ಹುಣಸೂರು ; ತೋಟದ ಮನೆಯಲ್ಲಿ ಮಾದಕ ವಸ್ತು ವಶ ಪ್ರಕರಣ
ಮೈಸೂರು : ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೋಟ್ಯಂತರ ರೂ.ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಒಂದು ತಂಡ ಬುಧವಾರ ಮುಂಬೈಗೆ ತೆರಳಿದೆ.
ಹುಣಸೂರಿನ ರತ್ನಪುರಿ ಬಳಿಯ ದಾಸನ ಪುರ ತೋಟದ ಮನೆಯ ಮೇಲೆ ದಾಳಿ ನಡೆಸಿದ್ದ ಜಿಲ್ಲಾ ಪೊಲಿಸರ ತಂಡ ಅಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಲ್ಲದೆ, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆಯಲಾಗಿದ್ದ ಮಾದಕ ವಸ್ತುಗಳನ್ನು ಜಿಲ್ಲಾ ಪೊಲೀಸರು ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಅವುಗಳನ್ನು ಎಫ್ಎಸ್‌ಎಲ್ ವಿಭಾಗಕ್ಕೆ ರವಾನಿಸಿದ್ದರು.
ನಂತರ ಇಬ್ಬರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಹಾಗೂ ಅವರುಗಳ ಸಿಮ್ ಕಾರ್ಡ್‌ಗಳ ಪರಿಶೀಲನೆ ನಡೆಸಿದ ವೇಳೆ ಆರೋಪಿಗಳ ಸಂಪರ್ಕದಲ್ಲಿ ಇದ್ದ ಇಬ್ಬರು ಮುಂಬೈನಲ್ಲಿ ನೆಲೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ. ಹೀಗಾಗಿ ಎಸ್‌ಪಿ ಅವರ ಸೂಚನೆ ಮೇರೆಗೆ ಐದು ಮಂದಿ ಪೊಲೀಸ್ ಅಧಿಕಾರಿಗಳ ತಂಡ ಬುಧವಾರ ಮುಂಬೈಗೆ ತೆರಳಿದೆ. ಈ ವೇಳೆ ಅವರ ವಿಳಾಸವನ್ನೂ ಪಡೆದಿರುವ ಪೊಲೀಸರು, ಅಲ್ಲಿನ ಪೊಲೀಸ್ ನೆರವಿನೊಂದಿಗೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.





