ನಂಜನಗೂಡು: ‘ನಾಲೆ ಮಣ್ಣು ಖಾಸಗಿಯವರಿಗೆ; ಕೋಟಿ ಕೋಟಿ ಕಾಸು ಅನ್ಯರ ಜೇಬಿಗೆ’ ಶಿರೋನಾಮೆಯಲ್ಲಿ ಸೋಮವಾರ ‘ಆಂದೋಲನ’ ದಿನಪತ್ರಿಕೆಯ ಮುಖಪುಟದಲ್ಲಿ ಪ್ರಕಟವಾದ ಸುದ್ದಿಗೆ ಸಂಬಂಽಸಿದಂತೆ ಎಚ್ಚೆತ್ತ ನೀರಾವರಿ ಇಲಾಖೆಯ ಅಧಿಕಾರಿಗಳು, ಈ ಕುರಿತು ಸಮಗ್ರ ವರದಿ ನೀಡುವಂತೆ ಕಾವೇರಿ ನೀರಾವರಿ ನಿಗಮದ ಕಬಿನಿ ನಾಲಾ ವಿಭಾಗದ ಸ್ಥಳೀಯ ಅಭಿಯಂತರ ಸುಹಾಸ ಅವರಿಗೆ ಆದೇಶ ನೀಡಿದ್ದಾರೆ.
ಈಗ ನಂಜನಗೂಡಿನ ನೀರಾವರಿ ಇಲಾಖೆಯಲ್ಲಿ ಬುಧವಾರದಿಂದ ಕಬಿನಿ ಬಲದಂಡೆ ಹಾಗೂ ನುಗು ನಾಲೆ ಮಣ್ಣಿನ ಕುರಿತಂತೆ ಇಲಾಖೆ ನೀಡಿದ ಅನುಮತಿ ಹಾಗೂ ನಾಲೆಯುದ್ದಕ್ಕೂ ತೆಗೆದಿರುವ ಮಣ್ಣಿನ ಕುರಿತಂತೆ ದಾಖಲೆಗಳನ್ನು ಪರಿಶೀಲಿಸಿ ಸಮಗ್ರವಾದ ವರಿದಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನೀರಾವರಿ ಇಲಾಖೆಯ ಕಡತದಲ್ಲಿ ಅಕ್ರಮ ಸಾಗಾಟದ ಲೆಕ್ಕ ಖಚಿತವಾಗಿ ಸಿಗುವುದಿಲ್ಲ. ಈ ಕುರಿತಾದ ಲೆಕ್ಕ ಬೇಕಾದಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳೇ ಆಗಮಿಸಿ ಅಧಿಕಾರಿಗಳಸಹಾಯದಿಂದ ಗುತ್ತಿಗೆದಾರರು ಅಕ್ರಮವಾಗಿ ನಾಲೆ ಮಣ್ಣಿಂದ ಸಮತಟ್ಟು ಮಾಡಿದ ಬಡಾವಣೆ ಹಾಗೂ ರೆಸಾರ್ಟ್ ಮಾಡಲು ಉದ್ದೇಶಿಸಿರುವ ತೆಂಗಿನ ತೋಟಕ್ಕೆ ಭರ್ತಿ ಮಾಡಿದ ಮಣ್ಣಿನ ಅಳತೆ ಮಾಡಿದರೆ ಮಾತ್ರ ಸರ್ಕಾರಕ್ಕೆ ಬರಬೇಕಾದ ಕೋಟ್ಯಂತರ ರೂ. ಲೆಕ್ಕ ಸಿಗುತ್ತದೆ. ಈ ಧೈರ್ಯ ಆಡಳಿತಗಾರರಿಗೆ ಇದ್ದರೆ ಮಾತ್ರ ಇದರ ಪ್ರಾಮಾಣಿಕ ತನಿಖೆ ಸಾಧ್ಯ ಎಂದು ರೈತ ಹೋರಾಟಗಾರ ಬೊಕ್ಕಹಳ್ಳಿ ನಂಜುಂಡಸ್ವಾಮಿ ಪತ್ರಿಕೆಗೆ ತಿಳಿಸಿದರು.





