ಪಂಜು ಗಂಗೊಳ್ಳಿ
ಕೆಲವು ದಿನಗಳ ಹಿಂದೆ ನಡೆದ ಪ್ಯಾರೀಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾರತ ಪಡೆದ ಆರು ಪದಕಗಳಲ್ಲಿ ಐದು ಪದಕಗಳನ್ನು ಗೆದ್ದವರು ಹರಾಣಿಗಳು, ಕ್ರೀಡೆ ಎಂಬುದು ಮಹರಾಣಿಗಳ ವಂಶಾವಳಿ ಯಲ್ಲೇ ಅಷ್ಟೊತ್ತಿರುವಂತಿದೆ! ಹರಿಯಾಣದಲ್ಲಿ ಎಲ್ಲ ಅಂಗಾಂಗಗಳು ಸರಿಯಾಗಿರುವವರು ಮಾತ್ರವಲ್ಲ, ಅಂಗಾಂಗ ಊನವಾಗಿರುವವರೂ ಕಾಯಿಲೆ ಅಥವಾ ಅಪಘಾತಕ್ಕೊಳಗಾಗಿ ಅಂಗಾಂಗಗಳನ್ನು ಕಳೆದುಕೊಂಡಿರು ವವರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಸಾಧಿಸುವ ಛಲಗಾರರಾಗಿರುತ್ತಾರೆ. ದೀಪಾ ಮಲಿಕ್ ಅಂತಹ ಒಬ್ಬ ಹಾಲ್ವೆ ಧೀರೆ.
1970ರ ಸೆಪ್ಟೆಂಬರ್ 30ರಂದು ಹರಿಯಾಣದ ಸೋನಿಪತ್ ಜಿಲ್ಲೆಯ ಬೆಂಸ್ವಾಲ್ ಎಂಬಲ್ಲಿ ಹುಟ್ಟಿದ ದೀಪಾ ಮಲಿಕ್‌ರದ್ದು ಒಂದು ಮಿಲಿಟರಿ ಹಿನ್ನೆಲೆಯ ಕುಟುಂಬ, ಅವರ ತಂದೆ ಬಾಲ್‌ಶನ್ ನಾಗ್ವಾಲ್ ಮಿಲಿಟರಿಯಲ್ಲಿದ್ದವರು. ಸಹೋದರ ವಿಕ್ರಮ್ ನಾಗ್ವಾಲ್ ಸೇನೆಯಲ್ಲಿ ಬ್ರಿಗೇಡಿಯರ್ ಆಗಿದ್ದರು. ತನ್ನ ಬಾಲ್ಯದಿಂದಲೂ ಕ್ರೀಡೆಗಳಲ್ಲಿ ಅತೀವ ಆಸಕ್ತಿವುಳ್ಳ ದೀಪಾ ಮಲಿಕ್ ಸದಾ ಒಂದಿಲ್ಲೊಂದು ಕ್ರೀಡೆಯಲ್ಲಿ ಸಕ್ರಿಯವಾಗಿರುತ್ತಿದ್ದರು. ಅಷ್ಟು ಚಟುವಟಿಕೆಯಿಂದಿರುತ್ತಿದ್ದ ದೀಪಾರಿಗೆ ಐದು ವರ್ಷ ಪ್ರಾಯವಾಗಿದ್ದಾಗ ಬೆನ್ನುಮೂಳೆಯಲ್ಲಿ ಕ್ಯಾನ್ಸರ್ ಗೆಡ್ಡೆ ಇರುವುದು ಪತ್ತೆಯಾಯಿತು. ಅವರಿಗೆ ಮೂರು ವರ್ಷಗಳ ಕಾಲ ಚಿಕಿತ್ಸೆ ನೀಡಿ ಅದನ್ನು ಯಶಸ್ವಿಯಾಗಿ ಗುಣಪಡಿಸಲಾಯಿತು.
ಮುಂದೆ, ದೀಪಾ ಕೇಂದ್ರೀಯ ವಿದ್ಯಾನಿಲಯದಲ್ಲಿ ಕಲಿತು, ಅಜೇರ್‌ನ ಸೋಫಿಯಾ ಕಾಲೇಜಿನಲ್ಲಿ ಇಂಗ್ಲಿಷ್ ಲಿಟರೇಚರಲ್ಲಿ ಪದವಿ ಪಡೆದರು. ಒಮ್ಮೆ ಅವರು ವಿಕ್ರಮ್ ಸಿಂಗ್ ಮಲಿಕ್ ಎಂಬ ಸೇನಾ ಅಧಿಕಾರಿಯೊಬ್ಬರ ಬೈಕಿನ ಕೀಯನ್ನು ತೆಗೆದುಕೊಂಡು, ಬೈಕನ್ನು ಏರಿ, ಒಂದು ಸುತ್ತು ಹೋಗಿ ಬಂದರು. ದೀಪಾರ ಬೈಕ್ ಹುಚ್ಚನ್ನು ನೋಡಿ ಮೆಚ್ಚಿಕೊಂಡ ವಿಕ್ರಮ್ ಸಿಂಗ್ ದೀಪಾರ ತಂದೆಯನ್ನು ಭೇಟಿಯಾಗಿ, 19890 ಜೂನ್‌ನಲ್ಲಿ ಅವರನ್ನು ಮದುವೆಯಾದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು- ಅಂಬಿಕಾ ಮಲಿಕ್ ಮತ್ತು ದೇವಿಕಾ ಮಲಿಕ್, 1999ರಲ್ಲಿ, ಅಂದರೆ ದೀಪಾರಿಗೆ 29 ವರ್ಷ ಪ್ರಾಯವಾದಾಗ ಪುನಃ ಅವರ ಬೆನ್ನು ಮೂಳೆಯಲ್ಲಿ ಗೆಡ್ಡೆ ಕಾಣಿಸಿಕೊಂಡಿತು. ಈ ಬಾರಿ ಅದನ್ನು ನಿವಾರಿಸಲು ಅವರಿಗೆ ಮೂರು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರ ಕ್ಯಾನ್ಸರ್ ಏನೋ ಗುಣವಾಯಿತು. ಆದರೆ, ಅವರ ಸೊಂಟದಿಂದ ಕೆಳಗಿನ ಭಾಗ ಪಾರ್ಶವಾಯುವಿಗೆ ಒಳಗಾಗಿ ನಿಶ್ಲೇಷಿತಗೊಂಡಿತು. ಬೈಕಲ್ಲಿ ಜುಂ ಎಂದು ತಿರುಗಾಡುತ್ತಿದ್ದ ದೀಪಾ ಗಾಲಿ ಕುರ್ಚಿಯ ಪಾಲಾದರು.
ಅಂತಹ ಪರಿಸ್ಥಿತಿಯಲ್ಲೂ ದೀಪಾ ನಿರಾಶರಾಗಲಿಲ್ಲ. ಒಂದು ವರ್ಷದ ನಂತರ ಅವರು ತನ್ನ ಬಾಲ್ಯದ ಆಸಕ್ತಿಯಾದ ಕ್ರೀಡೆಯಲ್ಲಿ ಪುನಃ ತನ್ನನ್ನು ತೊಡಗಿಸಿಕೊಂಡರು. ತನ್ನ ಅಗತ್ಯಕ್ಕನುಗುಣವಾಗಿ ಒಂದು ‘ಕಸ್ಟಮೈಜ್’ ಬೈಕ್ ಮಾಡಿಸಿಕೊಂಡು, ಅದರಲ್ಲಿ ಓಡಾಡತೊಡಗಿದರು. ದೆಹಲಿಯ ವಸಂತ ಕುಂಜ್ ಎಂಬಲ್ಲಿನ ಒಂದು ಬೆನ್ನುಮೂಳೆ ಕೇಂದ್ರದಲ್ಲಿ ‘ಫ್ರೆಂಡ್ ಟೈನಿಂಗ್’ ತರಬೇತಿ ಪಡೆಯಲು ಸೇರಿದರು. ಆ ತರಬೇತಿಯಲ್ಲಿ ಈಜುವುದು ಒಂದು ಭಾಗವಾಗಿತ್ತು. ಹೀಗೆ ಈಜು ಕಲಿತ ದೀಪಾ ಮುಂದೆ ಯಮುನಾ ನದಿಯನ್ನು ಈಜಿ ದಾಟುವ ಸಾಹಸ ಮಾಡುವ ಮೂಲಕ ಲಿಮ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದರು.
ಇಷ್ಟರಲ್ಲಾಗಲೇ ದೀಪಾ ಮಲಿಕ್‌ರಲ್ಲಿನ ಕ್ರೀಡಾಪಟು ಸಂಪೂರ್ಣವಾಗಿ ಪುಟಿದೆದ್ದಳು. ಆ ಸಮಯದಲ್ಲಿ ದೆಹಲಿಯಲ್ಲಿ 2010ರ ‘ಕಾಮನ್‌ವೆಲ್ತ್ ಗೇಮ್ಸ್’ ತಯಾರಿಗಳು ನಡೆಯುತ್ತಿದ್ದವು. ಪ್ರತಿಯೊಬ್ಬ ಪ್ಯಾರಾ ಕಾಮನ್‌ವೆಲ್ ಕ್ರೀಡಾಪಟುವಿಗೂ ಕೇಂದ್ರ ಸರ್ಕಾರ ಎರಡು ಲಕ್ಷ ರೂಪಾಯಿಗಳನ್ನು ಘೋಷಿಸಿತ್ತು. ದೀಪಾ ಜಾವೆಲಿನ್ ಥೋ ವಿಭಾಗದಲ್ಲಿ ತನ್ನ ಹೆಸರನ್ನು ನೋಂದಾಯಿಸಿ, ಸ್ಪರ್ಧಿಸಿದರೂ ಯಾವುದೇ ಪದಕವನ್ನು ಗೆಲ್ಲಲಾಗಲಿಲ್ಲ. ಮುಂದೆ 2012ರ ಲಂಡನ್ ಒಲಿಂಪಿಕ್ ಗೇಮ್ಸ್’ನಲ್ಲಿ ಅವರು ಭಾಗವಹಿಸಲು ಪ್ರಯತ್ನಿಸಿದರೂ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ಅಷ್ಟು ಹೊತ್ತಿಗೆ ದೀಪಾ ಮಲಿಕ್‌ರಿಗೆ 42ರ ಪ್ರಾಯವಾಗಿತ್ತು. ಆದರೆ, ಅವರಲ್ಲಿನ ಕ್ರೀಡಾಪಟುವಿನ ಚೈತನ್ಯ ಮಾತ್ರ ಉಡುಗಿರಲಿಲ್ಲ. ಅವರು 2016ರಲ್ಲಿ ರಿಯೋದಲ್ಲಿ ನಡೆದ ಪ್ಯಾರಾ ಒಲಿಂಪಿಕ್ ಗೇಮ್ಸ್‌ನಲ್ಲಿ ಭಾಗವಹಿಸುವ ಸಲುವಾಗಿ ಜಾವೆಲಿನ್ ಫೋನಲ್ಲಿ ತಯಾರಿ ನಡೆಸ ತೊಡಗಿದರು. ಆದರೆ, ಮೂರು ವರ್ಷಗಳ ಕಾಲ ಜಾವೆಲಿನ್ ಫೋನಲ್ಲಿ ಅಭ್ಯಾಸ ಮಾಡಿದ ನಂತರ ರಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಫೋ ಇವೆಂಟ್ ಇಲ್ಲ ಎಂಬ ಸುದ್ದಿ ಬಂತು. ಅಷ್ಟು ವರ್ಷಗಳ ಸಮಯದ ಅವರ ತರಬೇತಿ ವ್ಯರ್ಥವಾಯಿತು. ಒಲಿಂಪಿಕ್ಸ್‌ಗೆ ಇನ್ನು ಉಳಿದಿದ್ದುದು ಕೇವಲ ಒಂದು ವರ್ಷ ಮಾತ್ರ, ದೀಪಾ ಮಲಿಕ್‌ಗೆ ತೀವ್ರ ತರಹದ ನಿರಾಶೆಯಾದರೂ ಧೃತಿಗೆಡಲಿಲ್ಲ. ತಾನು ರಿಯೋ ಒಲಿಂಪಿಕ್ಸ್‌ಗೆ ಹೋಗಲೇಬೇಕು ಎಂದು ನಿರ್ಧರಿಸಿದ್ದ ಅವರು ಶಾಟ್ ಪುಟ್ ಅಭ್ಯಾಸ ಮಾಡತೊಡಗಿದರು. ಅದರ ತಯಾರಿಗೆ ಅವರಿಗಿದ್ದ ಸಮಯ ಕೇವಲ ಒಂದು ವರ್ಷ ಮಾತ್ರ.
ಆದರೆ, ಶಾಟ್ ಪುಟ್ ಅವರು ಭಾವಿಸಿದಷ್ಟು ಸುಲಭವಿರಲಿಲ್ಲ. ಅವರು ಗಾಲಿ ಕುರ್ಚಿಯಲ್ಲಿ ಕುಳಿತು ಪ್ರತಿ ಬಾರಿ ಶಾಟ್ ಪುಟ್ ಎಸೆದಾಗ ಸೊಂಟದ ಕೆಳಗಿನ ಭಾಗದ ಸ್ನಾಯುಗಳ ಮೇಲೆ ಹಿಡಿತವಿರುತ್ತಿಲ್ಲವಾದುದರಿಂದ ಮೂತ್ರ ಅಥವಾ ಮಲ ವಿಸರ್ಜನೆಯಾಗುತ್ತಿತ್ತು. ಆಗ ಅವರು ಡಯಪ ಬದಲಾಯಿಸಬೇಕಾಗಿ ಬರುತ್ತಿತ್ತು. ಆದರೆ, ಡಯಪರ್ ಬದಲಾಯಿಸಲು ಅವರ ಮಗಳು ಅವರ ಹತ್ತಿರವಿರಬೇಕಾಗುತ್ತಿತ್ತು. ಅವಳು ಹತ್ತಿರವಿಲ್ಲದಿದ್ದಾಗ ದೀಪಾ ಒದ್ದೆ ಡಯಪರ್‌ನಲ್ಲೇ ಗಂಟೆಗಟ್ಟಲೆ ಅಭ್ಯಾಸ ಮಾಡಬೇಕಾಗಿ ಬರುತ್ತಿತ್ತು. ದೀಪಾ ತನ್ನ ಬಟ್ಟೆಯನ್ನು ತಾನೇ ಬದಲಾಯಿಸಬಲ್ಲರಾದರೂ ಅದಕ್ಕಾಗಿ ಅವರು ಹಾಸಿಗೆ ಮೇಲೆ ಮಲಗಬೇಕಾಗುತ್ತಿತ್ತು. ಇಷ್ಟೆಲ್ಲ ಕಷ್ಟಪಟ್ಟು ಶಾಟ್‌ಪುಟ್ ಅಭ್ಯಾಸ ನಡೆಸಿದ ದೀಪಾ 4.48 ಮೀಟರ್ ದೂರಕ್ಕೆ ಶಾಟ್‌ಪುಟ್ ಎಸೆದು (ಅರ್ಹತಾ ಮಾರ್ಕ್ 3.67 ಮೀಟರ್) ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.
ಆದರೆ, ಮರುದಿನ ಪತ್ರಿಕೆಗಳಲ್ಲಿ ತನ್ನ ಸಾಧನೆಯ ಬಗ್ಗೆ ಮೆಚ್ಚುಗೆಯ ವರದಿಗಳನ್ನು ನಿರೀಕ್ಷಿಸಿದ್ದ ದೀಪಾರಿಗೆ ಅಚ್ಚರಿ ಕಾದಿತ್ತು. ಪತ್ರಿಕೆಗಳಲ್ಲಿ ದೀಪಾರ ಒಬ್ಬ ಪ್ರತಿಸ್ಪರ್ಧಿಯು, ಅವರು ತನ್ನ ಪ್ರಭಾವ ಬಳಸಿ ಫಲಿತಾಂಶವನ್ನು ತನ್ನ ಪರವಾಗಿ ಮಾಡಿಕೊಂಡಿದ್ದಾರೆಂಬ ಆರೋಪ ಹೊರಿಸಿ ಕೋರ್ಟಿಗೆ ಹೋಗಿರುವ ಸುದ್ದಿ ಪ್ರಕಟವಾಗಿತ್ತು. ಒಲಿಂಪಿಕ್ಸ್‌ಗೆ ತಯಾರಿ ನಡೆಸುತ್ತಿದ್ದ ದೀಪಾ ಈಗ ಕೋರ್ಟು ಕೇಸಿನ ವಿರುದ್ಧ ಹೋರಾಟ ನಡೆಸಬೇಕಾಯಿತು. ವಿಚಾರಣೆ ನಡೆಸಿದ ಕೋರ್ಟು ರಿಯೋಗೆ ಹೋಗುವ ಗಡುವಿಗೆ ಕೆಲವೇ ಕೆಲವು ದಿನಗಳಿರುವಾಗ ದೀಪಾರ ಪರವಾಗಿ ತೀರ್ಪು ನೀಡಿದ ಕಾರಣ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಸಾಧ್ಯವಾಯಿತು. 46 ವರ್ಷ ಪ್ರಾಯವಾಗಿದ್ದ ದೀಪಾ 4.61 ಮೀಟರ್ ದೂರಕ್ಕೆ ಶಾಟ್ ಪುಟ್ ಎಸೆದು ಬೆಳ್ಳಿ ಪದಕ ಗೆದ್ದರು. ಆ ಮೂಲಕ ಅವರು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪ್ರಪ್ರಥಮ ಭಾರತೀಯ ಕ್ರೀಡಾಪಟು ಎಂಬ ದಾಖಲೆ ಬರೆದರು.
ನಂತರ, 2018ರಲ್ಲಿ ದುಬೈಯಲ್ಲಿ ನಡೆದ ಪ್ಯಾರಾ ಅಥ್ಲೆಟಿಕ್ ಗ್ಯಾಂಡ್ ಪ್ರಿಕ್ಸ್ ನಲ್ಲಿ ಜಾವೆಲಿನ್ ಫೋನಲ್ಲಿ ಚಿನ್ನ ಗೆದ್ದರು. ಅವರ ಹೆಸರಲ್ಲಿ ನಾಲ್ಕು ಲಿಮ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆಗಳಿವೆ. ಅವರು 2010, 2014 ಮತ್ತು 2018ರ ಏಷಿಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ನಿರಂತರವಾಗಿ ಪ್ರಶಸ್ತಿ ಗೆದ್ದ ಏಕಮೇವ ಭಾರತೀಯ ಮಹಿಳಾ ಪ್ಯಾರಾ ಅಶ್ಲೀಟ್. ಅವರು ರಾಷ್ಟ್ರೀಯ ಮತ್ತು ಅಂತಾ ರಾಷ್ಟ್ರೀಯ ಕ್ರೀಡಾ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಿ 58 ರಾಷ್ಟ್ರೀಯ ಮತ್ತು 23 ಅಂತಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದರು. ತಮ್ಮ ಕ್ರೀಡಾ ಚಟುವಟಿಕೆಗಳಿಂದಾಗಿ ಪದೇಪದೇ ಗಾಯಗೊಳ್ಳುತ್ತಿದ್ದ ದೀಪಾ ವೈದ್ಯರ ಸಲಹೆ ಮೇರೆಗೆ ತಮ್ಮ ಕ್ರೀಡಾ ಬದುಕಿಗೆ ವಿದಾಯ ಹೇಳಿದರು. ಅದಕ್ಕೂ ಮೊದಲು ಅವರು ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪಡೆದಿದ್ದರು. ದೀಪಾರ ಹಿರಿ ಮಗಳು ದೀಪಿಕಾ ಮಲಿಕ್ ಕೂಡ ಕೂಡ ತಲೆಗೆ ಪೆಟ್ಟಾಗಿ ತಾಯಿಯಂತೆಯೇ ಪಾರ್ಶ್ವವಾಯುಗೆ ತುತ್ತಾಗಿರುವವಳು. ಅವರೂ ಹಲವು ಅಂತಾ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಗಳಲ್ಲಿ ಭಾಗವಹಿಸಿದ್ದಾರೆ.
ಒಂದು ವರ್ಷದ ನಂತರ ಅವರು ತನ್ನ ಬಾಲ್ಯದ ಆಸಕ್ತಿಯಾದ ಕ್ರೀಡೆಯಲ್ಲಿ ಪುನಃ ತನ್ನನ್ನು ತೊಡಗಿ ಸಿಕೊಂಡರು. ತನ್ನ ಅಗತ್ಯಕ್ಕನುಗುಣವಾಗಿ ಒಂದು ‘ಕಸ್ಟಮೈಜ್’ ಬೈಕ್ ಮಾಡಿಸಿಕೊಂಡು, ಅದರಲ್ಲಿ ಓಡಾಡತೊಡಗಿದರು. ದೆಹಲಿಯ ವಸಂತ ಕುಂಜ್ ಎಂಬಲ್ಲಿನ ಒಂದು ಬೆನ್ನುಮೂಳೆ ಕೇಂದ್ರದಲ್ಲಿ ‘ಸ್ಟೆಂತ್ ಟೈನಿಂಗ್’ ತರಬೇತಿ ಪಡೆಯಲು ಸೇರಿದರು. ಆ ತರಬೇತಿಯಲ್ಲಿ ಈಜುವುದು ಒಂದು ಭಾಗವಾಗಿತ್ತು. ಹೀಗೆ ಈಜು ಕಲಿತ ದೀಪಾ ಮುಂದೆ ಯಮುನಾ
ನದಿಯನ್ನು ಈಜಿ ದಾಟುವ ಸಾಹಸ ಮಾಡುವ ಮೂಲಕ ‘ಲಿಮ್ಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ತನ್ನ ಹೆಸರನ್ನು ದಾಖಲಿಸಿದರು.





