ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿಗೆ ಹೊಂದಿಕೊಂಡಂತೆ ಕೆ.ಆರ್ ನಗರ – ಹುಣಸೂರು ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಸುಮಾರು ೬-೭ ಮೀನು ಮಾರಾಟ ಮಳಿಗೆಗಳನ್ನು ಇಟ್ಟುಕೊಂಡು ವ್ಯಾಪಾರವನ್ನು ಮಾಡುತ್ತಾರೆ.
ಮೀನುಗಳನ್ನು ಖರೀದಿಸುವವರು ಸ್ಕೂಟರ್, ಕಾರುಗಳನ್ನು ರಸ್ತೆಗೆ ಹೊಂದಿಕೊಂಡಂತೆ ನಿಲ್ಲಿಸಿ ರಸ್ತೆಯಲ್ಲೇ ನಿಂತಿರುತ್ತಾರೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಸ್ಥಳದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗೂ ಪ್ರತಿದಿನ ಮೀನು ಮಾರಾಟ ಮಾಡುವ ಜಾಗದಲ್ಲಿ ಗಲಾಟೆಗಳೂ ನಡೆಯುತ್ತಿವೆ. ಅಲ್ಲದೇ ಈ ಮೀನು ಮಾರಾಟಗಾರರು ನದಿಗೆ ತ್ಯಾಜ್ಯ ಪದಾರ್ಥಗಳನ್ನು ಹಾಕುತ್ತಿರುವುದರಿಂದ ವಾತಾವರಣ ಕಲುಷಿತಗೊಂಡಿದೆ. ಆದ್ದರಿಂದ ಇಲ್ಲಿನ ಮೀನು ಮಾರಾಟ ಮಳಿಗೆಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.
-ಮಹದೇವಮ್ಮ, ಕಟ್ಟೆಮಳಲವಾಡಿ, ಹುಣಸೂರು ತಾ





