Mysore
25
clear sky

Social Media

ಗುರುವಾರ, 19 ಫೆಬ್ರವರಿ 2026
Light
Dark

ನಂಜನಗೂಡಿಗೆ ಬಸ್ ಹತ್ತಿದರೆ ತಿ.ನರಸೀಪುರದ ಟಿಕೆಟ್!

ಎಸ್.ಎಸ್.ಭಟ್

ನಂಜನಗೂಡು: ಮೈಸೂರು ನಗರದಿಂದ ನಂಜನಗೂಡಿಗೆ ತೆರಳುವ ಬಸ್ ಹತ್ತುವ ಪ್ರಯಾಣಿಕ ಆಘಾತಕ್ಕೆ ಒಳಗಾಗುವುದು ಗ್ಯಾರಂಟಿ. ಮೈಸೂರು ಬಸ್ ನಿಲ್ದಾಣದಿಂದ ನಂಜನಗೂಡು ತಲುಪಲು ಅಶ್ವಮೇಧ ಬಸ್ ಹತ್ತಿದವರೆಲ್ಲರಿಗೂ ಈ ಆಘಾತ ಎದುರಾಗಿದೆ.

ಆ ಬಸ್‌ನಲ್ಲಿ ಮೈಸೂರಿನಿಂದ ನಂಜಗೂಡಿಗೆ ಅಥವಾ ನಂಜನಗೂಡಿನಿಂದ ಮೈಸೂರಿಗೆ ಟಿಕೆಟ್ ಕೇಳಿದರೆ ಬಸ್ ನಿರ್ವಾಹಕ ಮೈಸೂರು-ತಿ.ನರಸೀಪುರ ಅಥವಾ ತಿ.ನರಸೀಪುರ-ಮೈಸೂರು ಎಂದು ಮುದ್ರಿತವಾಗಿರುವ ಟಿಕೆಟ್ ನೀಡುತ್ತಾರೆ. ಹಾಗಂತ ಪ್ರಯಾಣಿಕರೇನು ಗಾಬರಿಪಡಬೇಕಿಲ್ಲ. ಏಕೆಂದರೆ ಆ ಬಸ್ ತಿ.ನರಸೀಪುರಕ್ಕೆ ಹೋಗುವುದಿಲ್ಲ. ಅದು ನೇರವಾಗಿ ನಂಜನಗೂಡಿಗೆ ತಲುಪುತ್ತದೆ. ನಂಜನಗೂಡಿಂದಾದರೆ ಮೈಸೂರು ನಗರಕ್ಕೆ ಬರುತ್ತದೆ.

ಆದರೆ ಪ್ರಯಾಣಿಕರು ಆ ಬಸ್ ಹತ್ತಿ ಪ್ರಯಾಣ ಮಾಡಿದ ತಪ್ಪಿಗೆ ೪೬ ರೂ. ಬದಲಿಗೆ ೪೮ ರೂ. ಅಂದರೆ ೨ ರೂ. ಹೆಚ್ಚು ದರ ನೀಡಬೇಕಾಗುತ್ತದೆ. ಈ ೨ ರೂ. ಹೆಚ್ಚಳವಾಗಿರುವುದು ೧೨-೨-೨೦೨೬ ಗುರುವಾರದಿಂದ. ಈ ಹೆಚ್ಚಳದ ಕುರಿತಂತೆ ಸಾರಿಗೆ ನಿಗಮದ ನಂಜನಗೂಡು ಡಿಪೋದ ಅDiಕಾರಿ ಸುಮಾ ಅವರನ್ನು ಪ್ರಶ್ನಿಸಿದರೆ, ಈ ವಿಚಾರ ನನ್ನ ಗಮನಕ್ಕೇನೂ ಬಂದಿಲ್ಲ. ಹಾಗಾಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ.

” ಮಲೆ ಮಹದೇಶ್ವರ ಬೆಟ್ಟಕ್ಕೆ ೧೩-೨-೨೦೨೬ರಿಂದ ೩೦ ಅಶ್ವಮೇಧ ಬಸ್‌ಗಳನ್ನು ಬಿಡಲಾಗಿದ್ದು ಅವರು ನಂಜನಗೂಡಿಗೆ ಟ್ರಿಪ್ ಹೋಗುವ ಹಾಗೇ ಇಲ್ಲ. ಟಿಕೆಟ್ ನೀಡುವಂತೆಯೂ ಇಲ್ಲ. ನಂಜನಗೂಡು-ಮೈಸೂರು ನಡುವಿನ ಪ್ರಯಾಣ ದರ ಹೆಚ್ಚಳವಾಗಿಯೇ ಇಲ್ಲ. ಅದನ್ನು ಈಗ ನಾವು ಪರಿಶೀಲಿಸಬೇಕಿದೆ.”

ವೀರೇಶ, ಡಿಸಿ, ಸಾರಿಗೆ ನಿಗಮ

” ಮೈಸೂರು-ತಿ.ನರಸೀಪುರ ಮಾರ್ಗದ ಮುದ್ರಿತ ಟಿಕೆಟ್ ಪಡೆದು ನಂಜನ ಗೂಡಿಗೆ ಪ್ರಯಾಣ ಬೆಳೆಸಿದರೆ ಆಗುವ ಅನಾಹುತದ ಅರಿವು ಯಾರಿಗೂ ಇಲ್ಲ. ಅಕಸ್ಮಿಕ ವಾಗಿ ಮೈಸೂರು-ನಂಜನಗೂಡು ರಸ್ತೆಯಲ್ಲಿ ಆ ಬಸ್ ಅಪಘಾತವಾದರೆ ವಿಮೆಯ ಜಾರಿಯಲ್ಲಿ ಭಾರೀ ತೊಡಕಾಗುವುದು ಖಚಿತ. ಹಾಗಾದಾಗ ಯಾರು ಜವಾಬ್ದಾರರು?”

ಎಂ.ಎನ್.ಚಂದ್ರಶೇಖರ್, ಜೆ.ಪಿ.ನಗರ, ಮೈಸೂರು

 

 

Tags:
error: Content is protected !!