ಕೈಗಾರಿಕೆಗಳನ್ನು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಿಂದ ಹೊರಕ್ಕೆ
2 ವಲಯಗಳಿಂದ 7000 ಎಕರೆ ಕೈಗಾರಿಕಾ ಪ್ರದೇಶ ಲಭ್ಯತೆ
ಗಿರೀಶ್ ಹುಣಸೂರು
ಮೈಸೂರು: ಮೈಸೂರು ಮತ್ತು ಮಂಡ್ಯ ಜಿಲ್ಲೆಗಳನ್ನು ಒಳಗೊಂಡ ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶ ಮತ್ತು ಮೈಸೂರು ಮತ್ತು ನಂಜನಗೂಡು ತಾಲ್ಲೂಕುಗಳ ವಿವಿಧ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ತಾಂಡ್ಯ ವಿಶೇಷ ಹೂಡಿಕೆ ವಲಯಗಳನ್ನು ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಮೈಸೂರು ಭಾಗದ ಕೈಗಾರಿಕೋದ್ಯಮಿಗಳ ಬಹು ವರ್ಷಗಳ ಬೇಡಿಕೆ ಈಡೇರಿದ್ದು, ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಹೆಬ್ಬಾಳು ವಿಶೇಷ ಹೂಡಿಕೆ ವಲಯ: ಹೆಬ್ಬಾಳು, ಹೂಟಗಳ್ಳಿ, ಬೆಳವಾಡಿ, ಬೆಳಗೊಳ, ಕೂರ್ಗಳ್ಳಿ, ಹೆಬ್ಬಾಳು ೨ನೇ ಹಂತದ ಏಕ ಘಟಕ ಸಂಕೀರ್ಣ ಸೇರಿದಂತೆ ಮೈಸೂರು ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಒಟ್ಟಾರೆ ೩,೭೯೯. ೧೯ ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ರದೇಶಗಳನ್ನು ಸೇರಿಸಿ ಹೆಬ್ಬಾಳು ವಿಶೇಷ ಹೂಡಿಕೆ ವಲಯ ಎಂದು ಪ್ರಕಟಿಸಲಾಗಿದೆ. ಇದರಲ್ಲಿ ಬೆಳಗೊಳ ಕೈಗಾರಿಕಾ ಪ್ರದೇಶದ ಮೇಟಗಳ್ಳಿಯ ೫೨೦ ಎಕರೆ, ಬೆಳವಾಡಿ ಕೈಗಾರಿಕಾ ಪ್ರದೇಶದ ಬೆಳವಾಡಿ ಮತ್ತು ಇಲವಾಲಗಳ ೨೭೪. ೩೩ ಎಕರೆ, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಹೆಬ್ಬಾಳು ಮತ್ತು ಹಿನಕಲ್‌ನ ೧,೬೦೩ ಎಕರೆ, ಹೂಟಗಳ್ಳಿ ಮತ್ತು ಕೂರ್ಗಳ್ಳಿಯ ೪೨೬ ಎಕರೆ ಹಾಗೂ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ೪೭೨ ಎಕರೆ, ಬಿಇಎಂಎಲ್‌ನ ೩೫೦. ೧೬ ಎಕರೆ, ಹೆಬ್ಬಾಳು ೨ನೇ ಹಂತ ಕೈಗಾರಿಕಾ ಪ್ರದೇಶದಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಅನಗನಹಳ್ಳಿಯ ೧೫೩ ಎಕರೆ ಸೇರಿದಂತೆ ಒಟ್ಟಾರೆ ೩೭೯೯. ೧೯ ಎಕರೆ ಪ್ರದೇಶ ಈ ಅಧಿಸೂಚನೆಗೆ ಒಳಪಟ್ಟಿದೆ.
ತಾಂಡ್ಯ ವಿಶೇಷ ಹೂಡಿಕೆ ವಲಯ: ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಹಾಗೂ ಇಮ್ಮಾವು ಗ್ರಾಮಗಳ ವಿವಿಧ ಸ. ನಂ. ಗಳ ೫೮೪. ೨೪ ಎಕರೆ,ಕೋಚನಹಳ್ಳಿ ಕೈಗಾರಿಕಾ ಪ್ರದೇಶದ ವಿವಿಧ ಸ. ನಂ. ಗಳ ೨೩೫. ೨೨ ಎಕರೆ, ಕಡಕೊಳ ಕೈಗಾರಿಕಾ ಪ್ರದೇಶ ಹಾಗೂ ಇಮ್ಮಾವು ಗ್ರಾಮದ ವಿವಿಧ ಸ. ನಂ. ಗಳ ೭೫೫. ೨೬ ಎಕರೆ, ತಾಂಡ್ಯ ೨ನೇ -ಸ್ ಮೊದಲ ಹಂತ ಕೈಗಾರಿಕಾ ಪ್ರದೇಶದ ತಾಂಡವಪುರದ ವಿವಿಧ ಸ. ನಂ. ಗಳ ೬೮. ೦೪ ಎಕರೆ, ಅಡಕನಹಳ್ಳಿ ಮತ್ತು ತಾಂಡವಪುರಗಳ ೬೪೬. ೦೪ ಎಕರೆ, ಮಹಿಳಾ ಉದ್ಯಮಿಗಳ ಪಾರ್ಕ್‌ನ -ಸ್ ೧ರಲ್ಲಿ ತಾಂಡವಪುರದ ೪೮. ೦೩ ಎಕರೆ, ಮಹಿಳಾ ಉದ್ಯಮಿಗಳ ಪಾರ್ಕ್‌ನ -ಸ್ ೨ರಲ್ಲಿ ತಾಂಡವಪುರದ ೬೮. ೨೬ ಎಕರೆ, ಇಮ್ಮಾವು, ಅಡಹನಹಳ್ಳಿ ಹಾಗೂ ತೊರೆಮಾವು ಗ್ರಾಮಗಳಲ್ಲಿನ ಏಕ ಘಟಕ ಸಂಕೀರ್ಣದ ೫೩೯. ೩೦. ಎಕರೆ, ಇಮ್ಮಾವು ಚಿತ್ರ ನಗರಿ ಏಕ ಘಟಕ ಸಂಕೀರ್ಣದ ೧೦೮ ಎಕರೆ ಸೇರಿದಂತೆ ಒಟ್ಟಾರೆ ೩೧೯೮. ೨೧ ಎಕರೆ ವಿಸ್ತೀರ್ಣವುಳ್ಳ ಕೈಗಾರಿಕಾ ಪ್ರದೇಶಗಳನ್ನು ಸೇರಿಸಿ ತಾಂಡ್ಯ ವಿಶೇಷ ಹೂಡಿಕೆ ವಲಯ ಘೋಷಿಸಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪ ಕಾರ್ಯದರ್ಶಿ ಸಿ. ವಿ. ಹರಿದಾಸನ್ ಅಧಿಸೂಚನೆ ಹೊರಡಿಸಿದ್ದಾರೆ.
ತೆರಿಗೆ ಹಣ ಅಭಿವೃದ್ಧಿಗೆ ಬಳಸದ ಸ್ಥಳೀಯ ಸಂಸ್ಥೆಗಳು: ಈವರೆಗೆ ಈ ಪ್ರದೇಶಗಳಲ್ಲಿನ ಕೈಗಾರಿಕೆಗಳವರು ತಮ್ಮ ವ್ಯಾಪ್ತಿಯಲ್ಲಿನ ಸ್ಥಳೀಯ ಸಂಸ್ಥೆಗೆ ಸರ್ ಚಾರ್ಜ್ ಪಾವತಿಸಬೇಕಿತ್ತು. ಆದರೆ, ಹೀಗೆ ಪಾವತಿಸಿದ ತೆರಿಗೆ ಹಣವನ್ನು ಕೈಗಾರಿಕಾ ಪ್ರದೇಶಗಳಲ್ಲಿನ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸುತ್ತಿಲ್ಲ ಎಂಬ ಆರೋಪಗಳಿವೆ. ಹೆಬ್ಬಾಳು ಕೈಗಾರಿಕಾ ಪ್ರದೇಶವೊಂದರಿಂದಲೇ ಹಿಂದಿನ ಹೂಟಗಳ್ಳಿ ಪಟ್ಟಣ ಪಂಚಾಯಿತಿ ಹಾಗೂ ಮೇಲ್ದರ್ಜೆಗೇರಿದ ಹೂಟಗಳ್ಳಿ ನಗರಸಭೆಗೆ ವಾರ್ಷಿಕ ಅಂದಾಜು ೭೦ ಕೋಟಿ ರೂ. ಗಳಷ್ಟು ಸರ್ ಚಾರ್ಜ್ ಪಾವತಿಸಲಾಗುತ್ತಿದೆ. ಆದರೆ, ಈ ಹಣವನ್ನು ಅಭಿವೃದ್ಧಿಗೆ ಬಳಸಿದ ನಿದರ್ಶನವಿಲ್ಲ ಎಂದು ಕೈಗಾರಿಕೋದ್ಯಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಏಕಗವಾಕ್ಷಿಯಲ್ಲಿ ಪಾವತಿ ವ್ಯವಸ್ಥೆ ಜಾರಿ: ವಿಶೇಷ ಹೂಡಿಕೆ ವಲಯಗಳ ರಚನೆಯಿಂದಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಈ ಕೈಗಾರಿಕಾ ಪ್ರದೇಶಗಳು ಸೇರುವುದರಿಂದ ಸ್ಥಳೀಯ ಸಂಸ್ಥೆಗಳಿಗೆ ಸರ್ ಚಾರ್ಜ್ ಪಾವತಿ ತಪ್ಪಲಿದೆ ಎನ್ನಲಾಗುತ್ತಿದೆ.
ಮೈಸೂರಿನ ಹೆಬ್ಬಾಳು ಹಾಗೂ ತಾಂಡ್ಯ ವಿಶೇಷ ಹೂಡಿಕೆ ವಲಯದ ಅಧಿ ಸೂಚನೆ ಪ್ರಕಟವಾಗಿರುವುದರಿಂದ ಮೈಸೂರು ಕೈಗಾರಿಕೆಗಳ ಸಂಘದ ಬಹು ವರ್ಷಗಳ ಬೇಡಿಕೆ ಈಡೇರಿದೆ. ಆದರೆ, ಕೈಗಾರಿಕಾ ಪಟ್ಟಣ ಪ್ರಾಧಿಕಾರದಲ್ಲಿದ್ದಂತೆ ಕೈಗಾರಿಕಾ ಪ್ರತಿನಿಽಗಳು ಮಾತ್ರ ಆಡಳಿತ ನಡೆಸುವಂತಾಗಬೇಕು. -ಸುರೇಶ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ, ಮೈಸೂರು ಕೈಗಾರಿಕೆಗಳ ಸಂಘ
ಮೈಸೂರು ಕೈಗಾರಿಕಾ ಪಟ್ಟಣ ಪ್ರಾಽಕಾರದ ಮೊದಲ ಸಮಾಲೋಚನಾ ಸಭೆ ೧೯೮೮ರಲ್ಲಿ ಅಂದಿನ ಕೈಗಾರಿಕಾ ಅಭಿವೃದ್ಧಿ ನಿರ್ದೇಶಕರಾಗಿದ್ದ ಅರವಿಂದ್ ಜಾಧವ್ ರವರ ಅಧ್ಯಕ್ಷತೆಯಲ್ಲಿ ನಡೆದಿತ್ತು. ವಿಧಾನಮಂಡಲದ ಎರಡೂ ಸದನಗಳಲ್ಲಿ ವಿಸ್ತೃತ ಚರ್ಚೆ ನಡೆದು ೨೦೦೩ರಲ್ಲಿ ಕೆಎಂಸಿ ಕಾಯ್ದೆ ತಿದ್ದುಪಡಿಯಾಗಿ ಕೈಗಾರಿಕಾ ಪಟ್ಟಣ ಪ್ರಾಽಕಾರ ರಚನೆಗೆ ಅವಕಾಶ ಕಲ್ಪಿಸಿತು. ೨೦೨೫ರ -. ೧೦ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆ ಹೊರಡಿಸಿದೆ.





