Mysore
18
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಜಂಬೂ ಸವಾರಿಯಲ್ಲಿ ಸೌಹಾರ್ದತೆ ಮೆರೆದ ನಾಲ್ವಡಿ

ನಾಲ್ವಡಿಯವರು ಮಿರ್ಜಾ ಇಸ್ಮಾಯಿಲ್ ಅವರನ್ನು ಅಂಬಾರಿ ಮೇಲೆ ಕೂರಿಸಿಕೊಂಡ ಪ್ರಸಂಗ ಇಲ್ಲಿದೆ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಸರ್ವ ಸಮುದಾಯಗಳ ನಡುವೆ ಸೌಹಾದತೆಗೆ ಒತ್ತು ನೀಡಿದ್ದರು ಎಂಬುದಾಗಿ ಪ್ರೊ.ಎಸ್.ಚಂದ್ರಶೇಖರ್ ಅವರು ರಚಿಸಿರುವ ‘ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಆಧುನಿಕ ಮೈಸೂರು’ ಕೃತಿಯಲ್ಲಿ ದಾಖಲಾಗಿದೆ. ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ, ಆ ಪುಸ್ತಕದ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.
ಅಕ್ಟೋಬರ್ ೨೭, ೧೯೨೭ರಂದು ನಡೆದ, ದಸರ ಮಹೋತ್ಸವದ ಸಂದರ್ಭದಲ್ಲಿ ಮಹಾರಾಜರು, ಮಿರ್ಜಾ ಅವರನ್ನು ಆನೆ ಅಂಬಾರಿಯ ಮೇಲೆ ಕುಳ್ಳಿರಿಸಿಕೊಂಡು ಮೈಸೂರಿನ ರಾಜಮಾರ್ಗಗಳಲ್ಲಿ ಮೆರವಣಿಗೆ ಹೊರಟಿದ್ದು ಸಂಪ್ರದಾಯಕ್ಕೆ, ಧರ್ಮಕ್ಕೆ ಆದ ಅಪಚಾರವೆಂದು ಬಗೆಯಲಾಯಿತು. ಅಲ್ಲಿಯವರೆಗೆ ಯಾರಿಗೂ ಸಿಗದ ಗೌರವ ಒಬ್ಬ ಮುಸಲ್ಮಾನನಿಗೆ ದೊರೆತದನ್ನು ಕೆಲವರು ಸಹಿಸಲಾಗದೆ ಅಂಬಾರಿಯ ಕಡೆಗೆ ಚಪ್ಪಲಿಗಳನ್ನೂ ಎಸೆದು, ಅಂಬಾರಿ ಹೊತ್ತಿದ್ದ ಆನೆಯನ್ನು ಬೆದರಿಸುವಂಥ ಕೃತ್ಯವೂ ನಡೆದಿತ್ತು. ಮತೀಯ ಕಿಡಿ ಹಚ್ಚಲು ಇದೂ ಒಂದು ಕಾರಣವಾಯಿತು. ಆದರೆ ಬೆಂಗಳೂರು ಗಲಭೆಗಳು ಆದ ನಂತರ ಅಂದರೆ ಮರುವರ್ಷವೇ ನಾಲ್ವಡಿಯವರು ಮತ್ತೊಮ್ಮೆ ಮಿರ್ಜಾರನ್ನು ಅಂಬಾರಿ ಮೇಲೆ ಕೂರಿಸಿ ತಮ್ಮ ವಿಶ್ವಾಸವನ್ನು ಮೆರೆದರು. ಮಹಾರಾಜರು ಧೃತಿಗೆಡಲಿಲ್ಲ. ಮಿರ್ಜಾ ಅವರಿಗೂ ಧೈರ್ಯ ತುಂಬಿ ತಮ್ಮ ಬೆಂಬಲ ವ್ಯಕ್ತಪಡಿಸಿ, ಒಂದು ಪತ್ರವನ್ನೂ ಬರೆದರು.

ನಿಮಗೆ ಕೆಲವು ವಾಕ್ಯಗಳ ಪತ್ರ ಬರೆಯದೆ ನಾನು ಸುಮ್ಮನಿರಲಾರೆ. ಕಳೆದ ಕೆಲವು ದಿನಗಳಿಂದ ನಿಮ್ಮ ಸುತ್ತ ನಡೆದಿರುವ ನಿಮಗೆ ಉಂಟಾಗಿರುವ ತೊಂದರೆಗಳು ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗದಿರಲೆಂದು ಪ್ರಾರ್ಥಿಸುತ್ತೇನೆ. ಇದು ದಿವಾನರ ಬಗ್ಗೆ ಇರಿಸಿಕೊಂಡಿದ್ದ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಯಾರು ನಿಸ್ಪೃಹರಾಗಿ, ರಾಜ್ಯಕ್ಕೆ ಮತ್ತು ತಮಗೆ ವಿಧೇಯರಾಗಿ ಸಲ್ಲಿಸುವರೋ ಅವರಿಗೆ ಮಹಾರಾಜರ ಬೆಂಬಲ, ನಿಷ್ಠೆ ಇದೇ ಪ್ರಮಾಣದಲ್ಲಿ ದೊರೆತವು.

ಮತೀಯ ಸೌಹಾರ್ದಕ್ಕೆ ಮೈಸೂರು ಮೊದಲಿನಿಂದಲೂ ಹೆಸರುವಾಸಿ. ನಾಲ್ವಡಿಯವರು ಮತ್ತು ಅವರ ಎಲ್ಲ ದಿವಾನರೂ ಆ ಬಗ್ಗೆ ಗರ್ವಪಡುತ್ತಿದ್ದರು. ಆ ಬಗ್ಗೆ ಮಿರ್ಜಾ ಅವರು ತಮ್ಮ ‘ಸಾರ್ವಜನಿಕ ಜೀವನ’ ಎಂಬ ಆತ್ಮಚರಿತ್ರೆಯಲ್ಲಿ ವಿಪುಲವಾಗಿ ಬರೆದಿರುವರು.‘ ನಾಲ್ವಡಿಯವರು ಎಲ್ಲ ಧರ್ಮೀಯರ ಸಮುದಾಯದವರ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದರು. ಮತ್ತು ಅರ್ಥಪೂರ್ಣವಾದ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರು.

Tags:
error: Content is protected !!