Mysore
16
overcast clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಜೂ.೧೩ಕ್ಕೆ ಡೋರ‍್ನಹಳ್ಳಿ ಸಂತ ಅಂತೋಣಿ ಬಸಿಲಿಕಾ ವಾರ್ಷಿಕ ರಥೋತ್ಸವ

ಕೆ.ಆರ್.ನಗರ: ೮ ದಿನಗಳ ಕಾಲ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ

ಭೇರ್ಯ ಮಹೇಶ್

ಕೆ.ಆರ್.ನಗರ: ತಾಲ್ಲೂಕಿನ ಡೋರ‍್ನಹಳ್ಳಿಯ ವಿಶ್ವ ವಿಖ್ಯಾತ ಸಂತ ಅಂತೋಣಿ ಬಸಿಲಿಕಾದ ವಾರ್ಷಿಕ ಮಹೋತ್ಸವ ಎಂಟು ದಿನಗಳ ಕಾಲ ನಡೆಯಲಿದ್ದು, ಜೂನ್ ೧೩ರಂದು ವಿಜೃಂಭಣೆಯಿಂದ ತೇರಿನ ಮೆರವಣಿಗೆ ನಡೆಯಲಿದೆ.

ವಾರ್ಷಿಕೋತ್ಸವ ಆರಂಭದ ಮೊದಲ ದಿನವಾದ ಬುಧವಾರ ಮುಂಜಾನೆ ೫.೩೦ಕ್ಕೆ ಮೈಸೂರಿನ ಧರ್ಮಕ್ಷೇತ್ರದ ಆಡಳಿತಾಧಿಕಾರಿ ಡಾ.ಬರ್ನಾರ್ಡ್ ಮೊರಾಸ್ ಧ್ವಜಾರೋ ಹಣ ಮತ್ತು ಕನ್ನಡದ ಬಲಿಪೂಜೆ ನೆರವೇರಿಸಿದರು.

ಜೂ.೫ರಂದು ಗುರುವಾರ ಸಂಜೆ ೫.೩೦ಕ್ಕೆ ವಾರ್ಷಿಕೋತ್ಸವದ ಅಂಗವಾಗಿ ಮೈಸೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷ ಡಾ.ಥಾಮಸ್ ಆಂಟನಿ ವಾಳಪಿಳ್ಳಿ ಅವರಿಂದ ಭರವಸೆಯ ವಿಮೋಚನ ಮಾರ್ಗ ಎಂಬ ವಿಚಾರದ ಬಗ್ಗೆ ಉಪನ್ಯಾಸ ನಡೆಯಿತು.

ಜೂ.೬ರಂದು ಶುಕ್ರವಾರ ಸಂಜೆ ೫.೩೦ಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕ್ಸೇವಿಯರ್ ಸದನದ ನಿರ್ದೇಶಕ ವಂದನೀಯ ಗುರು ಎಡ್ವರ್ಡ್ ಫಿಲಿಪ್ ಅವರಿಂದ ಭರವಸೆಯ ಪುನಃ ಸ್ಥಾಪನೆಯ ಬುನಾದಿ ವಿಷಯದ ಬಗ್ಗೆ ವಿಚಾರ ಸಂಕಿರಣ ಜರುಗಲಿದೆ.

ಜೂ.೭ರಂದು ಶನಿವಾರ ಸಂಜೆ ೫.೩೦ಕ್ಕೆ ಕುಶಾಲನಗರದ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರು ವಂದನೀಯ ಗುರು ಎಂ. ಮಾರ್ಟಿನ್ ಅವರಿಂದ ಭರವಸೆ ನವ ಜೀವನದ ಪ್ರಾರಂಭದ ಬೋಧನೆ ಆಯೋಜಿಸಲಾಗಿದೆ. ೮ರಂದು ಭಾನುವಾರ ಸಂಜೆ ೫.೩೦ಕ್ಕೆ ಮೈಸೂರು ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ಆಲ್ಛ್ರೆಡ್ ಜೆ.ಮೆಂಡೋನ್ಸಾ ಅವರಿಂದ ಭರವಸೆ ಸಂಕಷ್ಟದಲ್ಲಿ ಸಹಾಯ ವಾಗುತ್ತದೆ ಎಂಬ ವಾಣಿಯ ಬಗ್ಗೆ ಮಾರ್ಗ ದರ್ಶನ ನಡೆಯಲಿದೆ.

ಜೂ.೯ರಂದು ಸೋಮವಾರ ಸಂಜೆ ೫.೩೦ಕ್ಕೆ ಸೋಮವಾರಪೇಟೆಯ ಜಯವೀರ ಮಾತೆ ದೇವಾಲಯದ ಧರ್ಮಗುರುಗಳಾದ ಅವಿನಾಶ್ ಅವರಿಂದ ಭರವಸೆ ನ್ಯಾಯವನ್ನು ಸಾಽಸುತ್ತದೆ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ. ೧೦ರಂದು ಮಂಗಳವಾರ ಸಂಜೆ ೫.೩೦ಕ್ಕೆ ಗಂಜಾಂ ಅಮಲೋದ್ಭವ ಮಾತೆಯ ದೇವಾಲಯದ ಧರ್ಮಗುರು ಜಾನ್ ಸಗಾಯ ಪುಷ್ಪರಾಜ್ ಅವರಿಂದ ಭರವಸೆ ದಾಸತ್ವದ ಮೇಲೆ ಜಯ ಸಾಧಿಸುತ್ತದೆ ಎಂಬ ವಿಚಾರದ ಕುರಿತು ಉಪನ್ಯಾಸ, ಜೂ.೧೧ರಂದು ಬುಧವಾರ ಸಂಜೆ ೫.೩೦ಕ್ಕೆ ಮೈಸೂರಿನ ಎಂಡಿಇಎಸ್ ಕೋಶಾಽಕಾರಿ ವಂದನೀಯ ಗುರು ನವೀನ್‌ಕುಮಾರ್ ಅವರಿಂದ ಭರವಸೆ ಸ್ವರ್ಗ ಸಾಮ್ರಾಜ್ಯಕ್ಕೆ ದಾರಿ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಬೋಧನೆ ನಡೆಯಲಿದೆ. ಜೂ.೧೨ರಂದು ಗುರುವಾರ ಸಂಜೆ ೫.೩೦ಕ್ಕೆ ಪುಷ್ಪಗಿರಿ ಬಾಲ ಏಸು ದೇವಾಲಯದ ಧರ್ಮಗುರು ಮರಿಯ ಕ್ಸೇವಿಯರ್ ಅವರಿಂದ ಭರವಸೆ ಹೊಸ ಆಜ್ಞೆಯ ಸಮುದಾಯವನ್ನು ನಿರ್ಮಿಸು ತ್ತದೆ ಎಂಬ ವಿಷಯದ ಬಗ್ಗೆ ಪ್ರಬೋಧನೆ ಏರ್ಪಡಿಸಲಾಗಿದೆ.

ವಾರ್ಷಿಕೋತ್ಸವದ ಅಂತಿಮ ದಿನವಾದ ಜೂ.೧೩ರಂದು ಶುಕ್ರವಾರ ಬೆಳಿಗ್ಗೆ ೧೦ ಗಂಟೆಗೆ ಮೈಸೂರು ಧರ್ಮ ಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಡಾ.ಬರ್ನಾರ್ಡ್ ಮೊರಾಸ್ ಅವರಿಂದ ಹಬ್ಬದ ಆಡಂಬರ ಗಾಯನ ಬಲಿಪೂಜೆ ಜರುಗಲಿದೆ. ಆನಂತರ ಸಂಜೆ ೮ ಗಂಟೆಗೆ ಸಾವಿರಾರು ಭಕ್ತರ ನಡುವೆ ಡೋರ‍್ನಹಳ್ಳಿ ಸಂತ ಅಂತೋಣಿಯವರ ವೈಭವದ ತೇರಿನ ಮೆರವಣಿಗೆ ನಡೆಯಲಿದೆ.ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಸಿಲಿಕಾದ ಆಡಳಿತಾಧಿಕಾರಿ ಪ್ರವೀಣ್‌ಪೆದ್ರು ಮನವಿ ಮಾಡಿದ್ದಾರೆ.

” ವಿಶ್ವವಿಖ್ಯಾತ ಸಂತ ಅಂಥೋಣಿಯವರ ಬಸಿಲಿಕಾ ಜಾತ್ರಾ ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ತಾಲ್ಲೂಕು ಆಡಳಿತದವರು ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಹಕಾರ ನೀಡಿದ್ದಾರೆ.”

-ಫಾ.ಡೇವಿಡ್ ಸಗಾಯ ರಾಜ್, ರೆಕ್ಟರ್, ಸಂತ ಅಂಥೋಣಿಯವರ ಬಸಿಲಿಕಾ, ಡೋರ‍್ನಹಳ್ಳಿ 

Tags:
error: Content is protected !!