Mysore
24
clear sky

Social Media

ಗುರುವಾರ, 02 ಏಪ್ರಿಲ 2026
Light
Dark

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಶನಿವಾರಸಂತೆ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಸಂಜೆ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮನೆ ಗ್ರಾಮದ ಕೆಂಕೆರೆ ಕಾಫಿ ತೋಟದಲ್ಲಿ ಪುನೀತ್ (೩೩) ಮೃತ ದೇಹ ಪತ್ತೆಯಾಗಿದೆ.

ಪುನೀತ್ ಅನೇಕ ವರ್ಷಗಳಿಂದ ಪತ್ನಿ ರತ್ನಳೊಂದಿಗೆ ಶನಿವಾರಸಂತೆಯ ಹೆಮ್ಮನೆ ಕೆಂಕೆರೆ ಗ್ರಾಮದಲ್ಲಿ ವಾಸವಿದ್ದುಕೊಂಡು, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಮಾ.೨೯ ರಂದು ಪುನೀತ್ ಇದ್ದಕಿದ್ದಂತೆ ಕಾಣೆಯಾಗಿದ್ದರು. ಈ ಸಂಬಂಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮಂಗಳವಾರ ಸಂಜೆ ಪುನೀತ್ ಮೃತ ದೇಹ ಹೆಮ್ಮನೆ ಸಮೀಪದ ಕಾಫಿ ತೋಟದಲ್ಲಿ ಪತ್ತೆಯಾಗಿದೆ.

ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ರತ್ನ, ಪ್ರಿಯಕರ ನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಸಂಬಂಧ ಹೆಮ್ಮನೆ ಗ್ರಾಮದ ಪ್ರವೀಣ್, ಪಾರ್ವತಮ್ಮ, ಪುನೀತ್ ಪತ್ನಿ ರತ್ನ ಮೂವರನ್ನೂ ಪೊಲೀಸರು ಬುಧವಾರ ಬಂಧಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಬುಧವಾರ ಜಿಲ್ಲಾಸ್ಪತ್ರೆಯಲ್ಲಿ ಪುನೀತ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಸೋಮವಾರಪೇಟೆ ಡಿವೈಎಸ್‌ಪಿ ಚಂದ್ರಶೇಖರ್, ಶನಿವಾರಸಂತೆ ವೃತ್ತ ನೀರಿಕ್ಷಕ ಕೃಷ್ಣರಾಜ್, ಪಿಎಸ್‌ಐ ಗೋವಿಂದ ರಾಜ್, ಚಂದ್ರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

Tags:
error: Content is protected !!