ನಾಲ್ಕು ವೇದಿಕೆಗಳಲ್ಲಿ ೯೪ ಸ್ಪರ್ಧೆಗಳು: ೩೦೦ಕ್ಕೂ ಹೆಚ್ಚು ಪ್ರತಿಭೆಗಳು ಭಾಗಿ
ಕೆ.ಎಂ.ಇಸ್ಮಾಯಿಲ್ ಕಂಡಕರೆ
ಚೆಟ್ಟಳ್ಳಿ:ಎಸ್‌ಕೆಎಸ್‌ಎಸ್‌ಎ- ಹಾಗೂ ಸರ್ಗಲಯ ಸಮಿತಿಯ ಜಂಟಿ ಆಶ್ರಯದಲ್ಲಿ ಕೊಡಗು ಜಿಲ್ಲಾಮಟ್ಟದ ಕಲೋತ್ಸವ ಸಿದ್ದಾಪುರದಲ್ಲಿ ಡಿ.೧ರಂದು ನಡೆಯಲಿದೆ.
ಕಲೆ, ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಎರಡು ವರ್ಷಗಳಿಗೊಮ್ಮೆ ಎಸ್‌ಕೆಎಸ್‌ಎಸ್‌ಎಫ್ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ, ಕಲೋತ್ಸವ ಹಮ್ಮಿಕೊಂಡು ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುತ್ತಾ ಬಂದಿದೆ. ಎಸ್‌ಕೆಎಸ್‌ಎಸ್‌ಎಫ್ ಸಿದ್ದಾಪುರ ವಲಯ, ವಿರಾಜಪೇಟೆ ಹಾಗೂ ಕುಶಾಲನಗರ ವಲಯ ಮಟ್ಟದ ಕಲೋತ್ಸವವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕೇರಳ ರಾಜ್ಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕಲೋತ್ಸವ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು, ಕರ್ನಾಟಕ ರಾಜ್ಯದಲ್ಲಿ ಕೂಡ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಎಸ್‌ಕೆಎಸ್‌ಎಸ್‌ಎಫ್ ವಿನೂತನ ರೀತಿಯಲ್ಲಿ ಇಸ್ಲಾಮಿಕ್ ಕಲೋತ್ಸವವನ್ನು ೨೦೨೨ರಲ್ಲಿ ಪರಿಚಯಿಸಿತು.
೪ ವಿಭಾಗ ೯೪ ಸ್ಪರ್ಧೆಗಳು: ಎಸ್‌ಕೆಎಸ್‌ಎಸ್ಎಫ್ ಕಲೋತ್ಸವದಲ್ಲಿ ಈ ಬಾರಿ ೨೫ ವರ್ಷದೊಳಗಿನ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಜೂನಿಯರ್, ಸೀನಿಯರ್, ಸೂಪರ್ ಸೀನಿಯರ್, ಜನರಲ್ ಗ್ರೂಪ್, ತ್ವಲಬಾ ಜೂನಿಯರ್ ಹಾಗೂ ತ್ವಲಬಾ ಸೀನಿಯರ್ ಸೇರಿ ಒಟ್ಟು ನಾಲ್ಕು ವಿಭಾಗಗಳಲ್ಲಿ ೯೪ಕ್ಕೂ ವಿವಿಧ ಸ್ಪರ್ಧೆಗಳು ನಡೆಯಲಿವೆ. ಪ್ರಸ್ತುತ ವಿದ್ಯಮಾನಗಳು, ಕಲೆ ಸಾಹಿತ್ಯ, ರಾಜಕೀಯ ಘಟನೆಗಳು, ಭಾರತ ಇತಿಹಾಸ ಹೀಗೆ ಹಲ ವಾರು ವಿಷಯಗಳನ್ನೊಳಗೊಂಡ ವಿವಿಧ ಸ್ಪರ್ಧೆಗಳು ಇಸ್ಲಾಮಿಕ್ ಕಲೋತ್ಸವದಲ್ಲಿ ನಡೆಯಲಿವೆ.
ಹಿಸ್ಟರಿ ಟಾಕ್, ಪ್ರಬಂಧ, ಹಾಡು, ಚಿತ್ರ ರಚನೆ, ಪೋಸ್ಟರ್ ಡಿಸೈನಿಂಗ್, ಕ್ವಿಝ್, ಕನ್ನಡ ಭಾಷಣ, ಪತ್ರಿಕಾ ವರದಿ ರಚನೆ, ಕವನ ರಚನೆ ಹಾಗೂ ವಾಚನ, ಹೀಗೆ ೯೪ ನಾನಾ ಸ್ಪರ್ಧೆಗಳು ಇರಲಿವೆ. ವಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ಪ್ರತಿಭೆಗಳು, ಸಿದ್ದಾಪುರದಲ್ಲಿ ನಡೆಯಲಿರುವ ಜಿ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸುವ ಸ್ಪರ್ಧಾಳುಗಳು ಡಿ.೧೪ ಮತ್ತು ೧೫ ರಂದು ನಡೆಯಲಿರುವ ರಾಜ್ಯಮಟ್ಟದ ಎಸ್‌ಕೆಎಸ್‌ಎಸ್‌ಎಫ್ ಕಲೋತ್ಸವದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
ಪ್ರಶಸ್ತಿಗಾಗಿ ಪೈಪೋಟಿ: ಕೊಡಗು ಜಿ ಮಟ್ಟದ ಎಸ್‌ಕೆಎಸ್‌ಎಸ್‌ಎಫ್ ಕಲೋತ್ಸವದ ಚಾಂಪಿಯನ್ ಪಟ್ಟ ಯಾರ ಮುಡಿಗೆ ಎಂಬ ಕುತೂಹಲ ಸಂಘಟನೆಯ ಕಾರ್ಯಕರ್ತರಲ್ಲಿ ಹೆಚ್ಚಿದೆ. ಕಳೆದ ಬಾರಿಯ ಜಿ ಮಟ್ಟದ ಕಲೋತ್ಸವದಲ್ಲಿ ಕುಶಾಲ ನಗರ ವಲಯ ಚಾಂಪಿಯನ್ ಪಟ್ಟವನ್ನು ಅಲಂಕ ರಿಸಿತ್ತು. ಆದರೆ, ಈ ಬಾರಿ ಎಲ್ಲಾ ವಲಯಗಳು ಸಮಾನವಾಗಿ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಮೂರು ವಲಯಗಳು ಸೇರಿ ೯೪ ಸ್ಪರ್ಧೆಗಳಲ್ಲಿ ಜಿಯ ವಿವಿಧ ಭಾಗಗಳ ೩೫೦ಕ್ಕೂ ಹೆಚ್ಚು ಪ್ರತಿಭೆಗಳು ಮತ್ತು ೧೦ಕ್ಕೂ ಅಧಿಕ ರಾಜ್ಯಮಟ್ಟದ ತೀರ್ಪುಗಾರರು ಕಲೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಫೆಸ್ಟ್ ಐಕಾನ್ ಪ್ರಶಸ್ತಿ ಸ್ಪರ್ಧಾಳುಗಳ ಮಧ್ಯೆ ಪೈಪೋಟಿ ಹಾಗೂ ಎ ಪ್ರತಿಭೆಗಳು ಭಾಗ ವಹಿಸಬೇಕೆಂಬ ಉzಶದಿಂದ ವಿನೂತನವಾಗಿ ಎಸ್‌ಕೆಎಸ್‌ಎಸ್‌ಎಫ್ ಕಲೋತ್ಸವದಲ್ಲಿ ಪ್ರತೀ ವಿಭಾಗಗಳಲ್ಲಿ ಫೆಸ್ಟ್ ಐಕಾನ್ ಹಾಗೂ ಕಲೋತ್ಸವದ ಕಲಾ ಪ್ರತಿಭೆ ಪ್ರಶಸ್ತಿಯನ್ನು ಸ್ಥಾಪಿಸಲಾಗಿದೆ. ವೇದಿಕೆ ಮತ್ತು ವೇದಿಕೆಯೇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅತೀ ಹೆಚ್ಚು ಅಂಕಗಳಿಸುವ ಪ್ರತಿ ವಿಭಾಗದ ಪ್ರತಿಭೆಯನ್ನು ಆಯಾ ವಿಭಾಗದ ಫೆಸ್ಟ್ ಐಕಾನ್ ಆಗಿ ಘೋಷಿಸಲಾಗುತ್ತದೆ.
ಅಲ್ಲದೇ ಕಲೋತ್ಸವದಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಪ್ರತಿಭೆಯನ್ನು ಕಲಾ ಪ್ರತಿಭೆ ಬಿರುದು ನೀಡಿ ಗೌರವಿಸಲಾಗುತ್ತದೆ.