Mysore
19
overcast clouds
Light
Dark

ಓದುಗರ ಪತ್ರ: ಮಕ್ಕಳಿಗೆ ಸಂಸ್ಕೃತಿಯನ್ನೂ ಕಲಿಸಬೇಕು

ಅಸ್ಸಾಂನ ಶಾಲೆಯೊಂದರಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಂದ ಹಿಂದಿ ಐಟಂ ಹಾಡಿಗೆ ನೃತ್ಯ ಮಾಡಿಸಿರುವುದಾಗಿ ವರದಿಯಾಗಿದ್ದು, ವಿದ್ಯೆ, ವಿನಯ್‌, ಸಂಸ್ಕೃತಿ ಬೋಧಿಸಬೇಕಿದ್ದ ಶಿಕ್ಷಕರು ಇಂತಹ ಹಾಡುಗಳಿಗೆ ನೃತ್ಯ ಕಲಿಸುವುದು ಎಷ್ಟು ಸರಿ?

ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಈ ನೆಲದ ಸಂಸ್ಕೃತಿಯನ್ನೂ ಬೋಧಿಸುವುದು ಶಿಕ್ಷಕರ ಕರ್ತವ್ಯ. ಆದರೆ ಈ ಶಾಲೆಯಲ್ಲಿ ಸೆಪ್ಟೆಂಬರ್ 5ರಂದು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಿಕ್ಷಕರು ಮಕ್ಕಳಿಂದ ಐಟಂ ಹಾಡಿಗೆ ನೃತ್ಯ ಮಾಡಿಸಿರುವುದು ಮಕ್ಕಳು ಹಾದಿ ತಪ್ಪಲು ಬುನಾದಿ ಹಾಕಿದಂತಾಗಿದೆ.

ಮಕ್ಕಳಿಗೆ ಅವರು ಶಾಲೆಯಲ್ಲಿ ಕಲಿಯುವಾಗಲೇ ಯಾವುದೇ ಸರಿ, ಯಾವುದು ತಪ್ಪು, ಸಮಾಜದಲ್ಲಿ ಸನ್ನಡತೆಯಿಂದ ಉತ್ತಮ ನಾಗರಿಕರಾಗಿ ಬದುಕುವುದು ಹೇಗೆ ಎಂಬುದನ್ನು ಕಲಿಸುವುದು ಪೋಷಕರ ಜತೆಗೆ ಶಿಕ್ಷಕರ ಜವಾಬ್ದಾರಿಯೂ ಹೌದು. ಆದ್ದರಿಂದ ಶಿಕ್ಷಕರು ಶಾಲಾ ಹಂತದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಈ ನೆಲದ ಸಂಸ್ಕೃತಿಯನ್ನೂ ಕಲಿಸುವ ಬಗ್ಗೆ ಗಮನಹರಿಸಲಿ.

-ಪುಂಡಲಿಕ ಲಮಾಣಿ, ಮೈಸೂರು.