Mysore
21
broken clouds

Social Media

ಗುರುವಾರ, 01 ಜನವರಿ 2026
Light
Dark

ಹೆಣ್ಣು ಕರುಗಳಿಗೆ ಮಾರಕವಾದ ಕಂದು ರೋಗ

ಪುನೀತ್

ಮಾ.25ರವರೆಗೆ ಪಶುವೈದ್ಯ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯ 

ಮಡಿಕೇರಿ: ಜಿಲ್ಲೆಯಲ್ಲಿ ಹೆಣ್ಣು ಕರುಗಳಿಗೆ ಕಂದು ರೋಗ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೪-೮ ತಿಂಗಳು ನಡುವಿನ ಹೆಣ್ಣುಕರುಗಳಿಗೆ ಈ ಲಸಿಕೆ ಯನ್ನುಉಚಿತವಾಗಿ ಕೊಡಲಾಗುತ್ತಿದ್ದು, ಮಾರಕ ಬ್ರುಸೆಸಿಸ್ ಕಾಯಿಲೆ ವಿರುದ್ಧ ರPಣೆಗಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ.

ಎಲ್ಲ ಜಾತಿಯ ಆಕಳುಗಳನ್ನು ಬಾಧಿಸುವ ಬ್ರುಸೆಸಿಸ್ ಕಾಯಿಲೆ ಗೋಮೂತ್ರ, ಹಾಲು ಇವುಗಳಿಂದ ಮನುಷ್ಯರಿಗೆ ಹರಡುತ್ತದೆ. ಮಿಶ್ರತಳಿ ಮಾತ್ರವಲ್ಲದೆ ಗಿರ್ ಮತ್ತಿತರ ಜಾತಿಯ ದೇಶಿ ತಳಿಯ ಜಾನುವಾರುಗಳನ್ನೂ ಈ ಕಾಯಿಲೆ ಬಾಧಿಸುತ್ತಿದೆ.

ಜಾನುವಾರುಗಳಿಗೆ ಕಂದು ರೋಗ ಬಾರದಂತೆ ಮತ್ತು ಈ ಮೂಲಕ ಮನುಷ್ಯರಿಗೆ ಹರಡದಂತೆ ತಡೆಗಟ್ಟಲು ಹೆಣ್ಣು ಕರುಗಳಿಗೆ ಲಸಿಕೆ ಹಾಕಿಸುವುದೊಂದೇ ಉತ್ತಮ ಮಾರ್ಗ. ಹಾಗಾಗಿಯೇ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಕೊಡಗಿನಲ್ಲೂ ಮಾ.೧೦ರಿಂದಲೇ ಮೂರನೇ ಸುತ್ತಿನ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಶುರುವಾಗಿದೆ. ಮಾ.೨೫ರ ತನಕವೂ ಲಸಿಕೆ ಪಡೆದುಕೊಳ್ಳಬಹುದಾಗಿದ್ದು, ಮಾಹಿತಿಗಾಗಿ ಸಮೀಪದ ಪಶುವೈದ್ಯ ಆಸ್ಪತ್ರೆಯನ್ನು ಸಂಪರ್ಕಿಸಬಹುದು.

ಕಂದು ರೋಗ ಅಥವಾ ಬ್ರುಸೆಸಿಸ್ ಬ್ಯಾಕ್ಟೀರಿಯಾದಿಂದ ಹರಡುವ ರೋಗವಾಗಿದೆ. ೪-೮ ತಿಂಗಳು ನಡುವಿನ ಹೆಣ್ಣುಕರುಗಳಿಗೆ ಲಸಿಕೆ ಕೊಡುವ ಮೂಲಕ ಈ ಕಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ಜಾನುವಾರುಗಳ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಲಸಿಕೆ ಹಾಕಿಸಿದರೆ ಸಾಕಾಗುತ್ತದೆ. ಬ್ರುಸೆ ಅಬೊರ್ಟಸ್ ಪ್ರಭೇದದ ೧೯ ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು ೪-೮ ತಿಂಗಳಿನ ವಯಸ್ಸಿನ ಕರುಗಳಿಗೆ ನೀಡಿದರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯವಿದೆ. ಹಸು, ಎಮ್ಮೆ, ಆಡು, ಕುರಿ, ಹಂದಿ, ನಾಯಿ, ಒಂಟೆ ಹಾಗೂ ಕುದುರೆಗಳಲ್ಲಿ ಬ್ರೂಸೆ ಗುಂಪಿಗೆ ಸೇರಿದ ವಿವಿಧ ರೀತಿಯ ಬ್ಯಾಕ್ಟಿರಿಯಾಗಳಿಂದ ಕಂದು ರೋಗ ಕಂಡುಬರುತ್ತದೆ. ಪಶು ವೈದ್ಯರು, ಹಸು, ಕುರಿ, ಆಡು ಮತ್ತಿತರ ಪ್ರಾಣಿಗಳನ್ನು ಸಾಕುವವರು ಹಾಗೂ ಮಾಂಸ ಮಾರಾಟಗಾರರು ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವುದರಿಂದ ಅವರಿಗೂ ಈ ರೋಗ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ.

ಮನುಷ್ಯರಲ್ಲಿ ರೋಗದ ಆತಂಕ: ರೋಗ ಪೀಡಿತ ರಾಸುವಿನಿಂದ ಹಿಂಡಿದ ಹಸಿ ಹಾಲು ಕುಡಿಯುವುದರಿಂದ, ಗರ್ಭಕೋಶದ ಸ್ರವಿಕೆ ಯಿಂದ ಮನುಷ್ಯರಿಗೆ ಈ ರೋಗ ಹರಡುವ ಸಾಧ್ಯತೆ ಇರುತ್ತದೆ. ಗಾಯಗಳ ಮೂಲಕವೂ ರೋಗಾಣು ಮನುಷ್ಯರ ದೇಹವನ್ನು ಸುಲಭವಾಗಿ ಪ್ರವೇಶಿಸುತ್ತದೆ. ಕಂದು ರೋಗ ಸೋಂಕಿತರಲ್ಲಿ ತಲೆ ನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಏರುಪೇರಾಗುವ ಜ್ವರ, ಕೀಲುಗಳಲ್ಲಿ ನೋವು, ಮಂಡಿ ನೋವು, ಕತ್ತಿನ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ವಾಸನೆ ಯಿಂದ ಕೂಡಿದ ಬೆವರು, ಮಂಕಾದ ಕಣ್ಣುಗಳು, ಅಶಕ್ತತೆಯ ಲPಣಗಳು ಕಂಡುಬರುತ್ತವೆ. ಗಂಡಸರಲ್ಲಿ ರೋಗ ಉಲ್ಬಣಗೊಂಡಾಗ ನಪುಂಸಕತೆಯೂ ಉಂಟಾಗಬಹುದು. ಸೂಕ್ತ ಸಮಯದಲ್ಲಿ ಚಿಕಿತ್ಸೆಗೆ ಒಳಗಾದರೆ ರೋಗ ವಾಸಿಯಾಗುತ್ತದೆ.

” ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ೪-೮ ತಿಂಗಳು ನಡುವಿನ ಹೆಣ್ಣುಕರುಗಳಿಗೆ ಈ ಲಸಿಕೆಯನ್ನು ಉಚಿತವಾಗಿ ಕೊಡಲಾಗುತ್ತಿದೆ. ಕೊಡಗಿನಲ್ಲಿ ಈ ತಿಂಗಳ ೧೦ರಿಂದಲೇ ಮೂರನೇ ಸುತ್ತಿನ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಶುರುವಾಗಿದೆ. ಮಾ.೨೫ರವರೆಗೆ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಲಸಿಕೆ ಹಾಕಿಸಲು ಪಶುಪಾಲಕರು ತಮ್ಮ ಹತ್ತಿರದ ಪಶು ವೈದ್ಯಕೀಯ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ. ಈ ಲಸಿಕೆ ಹಾಕಿಸುವುದರಿಂದ ಜಾನುವಾರುಗಳಲ್ಲಿ ಗರ್ಭಪಾತ ಆಗುವುದನ್ನು ತಡೆಗಟ್ಟಬಹುದು. ಮತ್ತೆ ಮತ್ತೆ ಲಸಿಕೆ ಹಾಕಿಸುವ ಅಗತ್ಯವಿಲ್ಲ. ೩-೫ ವರ್ಷಗಳ ತನಕ ಹಿಂಡಿನಲ್ಲಿ ರೋಗ ಪ್ರತಿಬಂಧಕ ಶಕ್ತಿ ಇರುತ್ತದೆ.”

-ಲಿಂಗರಾಜ ದೊಡ್ಡಮನಿ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕೊಡಗು

ರೋಗದ ನಿಯಂತ್ರಣ ಹೇಗೆ?

* ಕನಿಷ್ಠ ವರ್ಷಕ್ಕೆ ಒಮ್ಮೆಯಾದರೂ ಜಾನುವಾರುಗಳಲ್ಲಿ ಕಂದು ರೋಗ ಅಥವಾ ಬ್ರುಸೆಸಿಸ್ ಪರೀಕ್ಷೆ ಮಾಡಿಸಬೇಕು.

* ರೋಗಗ್ರಸ್ಥ ಹೋರಿಗಳಿಂದ ಕಾಯಿಲೆ ಹರಡುವುದನ್ನು ತಡೆಯಲು ಹಸು ಮತ್ತು ಎಮ್ಮೆಗಳಿಗೆ ಸೋಂಕು ರಹಿತ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಮಾಡಿಸಬೇಕು.

*  ೪-೮ ತಿಂಗಳು ನಡುವಿನ ಹಸು ಅಥವಾ ಎಮ್ಮೆ ಕರುಗಳಿಗೆ ಜೀವಿತದಲ್ಲಿ ಒಮ್ಮೆ ಲಸಿಕೆ ಹಾಕಿಸಬೇಕು. ಹೊಸದಾಗಿ ಖರೀದಿಸಿದ ಜಾನುವಾರುಗಳನ್ನು ಕನಿಷ್ಠ ೩೦ ದಿನಗಳ ಕಾಲ ಉಳಿದ ಜಾನುವಾರುಗಳಿಂದ ದೂರವಿರಿಸಬೇಕು.

Tags:
error: Content is protected !!