Mysore
25
scattered clouds

Social Media

ಬುಧವಾರ, 14 ಜನವರಿ 2026
Light
Dark

‘ಒಳಚರಂಡಿ ಸಮಸ್ಯೆ: ಸುಣ್ಣದ ಕೇರಿ ನಿವಾಸಿಗಳು ಹೈರಾಣ’

ನಿವಾಸಿಗಳ ದೂರಿಗೆ ಸ್ಪಂದಿಸದ ಮಹಾನಗರಪಾಲಿಕೆ ಅಧಿಕಾರಿಗಳು

ಮೈಸೂರು: ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ನಗರದ ಕೆಲ ನಿವಾಸಿಗಳ ಮನೆಗಳಿಗೆ ಒಳಚರಂಡಿ ನೀರು ನುಗ್ಗುತಿದ್ದು, ಸಮಸ್ಯೆಯನ್ನು ಕೇಳವವರೇಇಲ್ಲದಂತಾಗಿದೆ. ಕೊಳಚೆ ನೀರು ಮನೆಗಳಿಗೆ ನುಗ್ಗುತ್ತಿರು ವುದರಿಂದ ಡೆಂಗ್ಯು, ಮಲೇರಿಯಾದಂಥ ಕಾಯಿಲೆಗಳಿಗೆ ತುತ್ತಾಗಿ ಪ್ರಾಣಾಪಾಯ ಎದುರಿಸುವಂತಾಗಿದೆ.

ಈ ಸಮಸ್ಯೆಯನ್ನು ನಿವಾಸಿಗಳು ಪಾಲಿಕೆ ಗಮನಕ್ಕೆ ತಂದು ಸರಿಪಡಿಸಲು ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ತಕ್ಷಣ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಿವಾಸಿಗಳೊಡಗೂಡಿ ಪಾಲಿಕೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಎಚ್ಚರಿಕೆ ನೀಡಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಸುಣ್ಣದಕೇರಿಯ ಎರಡು ಮತ್ತು ಮೂರನೇ ಅಡ್ಡ ರಸ್ತೆಗಳಲ್ಲಿ ಒಳಚರಂಡಿ ನೀರು ಮೇಲೆ ಉಕ್ಕಿ ಮನೆಗಳಿಗೆ ನುಗ್ಗುತ್ತಿದೆ. ಸಮಸ್ಯೆ ಬಗೆಹರಿಸಬೇಕೆಂದು ಪಾಲಿಕೆ ಅಽಕಾರಿಗಳಿಗೆ ದೂರು ನೀಡಿದರೆ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ, ಸಮಸ್ಯೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸೂಕ್ತ ಪರಿಹಾರ ಕಲ್ಪಿಸದೇ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಮಲಿನ ನೀರು ಮನೆಗಳ ಒಳಗೆ ನುಗ್ಗುವುದರಿಂದ ದುರ್ವಾಸನೆ ಹರಡಿ, ಮನೆಯ ಪರಿಸರವೇ ಹಾಳಾಗುತ್ತಿದೆ. ದುರ್ವಾಸನೆ ನಡುವೆ ಊಟ, ತಿಂಡಿ ಸೇವಿಸುವುದೂ ಕಷ್ಟವಾಗಿದೆ.

ನಿವಾಸಿಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ನಗರಪಾಲಿಕೆ ಇಲ್ಲಿನ ಜನರಿಗೆ ಸಾಂಕ್ರಾಮಿಕ ರೋಗಗಳನ್ನು ದೀಪಾವಳಿ ಉಡುಗೊರೆಯಾಗಿ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಕ್ಷೇತ್ರದ ಶಾಸಕರಿಗೆ ಕರೆ ಮಾಡಿ ಸಮಸ್ಯೆ ತಿಳಿಸಿದಾಗ ೨-೩ ತಿಂಗಳುಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಆದರೆ ಇದುವರೆಗೂ ಯಾವ ಪ್ರಯೋಜನವೂ ಆಗಿಲ್ಲ. ಹೀಗಾದರೆ ಜನ ಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ಒಳಚರಂಡಿ ನೀರು ಮನೆಯೊಳಗೆ ಬರುತ್ತಿರುವ ಕಾರಣ ಶೌಚಾಲಯಕ್ಕೆ ಹೋಗಲಾಗದೇ, ಸಾರ್ವಜನಿಕ ಶೌಚಾಲಯ ಬಳಸುವಂತಾಗಿದೆ. ಮಲಗುವ ವೇಳೆ ಮೂಗಿಗೆ ಬಟ್ಟೆ ಕಟ್ಟಿಕೊಂಡು ಮಲಗುವ ಪರಿಸ್ಥಿತಿಎದುರಾಗಿದೆ. ಹಲವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿವಾಸಿಗಳ ಗೋಳು ಕೇಳುವರು ಯಾರು?. ಕೂಡಲೇ ಇದನ್ನು ಸರಿಪಡಿಸದಿದ್ದರೆ, ನಿವಾಸಿಗಳು ಕುಟುಂಬ ಸಮೇತರಾಗಿ ನಗರ ಪಾಲಿಕೆ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

” ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಬಡಾವಣೆಗಳ ಬಗ್ಗೆ ಅರಿವೇ ಇಲ್ಲ. ಯಾವುದೇ ರೀತಿಯ ಸಾರ್ವಜನಿಕ ಸಭೆಯನ್ನೂ ಕರೆದಿಲ್ಲ, ಅಧಿಕಾರಿಗಳು ಸಭೆ ಕರೆದು ಮಾತನಾಡಿಲ್ಲ. ಪಾಲಿಕೆ ಚುನಾಯಿತ ಪ್ರತಿನಿಽಗಳಿಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ.ನಿವಾಸಿಗಳು ಕರೆ ಮಾಡಿದರೆ ಸಹಾಯಕ ಇಂಜಿನಿಯರ್‌ಗಳು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಳ್ಳುತ್ತಾರೆ.”

-೨-೩ನೇ ಕ್ರಾಸ್ ನಿವಾಸಿಗಳು, ಸುಣ್ಣದಕೇರಿ

Tags:
error: Content is protected !!