Mysore
23
overcast clouds

Social Media

ಮಂಗಳವಾರ, 28 ಏಪ್ರಿಲ 2026
Light
Dark

ಹತ್ತಿ ಬೆಳೆ ನಷ್ಟವಾದರೆ ಪರಿಹಾರಕ್ಕೆ ದಾರಿ ಇದೆ…

ರಾಜ್ಯದ ನಾನಾ ಭಾಗಗಳಲ್ಲಿ ಹಿಂಗಾರು ಮಳೆ ಚುರುಕಾಗಿದ್ದು, ಕೆಲ ಭಾಗಗಳಲ್ಲಿನ ಹತ್ತಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರ ನೆರವಿಗೆ ನಿಲ್ಲುವುದು ಅತ್ಯಗತ್ಯ.

ಈಗ ಎಲ್ಲೆಡೆ ಹತ್ತಿ ಬಿಡಿಸುವ ಕಾರ್ಯ ಚುರುಕಾಗಿದೆ. ಕೆಲ ಭಾಗಗಳಲ್ಲಿ ಹಿಂಗಾರು ಮಳೆಯಿಂದಾಗಿ ಹತ್ತಿ ಗುಣಮಟ್ಟ ಕಳೆದು ಕೊಳ್ಳುತ್ತಿದೆ. ಇದು ಸಹಜವಾಗಿಯೇ ಹತ್ತಿ ಬೆಳೆಯ ಬೆಲೆ ಕುಸಿಯುವಂತೆ ಮಾಡಿದೆ.

ಹತ್ತಿ ಬೆಳೆಗಾರರು ಆತಂಕಪಡುವುದು ಬೇಡ. ಮಳೆಯಿಂದಾಗಿ ಹತ್ತಿ ಬೆಳೆ ನಾಶವಾಗಿದ್ದರೆ, ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರ ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳ ಬಳಿ ಅನುದಾನವನ್ನು ಮೀಸಲಿಟ್ಟಿದೆ. ಕ್ಷೇತ್ರದ ಶಾಸಕರ ಮೂಲಕ ಅವರ ಗಮನಕ್ಕೆ ತಂದರೆ ನೆರೆ ಪರಿಹಾರದ ಮೂಲಕ ಆ ಅನುದಾನದಿಂದ ಪರಿಹಾರ ಪಡೆಯಬಹುದಾಗಿದೆ. ಇದರೊಂದಿಗೆ ಮಳೆಯಿಂದಾಗಿ ಹಾಳಾದ ಹತ್ತಿಯನ್ನು ಬಿಡಿಸಿ ಅದರ ಬೀಜ ತೆಗೆದು ಒಣಗಿಸಿ ಅದನ್ನು ಪರ್ಯಾಯವಾಗಿ ಬಳಕೆ ಮಾಡ ಬಹುದು. ಹಾಸಿಗೆಗಳ ತಯಾರಿಕೆಯಲ್ಲಿ ಈ ಹತ್ತಿ ಬಳಸುವುದರಿಂದ ಆ ಮೂಲಕವೂ ರೈತರ ಆದಾಯ ಗಳಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರದ ಗಮನ ಸೆಳೆಯುವುದು ಅತಿಮುಖ್ಯ.

 

Tags:
error: Content is protected !!