Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಹೆದ್ದಾರಿಯಲ್ಲಿ ಹರಿಯುವ ಚರಂಡಿ ನೀರು; ವಾಹನ ಸವಾರರಲ್ಲಿ ಭೀತಿ

ಚಿಕ್ಕಹಳ್ಳಿ ಗ್ರಾಮದ ರಸ್ತೆಯಲ್ಲಿ ಅವ್ಯವಸ್ಥೆ; ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಲು ಆಗ್ರಹ
ಎಂ. ನಾರಾಯಣ

ತಿ.ನರಸೀಪುರ: ವರುಣ ವಿಧಾನಸಭಾ ಕ್ಷೇತ್ರದ ಚಿಕ್ಕಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಗ್ರಾಮದ ಚರಂಡಿ ನೀರು ರಸ್ತೆಗೆ ಹರಿದು ಬರುತ್ತಿದ್ದು ಅಪಘಾತಗಳು ಸಂಭವಿಸುವ ಅಪಾಯವಿದೆ.

ಜತೆಗೆ ಈ ರಸ್ತೆಯಲ್ಲಿ ಅತಿಯಾದ ವಾಹನ ಸಂಚಾರ ಇರುವುದರಿಂದ ಪಾದಚಾರಿಗಳು, ಶಾಲಾ ಮಕ್ಕಳು ವಾಹನಗಳು ಹಾದುಹೋದಾಗ ಚಿಮ್ಮುವ ಚರಂಡಿ ನೀರಿನ ಪ್ರೋಕ್ಷಣೆಯನ್ನೂ ಮಾಡಿಸಿಕೊಳ್ಳಬೇಕಾಗಿದೆ.

ಚಿಕ್ಕಹಳ್ಳಿ ಗ್ರಾಮದ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯವಸ್ಥೆ ಮಾಡದ ಕಾರಣ ಮುಖ್ಯರಸ್ತೆಗೆ ನೀರು ಹರಿದು ಬಂದು ನಿಂತಿದೆ.

ಅತಿಯಾದ ನೀರು ಬಂದಾಗ ರಸ್ತೆ ಮೇಲೆ ಹರಿಯುತ್ತದೆ. ಇದರಿಂದ ವಾಹನಗಳು ಸಂಚರಿಸಿದಾಗ ಪಾದಚಾರಿ ಗಳು, ಶಾಲಾ ಮಕ್ಕಳು ಹಾಗೂ ದ್ವಿಚಕ್ರ ವಾಹನಗಳ ಸವಾರರಿಗೆ ಚರಂಡಿ ನೀರಿನ ಪ್ರೋಕ್ಷಣೆಯಾಗುತ್ತಿದೆ.

ಅಲ್ಲದೆ ನಿಂತ ಚರಂಡಿ ನೀರಿನಿಂದಾಗಿ ರಸ್ತೆಯ ಆಸುಪಾಸಿನಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಎದುರಾಗಿದೆ.

ರಾಷ್ಟ್ರೀಯ ಹೆದ್ದಾರಿಯಾಗಿರು ವುದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆ ಮೇಲೆ ಚರಂಡಿ ನೀರು ಹರಿಯಲು ಆರಂಭಿಸಿದರೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.

ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಲೇ ಗಮನ ಹರಿಸಿ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಂಭವನೀಯ ಅಪಾಯ ವನ್ನು ತಪ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವರುಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಚಿಕ್ಕಹಳ್ಳಿ ಗ್ರಾಮ ಒಳಪಟ್ಟಿದ್ದು, ಈ ಸಮಸ್ಯೆ ಬಗ್ಗೆ ಈಗಾಗಲೇ ರಾಮನಗರದ ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾದವರಿಗೆ ಪತ್ರ ಬರೆಯಲಾಗಿದೆ. ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕಿದೆ. -ಕುಮಾರ್ ಆರಾಧ್ಯ, ಪಿಡಿಒ, ವರುಣ ಗ್ರಾಪಂ.

ಕಳೆದ ಆರು ತಿಂಗಳಿಂದ ಈ ಸಮಸ್ಯೆ ಉಂಟಾಗಿದ್ದು, ನಾವು ರಸ್ತೆಯಲ್ಲಿ ನಡೆದುಕೊಂಡು ಹೋದರೆ ವಾಹನಗಳು ಚಲಿಸಿದಾಗ ಚರಂಡಿ ನೀರು ನಮ್ಮ ಮೇಲೆ ಎರಚಲ್ಪ ಡುತ್ತದೆ. ಸ್ಥಳೀಯ ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯ ದಿಂದ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಇಂತಹ ಸಮಸ್ಯೆ ಎದುರಾಗಿದೆ, ಅನಾಹುತಗಳು ಉಂಟಾಗುವ ಮುನ್ನ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು, -ಎಸ್. ಹೊಸಕೋಟೆ ರಘು, ರೈತ ಸಂಘದ ಜಿಲ್ಲಾ ಮುಖಂq

Tags:
error: Content is protected !!