Mysore
23
broken clouds

Social Media

ಭಾನುವಾರ, 23 ಮಾರ್ಚ್ 2025
Light
Dark

ನೆಲದಾಳದ ನೀರು ಕೃತಿ ಲೋಕಾರ್ಪಣೆ

ನೀರಿನ ಬಾಂಧವ್ಯ, ಅನುಭವನ್ನು ಬಟ್ಟಿ ಇಳಿಸಿರುವ ಶ್ರೀಧರ್‌ ಹೆಗಡೆ

ಶ್ರೀಧರ್‌ ಭಟ್
ನಂಜನಗೂಡು: ತಮ್ಮ ೩೫ ವರ್ಷಗಳ ಜಲದಾಳದ ನೀರಿನ ಅನುಭವವದ ಅರಿವನ್ನು ಪುಸ್ತಕ ರೂಪದಲ್ಲಿ ಬಟ್ಟಿ ಇಳಿಸಿ ಹೊರತಂದಿರುವವರು ಮೈಸೂರು ನಗರದ ನಿವಾಸಿ ಶ್ರೀಧರ್ ಹಗಡೆಯವರು. ‌

ಸ್ವತಃ ಭೂಗರ್ಭ ಶಾಸದಲ್ಲಿ ಶ್ರೀಧರ್ ಎಂ. ಎಸ್ಸಿ. ಮುಗಿಸಿ, ಓದುತ್ತಿದ್ದಾಗಲೇ ತಮ್ಮ ಅಧ್ಯಯನಕ್ಕಾಗಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದ ಶ್ರೀಧರ ಹೆಗಡೆಯವರು, ಈಗ ತಮ್ಮ ಸುದೀರ್ಘ ಜೀವನದ ನೀರಿನ ಸೆಲೆಗಳ ಮಹತ್ವವನ್ನು ತಮ್ಮ ‘ನೆಲದಾಳದ ನೀರು’ ಕೃತಿಯಲ್ಲಿ ತೆರದಿಟ್ಟಿದ್ದಾರೆ.

ಧಾರವಾಡ ವಿವಿಯಲ್ಲಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೊತ್ತರ ಪದವಿ ಗಳಿಸಿದ ಇವರು, ತಮ್ಮ ವೈಯಕ್ತಿಕ ಸಾಮರ್ಥ್ಯದಿಂದ ಕೇಂದ್ರೀಯ ಅಂತರ್ಜಲ ಮಂಡಳಿಯ ಅಧಿಕಾರಿಯಾಗಿ ೩೫ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೆಲೆಸಿದ್ದಾರೆ.

ತಮ್ಮ ವೃತ್ತಿ ಜೀವನದಲ್ಲಿ ತಾವು ಕಂಡ ತಮ್ಮ ನೀರಿನ ಬಾಂಧವ್ಯ, ಅನುಭವವನ್ನು ‘ನೆಲದಾಳದ ನೀರು’ ಕೃತಿಯ ಮೂಲಕ ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯ ಮಾಡಿದ್ದಾರೆ. ಅಂತರ್ಜಲ ಕ್ಷೀಣಿಸುತ್ತಿರುವ ಈ ಕಾಲದಲ್ಲಿ ಕೃಷಿ ನೀರಿಗಾಗಿ ೮೦೦ ಅಡಿಯಿಂದ ಸಾವಿರಾರು ಅಡಿಗಳವರೆಗೆ ಭೂಮಿಯನ್ನು ಕೊರೆದರೂ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲದ ಈ ಪರಿಸ್ಥಿತಿಯಲ್ಲಿ ಈ ನೆಲದಾಳದ ನೀರು ಕೃತಿ ಕೃಷಿಕರಿಗೆ ಅತ್ಯಂತ
ವರದಾನವಾಗಿದೆ ಎಂದೇ ಹೇಳಬಹುದಾಗಿದೆ.

ಅಧುನಿಕ ವಿಜ್ಞಾನದ ಅನುಭವಕ್ಕೆ ಸಮನಾಗಿ ಭಾರತೀಯ ಪುರಾತನವಾದ ಜಲಸಂಸ್ಕೃತಿಯ ಬೇರುಗಳ ಅನುಭವವನ್ನು ದಾಖಲೆ ರೂಪದಲ್ಲಿ ಈ ಪುಸ್ತಕದಲ್ಲಿ ಹಿಡಿದಿಟ್ಟಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಬಿದ್ರಕಾನು ಎಂಬ ಪುಟ್ಟಹಳ್ಳಿಯ ಕೃಷಿ ಮನೆತನದ ಶ್ರೀಧರ ಹೆಗಡೆಯವರ ಶ್ರಮ ಸಾರ್ತಕವಾಗಿದೆ.

ನಗರಗಳಲ್ಲಿ ಜನದಟ್ಟಣೆ ಹೆಚ್ಚಾದಂತೆ ಅಂತರ್ಜಲದ ಸಮತೋಲನಾ ವ್ಯತ್ಯಾಸವಾಗಿ ಅದರಿಂದ ಆಗಬಹುದಾದ ಅನಾಹುತಗಳು ನಾಯಿ ಕೊಡೆಗಳಂತೆ ನಿರ್ಮಾಣವಾಗುತ್ತಿರುವ ಕೊಳವೆ ಬಾವಿಗಳು, ಇದನ್ನು ತಪ್ಪಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅತ್ಯಂತ ನಿಖರವಾಗಿ ಭೂಗರ್ಭದಲ್ಲಿ ನೀರಿಗಾಗಿ ಲಭ್ಯವಿರುವ ಮಾರ್ಗಸೂಚಿಯನ್ನು ತಮ್ಮ ಕೃತಿಯಲ್ಲಿ ಅಡಕಗೊಳಿಸಿರುವುದು ಈ ಕೃತಿಯ ಗಟ್ಟಿತನಕ್ಕೆ ಸಾಕ್ಷಿಯಾಗಿದೆ.

ನೀರಿನ ಅನಿವಾರ್ಯತೆ ಹಾಗೂ ಅದರ ಮಿತಬಳಕೆ, ಉಪಯೋಗವಾದ ನೀರಿನ ಪುನರ್ ಬಳಕೆಗಳ ಕುರಿತಂತೆ ಸ್ಪಷ್ಟ ಸಂದೇಶವೂ ಈ ಕೃತಿಯಲ್ಲಿ ಅಡಕವಾಗಿದೆ. ಭಾರತದ ಅತ್ಯಂತ ಪ್ರಾಚೀನ ಗ್ರಂಥಗಳಾದ ವರಹಾ ಮಿಹಿರಾಚಾರ್ಯರ ಅಂತರ್ಜಲ ಶೋಧನಾ ಮಾಹಿತಿಗಳನ್ನು ಸ್ಪಷ್ಟವಾಗಿ ಕನ್ನಡದಲ್ಲಿ ಉಲ್ಲೇಖಿಸಿದ್ದರಿಂದ ಅಂತರ್ಜಲದ ಹುಡುಕಾಟಲ್ಲಿರುವವರಿಗೆ, ಕೊಳವೆ ಬಾವಿ ತೊಡಿಸುವವರಿಗೆ ಈ ಪುಸ್ತಕ ಆ ಬಗೆಗಿನ ಮಾಹಿತಿಯ ಕಣಜವಾಗಿದೆ.

Tags: