Mysore
18
broken clouds

Social Media

ಗುರುವಾರ, 25 ಡಿಸೆಂಬರ್ 2025
Light
Dark

ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ

ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸ್ಥಾಪಿಸಲಾಗುತ್ತಿದ್ದು, ಡಿ.೨೪ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನೂತನ ಶಾಖೆ ಉದ್ಘಾಟನೆ, ರಾಮೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಅವಧೂತ ದತ್ತಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ಹಾಗೂ ಕಿರಿಯಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ಜರುಗಲಿವೆ. ಅಯೋಧ್ಯೆಯ ನಯಾಘಾಟ್, ಅಯೋಧ್ಯೆ ಬೈಪಾಸ್ ಬಳಿ ಇರುವ ಹರ್ಷನ್ ನಗರದ ‘ಶ್ರೀರಾಮ ಮಂತ್ರಾರ್ಥ ಮಂಟಪ’ದಲ್ಲಿ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.

ಡಿ.೨೫ರಂದು ಸಂಜೆ ೫ ಗಂಟೆಗೆ ಸ್ವಾಗತ ಸಭೆ ನಡೆಯಲಿದೆ. ೫.೩೦ಕ್ಕೆ ಶ್ರೀರಾಮ ತಾರಕ ಯಾಗ ಪೂರ್ಣಾ ಹುತಿ ಹಾಗೂ ನೂತನ ಆಶ್ರಮದ] ಉದ್ಘಾಟನೆ ನೆರವೇರಲಿದೆ. ೭ಕ್ಕೆ ಶ್ರೀರಾಮ ಮತ್ತು ಶ್ರೀ ಹನುಮಾನ್ ಆರತಿ ಜರುಗಲಿದೆ. ಡಿ.೨೬ರಂದು ಬೆಳಿಗ್ಗೆ ೯ಕ್ಕೆ ಶ್ರೀ ಸೀತಾ ರಾಮ ಕಲ್ಯಾಣೋತ್ಸವ, ೧೦ಕ್ಕೆ ಶ್ರೀ ಚಕ್ರ ಪೂಜೆ ಹಾಗೂ ಮಧ್ಯಾಹ್ನ ೧.೩೦ಕ್ಕೆ ನೂತನ ಆಶ್ರಮದಲ್ಲಿ ಬ್ರಹ್ಮ ಭೋಜನ ಏರ್ಪಡಿಸಲಾಗಿದೆ.

ಸಂಜೆ ೬ ಗಂಟೆಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಂದ ‘ಬಾಲ ರಾಮ ರಾಗ ಸಾಗರ’(ಧ್ಯಾನಕ್ಕಾಗಿ ಸಂಗೀತ) ಕಚೇರಿ ನಡೆಯಲಿದೆ. ಡಿ.೨೭ರಂದು ಬೆಳಿಗ್ಗೆ ೯ಕ್ಕೆ ಶ್ರೀ ಚಕ್ರಪೂಜೆ, ೧೦ಕ್ಕೆ] ಶ್ರೀರಾಮ ಪಾದುಕಾ ಪಟ್ಟಾಭಿಷೇಕ ಹಾಗೂ ೧೧ಕ್ಕೆ ಪವಮಾನ ಯಾಗ ಮತ್ತು ಶ್ರೀ ಸೂಕ್ತ ಯಾಗ ಪೂರ್ಣಾಹುತಿ ನೆರವೇರಲಿದೆ. ಸಂಜೆ ೬.೩೦ಕ್ಕೆ ಶ್ರೀ ರಾಮ ಲಲ್ಲಾ ದರ್ಶನ ವ್ಯವಸ್ಥೆ ಮಾಡಲಾಗಿದೆ.

ಡಿ.೨೮ರಂದು ಬೆಳಿಗ್ಗೆ ೧೦ಕ್ಕೆ ಶ್ರೀ ರಾಮ ಸಾಮ್ರಾಜ್ಯ ಪಟ್ಟಾಭಿಷೇಕ, ೧೦.೩೦ಕ್ಕೆ ಪವಮಾನ ಯಾಗ ಮತ್ತು ಮಹಾವಿಷ್ಣು ಯಾಗಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಪೂರ್ಣಾಹುತಿ ಮತ್ತು ಶ್ರೀ ಸ್ವಾಮೀಜಿ ಅವರಿಂದ ಆಶೀರ್ವಚನ ನಡೆಯಲಿದೆ. ಸಂಜೆ ೫ ಗಂಟೆಗೆ ಶತಶ್ಲೋಕಿ ರಾಮಾಯಣ ಸಾಮೂಹಿಕ ಪಾರಾಯಣ ಹಾಗೂ ೬.೩೦ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀಗಳ ಹಾಗೂ ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ದತ್ತ ಪೀಠ ಕೋರಿದೆ.

ಭಕ್ತರೊಂದಿಗೆ ಪಯಣ: ಅಯೋಧ್ಯೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಡಿ.೨೧ಕ್ಕೆ ಮೈಸೂರಿನಿಂದ ಹೊರಡುವ ವಿಶೇಷ ರೈಲು ಬೋಗಿಯಲ್ಲಿ ೧,೩೦೦ ಮಂದಿ ಭಕ್ತರು ಪಯಣ ಬೆಳೆಸಲಿದ್ದು, ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೂಡ ರೈಲಿನಲ್ಲೇ ತೆರಳುತ್ತಿರುವುದು ವಿಶೇಷವಾಗಿದೆ. ಮೈಸೂರಿನಿಂದ ಅಯೋಧ್ಯೆಗೆ ತೆರಳುವ ರೈಲಿನಲ್ಲಿ ವಿಶೇಷ ಬೋಗಿ ವ್ಯವಸ್ಥೆ ಮಾಡಿದ್ದು, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಹೊರ ರಾಜ್ಯಗಳು, ದೇಶಗಳ ಭಕ್ತರು ಹಾಜರಿರುತ್ತಾರೆ.

Tags:
error: Content is protected !!