಗಿ ಇಂದಿರಾ ಕ್ಯಾಂಟೀನ್ ಘೋಷಣೆಯಾಗಿತ್ತು.
ಕಡಿಮೆಯಾದ ಗ್ರಾಹಕರು: ೨೦೧೮ರಲ್ಲಿ ರಾಜ್ಯ ಸರ್ಕಾರ ಮಡಿಕೇರಿ ನಗರದ ಹೊಸ ಖಾಸಗಿ ಬಸ್ ತಂಗುದಾಣದ ಸಮೀಪ ಇಂದಿರಾ ಕ್ಯಾಂಟೀನ್ ನಿರ್ಮಿಸಿ ಉದ್ಘಾಟನೆ ಮಾಡಿತ್ತು. ಜಿಡಳಿತ, ನಗರಸಭೆ ಹಾಗೂ ರಾಜ್ಯ ಸರ್ಕಾರ ಯಾವುದೇ ದೂರದೃಷ್ಟಿಯಿಲ್ಲದೆ ಜನ ಜಂಗುಳಿ ಇಲ್ಲದ ಪ್ರದೇಶವಾಗಿದ್ದ ಹೊಸ ಖಾಸಗಿ ಬಸ್ ತಂಗು ದಾಣದ ಸಮೀಪ ನಿರ್ಮಿಸಿದ್ದ ಇಂದಿರಾ ಕ್ಯಾಂಟೀನ್‌ಗೆ ಆರಂಭದಲ್ಲಿ ಗ್ರಾಹಕರು ಬರುತ್ತಿದ್ದರು. ಆದರೆ ವರ್ಷಗಳು ಕಳೆದಂತೆ ಆಹಾರದ ಗುಣಮಟ್ಟ ಬದಲಾದಂತೆ ಹಾಗೂ ಜನಜಂಗುಳಿ ಇಲ್ಲದ ಪ್ರದೇಶವಾದ್ದರಿಂದ ಇಂದಿರಾ ಕ್ಯಾಂಟೀನ್ ಗ್ರಾಹಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿತು.
ಈ ಹಿಂದೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಸೇವಿಸಲು ಬರುತ್ತಿದ್ದರು. ಆದರೆ, ಸದ್ಯ ವಿದ್ಯಾರ್ಥಿಗಳು ಕೂಡ ಇಂದಿರಾ ಕ್ಯಾಂಟೀನ್‌ಗೆ ಬರುತ್ತಿಲ್ಲ. ಜನಜಂಗುಳಿ ಇಲ್ಲದ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿದ್ದಕ್ಕೆ ಆರಂಭದಿಂದಲೂ ಆಕ್ರೋಶ ವ್ಯಕ್ತವಾಗಿತ್ತು. ಜಿ ಆಸ್ಪತ್ರೆ ಸಮೀಪ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕೆಂದು ಒತ್ತಾಯ ಕೇಳಿ ಬಂದಿತ್ತು.
ರೋಗಿಗಳಿಗೆ ಪ್ರಯೋಜನ: ಜಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಚಿಕಿತ್ಸೆ ಪಡೆಯಲು ಬರುವ ಬಹುತೇಕರು ಹೋಟೆಲ್‌ಗಳಲ್ಲಿ ದುಬಾರಿ ಬೆಲೆ ನೀಡಿ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನ ಊಟ ಸೇವಿಸುವುದು ಮಾಮೂಲಿ. ಆಸ್ಪತ್ರೆ ಸಮೀಪದಲ್ಲಿರುವ ಹೋಟೆಲ್‌ಗಳಲ್ಲಿ ಬೆಲೆ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಜಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವವರು ಬಹುತೇಕ ಕೂಲಿ ಕಾರ್ಮಿಕರು ಮತ್ತು ಬಡವರಾಗಿzರೆ. ಅದಲ್ಲದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವವರೂ ಊಟಕ್ಕಾಗಿ ಹೋಟೆಲ್ ಮೊರೆ ಹೋಗುತ್ತಿzರೆ. ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು, ಆಟೋ ಚಾಲಕರು, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಅನೇಕರಿಗೆ ಪ್ರಯೋಜನವಾಗಲಿದೆ.
ಹಳೇ ಕ್ಯಾಂಟಿನ್‌ಗೆ ಕಡಿಮೆ ಗ್ರಾಹಕರು!
ಮಡಿಕೇರಿ: ನಗರದ ಹೊಸ ಖಾಸಗಿ ಬಸ್ತಂಗುದಾಣದ ಸಮೀಪವಿರುವ ಇಂದಿರಾ ಕ್ಯಾಂಟೀನ್‌ಗೆ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಗ್ರಾಹಕರಿಲ್ಲದ ಹಳೆಯ ಇಂದಿರಾ ಕ್ಯಾಂಟೀನ್ ಮುಚ್ಚುವ ಸಾಧ್ಯತೆ ಇದೆ. ಹೊಸದಾಗಿ ಆರಂಭಗೊಳ್ಳಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕಿಚನ್ ವ್ಯವಸ್ಥೆ ಇಲ್ಲ. ಹಳೆಯ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಸಿ ಜಿ ಆಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಆಹಾರ ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ. ಹಳೆಯ ಇಂದಿರಾ ಕ್ಯಾಂಟೀನ್ ಕೇವಲ ಅಡುಗೆಗಾಗಿ ಮಾತ್ರ ಬಳಸುವ ಸಾಧ್ಯತೆಗಳಿವೆ.
” ಬಡಜನರಿಗೆ ಹಾಗೂ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳಿಗೆ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವಾಗುತ್ತಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡುತ್ತೇವೆ.”
ಡಾ.ಮಂಥರ್ ಗೌಡ, ಶಾಸಕರು





