ಮೈಸೂರು ಆಕಾಶವಾಣಿಯಲ್ಲಿ ಪ್ರಸಾರವಾಗುವ ಹಿಂದಿ ಪಾಠ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವರು ಹಾಗೂ ನಿರೂಪಿಸುವವರು ಹಿಂದಿ ರಾಷ್ಟ್ರ ಭಾಷಾ ಕಾರ್ಯಕ್ರಮ ಎಂದು ಹೇಳುತ್ತಿದ್ದಾರೆ. ದೇಶದ ಜನರಿಗೆ ತಿಳಿದ ಹಾಗೆ ಹಿಂದಿ ಭಾರತದ ಸಂವಿಧಾನದಲ್ಲಿ ಮಾನ್ಯತೆ ಪಡೆದ ೨೨ ಭಾಷೆಗಳಲ್ಲಿ ಒಂದು ಅಧಿಕೃತ ಭಾಷೆಯಷ್ಟೆ. ಕನ್ನಡ ಭಾಷೆಯಷ್ಟು ಹಿಂದಿ ಪ್ರಾಚೀನ ಭಾಷೆಯಲ್ಲ. ಹಿಂದಿಯೇತರ ರಾಜ್ಯಗಳಲ್ಲಿ ಅದಕ್ಕೆ ಯಾವ ಮಾನ್ಯತೆಯೂ ಇಲ್ಲ.
ಹೀಗಿರುವಾಗ, ಹಿಂದಿ ರಾಷ್ಟ್ರ ಭಾಷೆ ಎಂದು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಉದ್ದೇಶ ಪೂರ್ವಕವಾಗಿ ತಪ್ಪು ಮಾಹಿತಿ ನೀಡುತ್ತಿದ್ದರೆ ಅದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಮೈಸೂರು ಆಕಾಶವಾಣಿ ಕೇಂದ್ರದ ನಿರ್ದೇಶಕರು ಗಮನ ಹರಿಸಿ ಇನ್ನು ಮುಂದೆ ಹೀಗಾಗದಂತೆ ಕ್ರಮ ವಹಿಸಬೇಕಾಗಿದೆ.
-ಮುಳ್ಳೂರು ಪ್ರಕಾಶ್, ಕನಕದಾಸ ನಗರ, ಮೈಸೂರು





