Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಕನ್ನಡ ಪ್ರೇಮಿಗಳನ್ನು ಸೆಳೆಯುತ್ತಿರುವ ಡಾ. ರಾಜ್ ಚಿತ್ರಗಳು

ಚಿರಂಜೀವಿ ಸಿ. ಹುಲ್ಲಹಳ್ಳಿ
ಮಂಡ್ಯ: ಕನ್ನಡ ನಾಡು ಎಂದೂ ಮರೆಯಲಾಗದಂತಹ ವರನಟ ಡಾ. ರಾಜ್ ಕುಮಾರ್ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಕನ್ನಡವೆಂದರೆ ಅಲ್ಲಿ ಅಣ್ಣಾವ್ರ ಸ್ಮರಣೆ ಇರಲೇಬೇಕು. ೮೮ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾವಿದರೊಬ್ಬರು ತಮ್ಮ ಕೈಚಳಕದಲ್ಲಿ ಅರಳಿಸಿರುವ ಡಾ. ರಾಜ್ ಅವರ ಚಿತ್ರ ಕನ್ನಡ ಪ್ರೇಮಿಗಳನ್ನು ಆಕರ್ಷಿಸುತ್ತಿದೆ.

ಹೌದು. . . ಪೆನ್ಸಿಲ್ ಮತ್ತು ಕಲರ್ ಪೇಂಟಿಂಗ್ ಮೂಲಕ ಅಣ್ಣಾವ್ರ ಮೊದಲ ಸಿನಿಮಾದಿಂದ ಹಿಡಿದು ೨೦೯ ಸಿನಿಮಾ ಗಳು , ವಿಭಿನ್ನ ಗೆಟಪ್‌ಗಳಿರುವ ಚಿತ್ರಗಳು

ಇದೇ ಮೊದಲ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನ ಕಾಣುತ್ತಿದ್ದು, ನೋಡುಗರನ್ನು, ಅಭಿಮಾನಿಗಳನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.

ಡಾ. ರಾಜ್ ಅಭಿನಯಿಸಿದ ವಾಹನ ಚಾಲಕ, ಕಾರ್ಖಾನೆ ನೌಕರ, ಭೂಮಿ ಉಳುವ ರೈತ, ರಾಜ ಮಹಾರಾಜನ ಪಾತ್ರಗಳ ಚಿತ್ರಗಳನ್ನು ಮಂಡ್ಯ ಜಿಲ್ಲೆ ಕೆರ ಗೋಡು ಗ್ರಾಮದ ಗೌರಿ ಶಂಕರ ಸೇವಾ ಟ್ರಸ್ಟ್ ನ ನರಸಿಂಹಚಾರ್ ಅವರು ತಮ್ಮ ಕೈಚಳಕದಿಂದ ಬಿಡಿಸಿ ಅಭಿಮಾನ ಮರೆದಿದ್ದಾರೆ. ಎಷ್ಟೋ ರಾಜ್‌ಕುಮಾರ್ ಅಭಿಮಾನಿ ಗಳಿಗೆ ಅವರು ಅಭಿನಯಿಸಿರುವ ಚಿತ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ಈ ಪ್ರದರ್ಶನಕ್ಕೆ ಒಮ್ಮೆ ಭೇಟಿ ನೀಡಿದರೆ ಸಾಕು ಡಾ. ರಾಜ್ ಅವರು ನಟಿಸಿರುವ ೨೦೩ ನಾಯಕ ನಟನ ಪಾತ್ರಗಳು, ೬ ಪೋಷಕ ಪಾತ್ರಗಳ ಸಿನಿಮಾಗಳ ಬಗ್ಗೆ ಮಾಹಿತಿ ಸಿಗುವುದು

 

Tags: