Mysore
15
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಮಾವುತರು, ಕಾವಾಡಿಗಳಿಗೆ ಆರೋಗ್ಯ ತಪಾಸಣೆ

ನಾರಾಯಣ ಆಸ್ಪತ್ರೆ ವತಿಯಿಂದ ಇಸಿಜಿ, ಎಕೋ ಇತ್ಯಾದಿ ಪರೀಕ್ಷೆ

ಮೈಸೂರು: ದಸರಾ ಗಜಪಡೆಯೊಂದಿಗೆ ಮೈಸೂರಿಗೆ ಆಗಮಿಸಿರುವ ಮಾವುತರು ಮತ್ತು ಕಾವಾಡಿಗಳ ಕುಟುಂಬಗಳ ಸದಸ್ಯರಿಗೆ ನಾರಾಯಣ ಆಸ್ಪತ್ರೆ ವತಿಯಿಂದ ಬುಧವಾರ ಆರೋಗ್ಯ ತಪಾಸಣೆ ನಡೆಸಲಾಯಿತು.

ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಇರುವಕಟ್ಟಡದಲ್ಲಿ ಆಯೋಜಿ ಸಿದ್ದ ಶಿಬಿರವನ್ನು ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕಾಡಿನಿಂದ ನಾಡಿಗೆ ಆಗಮಿಸಿರುವ ಮಾವುತರು, ಕಾವಾಡಿ ಗಳು ಮತ್ತು ಅವರ ಕುಟುಂಬದವರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸಿರುವ ನಾರಾಯಣ ಆಸ್ಪತ್ರೆ ಕಾರ್ಯ ಶ್ಲಾಘನೀಯವಾಗಿದೆ. ಬಿಪಿ, ಮಧುಮೇಹ ಸೇರಿದಂತೆ ಎಲ್ಲ ರೀತಿಯ ತಪಾಸಣೆಗಳಿಗೂ ವ್ಯವಸ್ಥೆ ಮಾಡಿದ್ದಾರೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆಗಳಿಂದ ಔಷಧಿ ಪಡೆಯುವ ಮಾವುತರು, ನಗರ ಪ್ರದೇಶದ ವೈದ್ಯಕೀಯ ಚಿಕಿತ್ಸೆಗೂ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ. ನಾರಾಯಣ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಬೆಟದೂ‌ ಮಾತನಾಡಿ, ಕಾಡನ್ನು ರಕ್ಷಣೆ ಮಾಡುವ ಜನರ ಆರೋಗ್ಯ ಕಾಪಾಡಲು ನಮ್ಮದೊಂದು ಸಣ್ಣ ಸೇವೆಯಾಗಿದೆ ಎಂದರು.

ಬಳಿಕ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಬಿಪಿ, ಮಧುಮೇಹ, ಇಸಿಜಿ, ಎಕೋ, ಬಿಎಂಡಿ, ಮೂಳೆ ಸಾಂದ್ರತೆ ಮತ್ತಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ಪರೀಕ್ಷೆ ಮಾಡಲಾಯಿತು. ಡಾ.ರಾಜ, ಡಾ.ಶ್ವೇತಾ ಮತ್ತು ತಂಡದವರು ಪರೀಕ್ಷೆ ನಡೆಸಿದರೆ, ಟಿಂಗ್ ವಿಭಾಗದ ಮ್ಯಾನೇಜರ್ ಡಾ.ಸಂತು ಕುಮಾರ್, ಡಿ.ಎಂ.ಪದೀಪ್ ನೇತೃತ್ವವಹಿಸಿದ್ದರು.

ಮೈಸೂರಿನ ಅರಮನೆಯ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಇರುವ ಕಟ್ಟಡದಲ್ಲಿ ಮಾವು ತರು, ಕಾವಾಡಿಗಳಿಗೆ ಆಯೋಜಿಸಿದ್ದ ತಪಾಸಣಾ ಶಿಬಿರವನ್ನು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ಉದ್ಘಾಟಿಸಿದರು. ನಾರಾಯಣ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ದೀಪಕ್ ಬೆಟದೂರ್, ಮಾರ್ಕೆಟಿಂಗ್ ವಿಭಾಗದ ಮ್ಯಾನೇಜರ್ ಡಾ.ಸಂತುಕುಮಾರ್, ಡಿ.ಎಂ.ಪ್ರದೀಪ್ ಹಾಜರಿದ್ದರು.

Tags:
error: Content is protected !!