Mysore
23
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ನಿರೀಕ್ಷೆ

ನವೀನ್ ಡಿಸೋಜ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಉತ್ತಮವಾಗಿರಲಿದೆ ಎಂಬ ಮಾಹಿತಿ ಹವಾಮಾನ ಇಲಾಖೆಯಿಂದ ಲಭ್ಯವಾಗಿದೆ. ಈಗಾಗಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಮುಂಗಾರು ಮಳೆಯೂ ಉತ್ತಮವಾಗಿ ಸುರಿದಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ.

ಕೆಲ ದಿನಗಳ ಹಿಂದೆ ಮಂಜಿನ ನಗರಿ ಮಡಿಕೇರಿ ಸೇರಿ ಕೊಡಗಿನಾದ್ಯಂತ ರಣ ಬಿಸಿಲಿಗೆ ಮನೆಯಿಂದ ಹೊರಬರುವುದೇ ಕಷ್ಟವೆಂಬ೦ತಾಗಿತ್ತು. ಫೆಬ್ರವರಿ ತಿಂಗಳಲ್ಲೇ ಜಿಲ್ಲೆಯ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ವರ್ಷದ ಬಹುತೇಕ ಸಮಯ ತಂಪಾದ ವಾತಾವರಣದಲ್ಲಿರುವ ಕೊಡಗಿನ ಜನ ಬಿಸಿಲಿಗೆ ಬಳಲಿ ಬಸವಳಿದಿದ್ದರು. ಫೆಬ್ರವರಿ ಅಂತ್ಯದಿಂದ ಅಲ್ಲಲ್ಲಿ ಸುರಿಯಲಾರಂಭಿಸಿದ ಮಳೆ ಜಿಲ್ಲೆಯನ್ನು ಮತ್ತೆ ತಂಪು ಮಾಡಿತು. ಇತ್ತೀಚಿನ ದಿನಗಳಲ್ಲಿ ಆಗೊಮ್ಮೆ ಈಗೊಮ್ಮೆ ಸುರಿದ ಮಳೆಗೆ ಒಂದಷ್ಟು
ವಾತಾವರಣ ಬದಲಾಗಿದೆ.

ಜಿಲ್ಲೆಗೆ ಮುಂಗಾರು ಪ್ರವೇಶವಾಗಲು ಇನ್ನು ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಒಂದೂವರೆ ತಿಂಗಳಷ್ಟೇ ಬಾಕಿ ಉಳಿದಿದೆ. ಬೇಸಿಗೆಯ ಬೇಗೆಯನ್ನು ತಣಿಸಲು ಪೂರ್ವ ಮುಂಗಾರು ಮಳೆ ಬೇಕಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚೇ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಾಂತ ಮಹಾಸಾಗರದ ಮಧ್ಯೆ ಮತ್ತು ಪಶ್ಚಿಮ ಭಾಗಗಳಲ್ಲಿ ತಾಪಮಾನ ತಗ್ಗಿದ್ದು, ಲಾನಿನಾ ಪ್ರಭಾವ ಕಂಡುಬರುತ್ತಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಈ ಬಾರಿ ಮುಂಗಾರು ಮತ್ತು ಮುಂಗಾರು ಪೂರ್ವ ಮಳೆ ವಾಡಿಕೆಗಿಂತ ಹೆಚ್ಚಾಗಿರಲಿದ್ದು, ಮುಂದಿನ ಬೇಸಿಗೆಯ ದಿನಗಳಲ್ಲಿ ವಿಪರೀತವೆಂಬಷ್ಟು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇಲ್ಲ ಎಂದು ಭಾರತೀಯಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕೊಡಗು ಸೇರಿದಂತೆ ಪೂರ್ವ ಮುಂಗಾರಿನ ಜತೆ ಮುಂಗಾರು ಮಳೆಯೂ ಉತ್ತಮವಾಗಿರಲಿದ್ದು, ಬೇಸಿಗೆಯ ಬಿಸಿಯೂ ಕಡಿಮೆ ಪ್ರಮಾಣದಲ್ಲಿರಲಿದೆ.

ಭಾರತದಲ್ಲಿ ಮಳೆಯ ಪ್ರಮಾಣ ಕಡಿಮೆ ಯಾಗಿತ್ತು. 2023ರಲ್ಲಿ ಎಲ್ ನಿನೋ ದುರ್ಬಲ ಗೊಂಡು ಲಾ ನಿನಾ ಆರಂಭವಾಗುವ ಸೂಚನೆಯಿತ್ತು. ಹೀಗಾಗಿ ಕಳೆದ ಸಾಲಿನಲ್ಲಿ ಮಳೆಯ ಪ್ರಮಾಣ ಹೆಚ್ಚಿತ್ತು. ಈಗ ಶಾಂತ ಸಾಗರದಲ್ಲಿ ಸಂಪೂರ್ಣ ಲಾನಿನಾ ಪರಿಣಾಮವಿದೆ. ಇದರಿಂದ ಶಾಂತ ಮಹಾಸಾಗರದ ಈಶಾನ್ಯ ಭಾಗದಲ್ಲಿ ಸಮುದ್ರದ ನೀರು ಸಂಪೂರ್ಣ ತಣ್ಣಗಾಗಿದೆ. ಇದರ ಪರಿಣಾಮವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಭಾಗದಲ್ಲಿ ಹೆಚ್ಚು ಮಳೆಯಾದರೆ, ದಕ್ಷಿಣ ಅಮೆರಿಕಾ ಬರ, ಉತ್ತರ ಅಮೆರಿಕಾದಲ್ಲಿ ತೀವ್ರ ಚಳಿ, ಆಫ್ರಿಕಾದ ಈಶಾನ್ಯ ಭಾಗದಲ್ಲಿ ಬರ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಹೆಚ್ಚು ಮಳೆಯಾಗುತ್ತದೆ.

ಲಾನಿನಾ ಪರಿಣಾಮದಿಂದ ಈ ಬಾರಿ ಮುಂಗಾರು ಮಳೆ ಕಳೆದ ವರ್ಷಕ್ಕಿಂತ ಹೆಚ್ಚಿರಲಿದೆ. ಪೂರ್ವ ಮುಂಗಾರು ಉತ್ತಮವಾಗಿರಲಿದ್ದು, ಮೇ ತಿಂಗಳಲ್ಲಿಯೂ ತಾಪಮಾನದಲ್ಲಿ ತುಸು ಕಡಿಮೆ ಉಷ್ಣಾಂಶ ಕಂಡುಬರಲಿದೆ. ಜತೆಗೆ ಈ ಸಾಲಿನಲ್ಲಿ ಹಿಂಗಾರು ಮಳೆ ಕೊರತೆ ಕಂಡುಬರಲಿದೆ. -ಡಾ.ಸುಮಂತ್, ತಾಂತ್ರಿಕ ಅಧಿಕಾರಿ, ಹವಾಮಾನ ವಿಭಾಗ, ನಾಗನಹಳ್ಳಿ

Tags:
error: Content is protected !!