Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಆಯಿಷ್‌ಗೆ ಮೊದಲ ರಾಷ್ಟ್ರೀಯ ಪುರಸ್ಕಾರ

ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮ ವಿಭಾಗದಲ್ಲಿನ ಸಾಧನೆಗೆ ಪುರಸ್ಕಾರ..

ಆಂದೋಲನ ಸಂದರ್ಶನದಲ್ಲಿ ಪ್ರಶಸ್ತಿಯ ಖುಷಿ ಹಂಚಿಕೊಂಡ ಆಯಿಷ್‌ ನಿರ್ದೇಶಕಿ ಪ್ರೊ.ಎಂ.ಪುಷ್ಪವತಿ

ಮೈಸೂರು: ಏಷ್ಯಾ ಉಪಖಂಡದ ಒಂದು ವಿಶಿಷ್ಟ ಸಂಸ್ಥೆಯಾಗಿರುವ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ೫೯ ವಸಂತಗಳನ್ನು ಕಂಡಿದ್ದು, ಇದೇ ಮೊದಲ ಬಾರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು. ಸಮಾಜದ ನಾನಾ ಕ್ಷೇತ್ರಗಳಲ್ಲಿ ವಿಶೇಷಚೇತನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರತಿವರ್ಷ ಕೇಂದ್ರ ಸರ್ಕಾರ ಕೊಡಮಾಡುವ ಪ್ರಶಸ್ತಿ ಇದಾಗಿದೆ.

ಪ್ರಶಸ್ತಿ ಪಡೆದ ೩೩ ವ್ಯಕ್ತಿ ಹಾಗೂ ಸಂಸ್ಥೆಗಳಲ್ಲಿ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯೂ ಒಂದಾಗಿದೆ. ಪ್ರಶಸ್ತಿ ಸ್ವೀಕರಿಸಿದ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಂ. ಪುಷ್ಪವತಿ ಅವರು ‘ಆಂದೋಲನ’ ದಿನಪತ್ರಿಕೆ ನಡೆಸಿದ ಸಂದರ್ಶನದಲ್ಲಿ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

 

ಆಂದೋಲನ: ಆಯಿಷ್‌ಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು?

ಪುಷ್ಪವತಿ: ಇದೇ ಮೊದಲ ಬಾರಿಗೆ ವಾಕ್ ಮತ್ತು ಶ್ರವಣ ಸಂಸ್ಥೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿರುವುದರಿಂದ ಸ್ವಾಭಾವಿಕವಾಗಿ ನಮ್ಮೆಲ್ಲರಿಗೂ ಖುಷಿಯಾಗಿದೆ. ಪ್ರಶಸ್ತಿಯ ಹಿಂದೆ ಅನೇಕರ ಶ್ರಮವಿದೆ. ನನ್ನೊಬ್ಬಳಿಂದ ಆದ ಕೆಲಸ ಇದಲ್ಲ. ಪ್ರಶಸ್ತಿ ಎಲ್ಲರಿಗೂ ಸಂಭ್ರಮ ತಂದಿದೆ. ಇದಕ್ಕೆ ಹಿಂದಿನ ನಿರ್ದೇಶಕರ ಒತ್ತಾಸೆಯೂ ಇದೆ.

ಆಂದೋಲನ: ಪುರಸ್ಕಾರಕ್ಕೆ ಆಯ್ಕೆಯಾಗಿದ್ದು ಹೇಗೆ?

ಪುಷ್ಪವತಿ: ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಮಂತ್ರಾಲಯ ಇದರ ಜವಾಬ್ದಾರಿ ನಿರ್ವಹಿಸುತ್ತದೆ. ವಾಕ್ ಮತ್ತು ಶ್ರವಣ ಸಂಸ್ಥೆಯ ಹಿಂದಿನ ನಿರ್ದೇಶಕರು ಪ್ರಶಸ್ತಿ ಪಡೆಯುವ ಬಗ್ಗೆ ಯಾವತ್ತೂ ಯೋಚಿಸಲಿಲ್ಲ. ಸಂಸ್ಥೆಯು ಏನೆಲ್ಲಾ ಸೇವೆಗಳನ್ನು ನೀಡಬಹುದು ಎನ್ನುವ ಗುರಿಯನ್ನು ಹೊಂದಿದ್ದರು. ಆ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕಾರಣ ಪ್ರಶಸ್ತಿ ಬಂದಿರಲಿಲ್ಲ. ಈ ಸಾಲಿನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ತಿಂಗಳಲ್ಲಿ ಪತ್ರಿಕೆಗಳಲ್ಲಿ ಬಂದ ಜಾಹೀರಾತು ನೋಡಿ ನಾವೂ ಯಾಕೆ ಅರ್ಜಿ ಸಲ್ಲಿಸಬಾರದು ಎಂದು ಆಲೋಚಿಸಿ ಈ ಬಗ್ಗೆ ಚರ್ಚಿಸಿ ಮೊದಲ ಬಾರಿಗೆ ಅರ್ಜಿ ಹಾಕಿದವು. ಸಂಸ್ಥೆಯ ಕಾರ್ಯವೈಖರಿ ನೋಡಿ ಪ್ರಶಸ್ತಿ ಲಭಿಸಿತು. ಇಷ್ಟು ವರ್ಷ ಹಳೆಯದಾದ ಸಂಸ್ಥೆಗೆ ನ್ಯಾಕ್ ಸಮಿತಿ ಭೇಟಿ ನೀಡಿದಾಗ ನಿಮಗೆ ಯಾವ ಯಾವ ಪ್ರಶಸ್ತಿ ಬಂದಿದೆ ಎಂದು ಕೇಳುತ್ತಾರೆ. ಸಂಸ್ಥೆ ತನ್ನನ್ನು ಗುರುತಿಸಿಕೊಳ್ಳಲು ಪ್ರಶಸ್ತಿಯ ಅವಶ್ಯಕತೆ ಇತ್ತು. ಹಾಗಾಗಿ ನಾವು ಅರ್ಜಿ ಸಲ್ಲಿಸಿದ್ದವು .

ಆಂದೋಲನ: ಸಂಸ್ಥೆಯ ಯಾವ ಸಾಧನೆಗಾಗಿ ಈ ಪುರಸ್ಕಾರ ಲಭಿಸಿದೆ?

ಪುಷ್ಪವತಿ: ಒಂದು ಸಂಸ್ಥೆಗೆ ಪ್ರಶಸ್ತಿ ನೀಡುವಾಗ ವಿಕಲ ಚೇತನರ ಕಲ್ಯಾಣ ಕ್ಕಾಗಿ ಅದು ಮಾಡಿರುವ ಸಮಗ್ರ P ಲ U ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಆಯಿಷ್ ಕಳೆದ ೫೯ ವರ್ಷಗಳಿಂದ ವಿಶೇಷ ಚೇತನರಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಸಾಕಷ್ಟು ಕೆಲಸಗಳನ್ನು ಮಾಡಿದೆ. ಪ್ರಸ್ತುತ ಇಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿಭಾಗಗಳನ್ನೂ ಆರಂಭಿಸಲಾಗಿದೆ. ಪ್ರತಿದಿನ ಆಯಿಷ್‌ಗೆ ೬೦ರಿಂದ ೭೦ ಮಂದಿ ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಕಿವಿ ಕೇಳಿಸದೆ ಮಾತನಾಡಲು ಸಾಧ್ಯವಾಗದ ಮಕ್ಕಳು, ಕಿವಿ ಕೇಳದ ಹಿರಿಯರು ಹೀಗೆ ಅನೇಕರು ಮೈಸೂರು ಮಾತ್ರವಲ್ಲದೇ ಬೇರೆ ರಾಜ್ಯ ಹಾಗೂ ದೇಶಗಳಿಂದಲೂ ಆಗಮಿಸುತ್ತಾರೆ. ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಬೇಕಾಗುತ್ತದೆ. ಅವರು ಉಳಿದುಕೊಳ್ಳಲು ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಅದನ್ನೆಲ್ಲ ನೋಡಿಕೊಳ್ಳಲು ಹಾಗೂ ಚಿಕಿತ್ಸೆ ನೀಡಲು ನಮ್ಮಲ್ಲಿ ಸಾಕಷ್ಟು ಮಾನವ ಸಂಪನ್ಮೂಲಗಳಿವೆ. ಚಿಕಿತ್ಸೆ ವೆಚ್ಚವೂ ಇಲ್ಲಿ ಕಡಿಮೆ ಇದೆ. ಹೊರಗಿನ ಆಸ್ಪತ್ರೆಗಳಿಗೆ ಹೋಲಿಸಿದರೆ ಇಲ್ಲಿ ಶೇ. ೫೦ ಹಾಗೂ ಅದಕ್ಕಿಂತಲೂ ಕಡಿಮೆ ಇರುತ್ತದೆ. ಇಲ್ಲಿನ ಶೈಕ್ಷಣಿಕ ಕೋರ್ಸ್‌ಗಳಿಗೂ ಈಗ ಬೇಡಿಕೆ ಹೆಚ್ಚಾಗಿದೆ.

ಆಂದೋಲನ: ಸಂಸ್ಥೆ ಹೊಂದಿರುವ ಮುಂದಿನ ಗುರಿ ಏನು?

ಪುಷ್ಪವತಿ: ರಾಜ್ಯ ಸರ್ಕಾರ ಆಯಿಷ್‌ಗಾಗಿ ವರುಣ ಸಮೀಪ ೧೦ ಎಕರೆ ಜಮೀನನ್ನು ನೀಡಿದೆ. ಇಲ್ಲಿ ಸದ್ಯಕ್ಕೆ ಒಂದು ಕ್ಲಿನಿಕ್ ಆರಂಭಿಸುವ ಚಿಂತನೆ ಇದೆ. ಈಗಿರುವ ಸ್ಥಳದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಇಲ್ಲ. ಹಾಗಾಗಿ ಸರ್ಕಾರ ಕೊಟ್ಟಿರುವ ಈ ಸ್ಥಳದಲ್ಲಿ ಹೊರಗಿನಿಂದ ಚಿಕಿತ್ಸೆಗೆ ಬರುವವರು ಹಾಗೂ ಅವರ ಜೊತೆ ಬರುವವರಿಗೆ ಉಳಿದುಕೊಳ್ಳಲು ಸ್ಥಳಾವಕಾಶ ಹಾಗೂ ಉನ್ನತ ಚಿಕಿತ್ಸೆಗಳಿಗಾಗಿ ಇಲ್ಲಿ ವ್ಯವಸ್ಥೆ ಮಾಡಬೇಕೆನ್ನುವ ಆಲೋಚನೆ ಇದೆ. ಈ ಬಗ್ಗೆ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆ ಸಲ್ಲಿಸುವ ಆಲೋಚನೆ ಇದೆ. ಇದಕ್ಕೆ ಡಿಪಿಆರ್ ಮಾಡಿಸಿ ನಂತರ ಪ್ರಸ್ತಾವನೆ ಸಲ್ಲಿಸಲು ಆಲೋಚಿಸುತ್ತಿದ್ದೇವೆ.

ಆಂದೋಲನ: ಕೇಂದ್ರದಿಂದ ಏನೆಲ್ಲಾ ಸಹಕಾರ ಸಿಗುತ್ತದೆ?

ಪುಷ್ಪವತಿ: ಕೇಂದ್ರ ಸರ್ಕಾರ ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧನೆಗೆ ಅಗತ್ಯ ಸವಲತ್ತುಗಳನ್ನು ನೀಡುತ್ತಿದೆ. ನಮ್ಮ ಪ್ರಸ್ತಾವನೆಗೆ ಸುಮಾರು ಶೇ. ೭೦-೮೦ರಷ್ಟು ಅನು ದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತದೆ.

 

Tags:
error: Content is protected !!