ಇತ್ತೀಚೆಗೆ ಮೊಬೈಲ್, ಕಂಪ್ಯೂಟರ್‌ಗಳಿಗೆ ಜೋತುಬಿದ್ದಿರುವ ಯುವ ಸಮೂಹ ಆನ್‌ಲೈನ್ ಗೇಮಿಂಗ್‌ಗಳಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್ ಬೆಟ್ಟಿಂಗ್ ಗೇಮ್ಗಳು ಯುವ ಸಮೂಹವನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ.
ಇತ್ತೀಚೆಗೆ ‘ಮೆಲ್‌ಬೆಟ್’ ಎಂಬ ಹೊಸ ಆನ್‌ಲೈನ್ ಬೆಟ್ಟಿಂಗ್ ಆಟವು ಪ್ರಾರಂಭವಾಗಿದ್ದು, ಅನೇಕ ಭಾಗಗಳಲ್ಲಿ ಇದರ ಜಾಹೀರಾತಿನ ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇದೊಂದೇ ಅಲ್ಲದೆ ಇಂತಹ ನೂರಾರು ಆನ್‌ಲೈನ್ ಆಟಗಳು ಜಾಹೀರಾತುಗಳ ಮೂಲಕ ಯುವ ಸಮೂಹವನ್ನು ಸೆಳೆಯುತ್ತಿದ್ದು, ಕೆಲ ಸಿನಿಮಾ ನಟ-ನಟಿಯರೂ ಈ ಆಟಗಳನು ಪ್ರಮೋಟ್ ಮಾಡುವ ಮೂಲಕ ಪ್ರಚೋದನೆ ನೀಡುತ್ತಿದ್ದಾರೆ.
ಯುವ ಸಮೂಹವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಈ ಗೇಮಿಂಗ್ ಈ ಆ್ಯಪ್‌ಗಳು ಅವರಲ್ಲಿ ಸುಲಭವಾಗಿ ಹಣ ಗಳಿಸಬಹುದು ಎಂಬ ಆಸೆಯನ್ನು ಹುಟ್ಟಿಸಿ ಈ ಗೇಮಿಂಗ್ ದಂಧೆಗೆ ಸಿಲುಕಿಸಿಕೊಂಡು ಹಣ ಕಸಿಯುತ್ತಿವೆ. ಇಂತಹ ಗೇಮಿಂಗ್‌ಗಳಿಂದ ಹಣ ಕಳೆದುಕೊಂಡ ಯುವ ಸಮೂಹ ಮತ್ತೆ ಹಣ ಗಳಿಸಲು ಅಡ್ಡ ದಾರಿ ಹಿಡಿಯುವ ಸಾಧ್ಯತೆಗಳಿರುತ್ತವೆ. ಇವು ಅಪಾಯಕಾರಿ ಆಟಗಳು ಎಂದು ಗೊತ್ತಿದ್ದರೂ ಇವುಗಳನ್ನು ಪ್ರಚಾರ ಮಾಡಲು ಮತ್ತು ಆಡಿಸಲು ಅನುಮತಿ ನೀಡಿರುವುದು ವಿಷಾದಕರ ಸಂಗತಿ. ಈ ಬಗ್ಗೆ ಸರ್ಕಾರ ಕೂಡಲೇ ಗಮನಹರಿಸಿ ಆನ್ ಲೈನ್ ಬೆಟ್ಟಿಂಗ್ ಗೇಮ್‌ಗಳನ್ನು ನಿಷೇಧಿಸಬೇಕು.
-ಜಿ.ಪಿ.ಹರೀಶ್, ವಿ.ವಿ.ಮೊಹಲ್ಲ, ಮೈಸೂರು.