ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಂಭಾಗದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಡಿ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ ಕೆಲ ತಿಂಗಳ ಹಿಂದಷ್ಟೇ ಒಂದು ಬಸ್ ತಂಗುದಾಣವನ್ನು ನಿರ್ಮಿಸಲಾಯಿತು.
ಆದರೆ ಈ ಬಸ್ ತಂಗುದಾಣವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಸುತ್ತಲೂ ಗಿಡಗಂಟಿಗಳು ಬೆಳೆದುಕೊಂಡು ವಿದ್ಯಾರ್ಥಿಗಳು, ಉಪನ್ಯಾಸಕರು ಈ ನಿಲ್ದಾಣದೊಳಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಬಂಧ ಆಂದೋಲನ’ ದಿನಪತ್ರಿಕೆಯ ಶುಕ್ರವಾರದ ಸಂಚಿಕೆಯ ಓದುಗರ ಪತ್ರ ವಿಭಾಗದಲ್ಲಿ ‘ಬಸ್ ತಂಗುದಾಣದ ಸುತ್ತಲಿನ ಗಿಡಗಂಟಿ ತೆರವುಗೊಳಿಸಿ’ ಎಂಬ ಶೀರ್ಷಿಕೆಯಡಿ ನನ್ನದೊಂದು ಪತ್ರ ಪ್ರಕಟಗೊಂಡಿತ್ತು.
ಬಳಿಕ ಅಂತರಸಂತೆ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡು ಬಸ್ ತಂಗುದಾಣದ ಸುತ್ತ ಬೆಳೆದುಕೊಂಡಿದ್ದ ಗಿಡಗಂಟಿಗಳನ್ನು ತೆರವು ಮಾಡಿಸಿದ್ದಾರೆ.
-ಪ್ರಶಾಂತ್, ಅಂತರಸಂತೆ, ಎಚ್.ಡಿ.ಕೋಟೆ ತಾ.





