Mysore
15
broken clouds

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಅನ್ನಭಾಗ್ಯ ಯೋಜನೆ: ನಾಲ್ಕು ತಿಂಗಳ ಹಣ ಬಾಕಿ!

ಕೆ.ಬಿ.ರಮೇಶನಾಯಕ

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣಕ್ಕಾಗಿ ಕಾದು ಕುಳಿತ  ಫಲಾನುಭವಿಗಳು

ಹೊಸ ವರ್ಷದ ಸಂಭ್ರಮ ಆಚರಿಸಲು ಕಾದಿದ್ದ ಜನರಿಗೆ ನಿರಾಸೆ

೨೦೨೩ರ ಜುಲೈ ತಿಂಗಳಿಂದ ಆಗಸ್ಟ್ ವರೆಗೆ ೪೭೧.೭೧ ಕೋಟಿ ರೂ. ಪಾವತಿ

ಮೈಸೂರು: ‘ಶಕ್ತಿ’ ಯೋಜನೆಯಡಿ ಉಚಿತ ಸಾರಿಗೆ ಬಸ್‌ಗಳಲ್ಲಿ ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡಿ ಹೊಸ ವರ್ಷದ ಸಂಭ್ರಮ ಆಚರಿಸಲು ‘ಅನ್ನಭಾಗ್ಯ’ ಯೋಜನೆಯಡಿ ಸರ್ಕಾರ ಬಿಡುಗಡೆ ಮಾಡುವ ಹಣಕ್ಕಾಗಿ ಕಾದಿದ್ದ ಫಲಾನುಭವಿಗಳಿಗೆ ನಿರಾಸೆಯಾಗಿದೆ.

ಜಿಲ್ಲೆಯ -ಲಾನುಭವಿಗಳಿಗೆ ಕಳೆದ ನಾಲ್ಕು ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರದಿಂದ ಹಣ ಪಾವತಿಯಾಗದೆ ಬಾಕಿ ಉಳಿದಿದೆ. -ಲಾನುಭವಿಗಳ ಖಾತೆಗೆ ೫ ಕೆ.ಜಿ. ಅಕ್ಕಿ ಬದಲಾಗಿ ನೇರವಾಗಿ ಜಮಾ ಮಾಡುತ್ತಿದ್ದ ಯೂನಿಟ್‌ಗೆ ೧೭೦ ರೂ.ಗಳನ್ನು ಆಗಸ್ಟ್ ತಿಂಗಳವರೆಗೆ ಪಾವತಿಸಿದ್ದು, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಸೇರಿದಂತೆ ನಾಲ್ಕು ತಿಂಗಳ ಬಾಕಿ ಸಂದಾಯವಾ ಗದೆ ಫಲಾನುಭವಿಗಳು ಮೊಬೈಲ್‌ನಲ್ಲಿ ಬರುವ ಸಂದೇಶವನ್ನು ಎದುರು ನೋಡುತ್ತಾ ಕುಳಿತುಕೊಳ್ಳುವಂತಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಪ್ರಕಾರ ಫಲಾನುಭವಿಗಳಿಗೆ ಜನವರಿ ಎರಡನೇ ವಾರದವರೆಗೆ ಹಣ ಸಂದಾಯವಾಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ, ನಾಲ್ಕು ತಿಂಗಳ ಹಣ ಬಂದರೆ ಹತ್ತಿರದ ಪ್ರವಾಸಿತಾಣ ಅಥವಾ ಬೇರೆ ಸ್ಥಳಗಳಿಗೆ ಹೋಗಿ ಬರುವ ಖುಷಿಯಲ್ಲಿದ್ದವರು ಈಗ ಮನೆಯಲ್ಲೇ ಕೂರುವಂತಾಗಿದೆ.

ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ೨೦೨೩ರ ಜುಲೈ ತಿಂಗಳಿಂದ ಉಚಿತ ೫ ಕೆಜಿ ಆಹಾರಧಾನ್ಯ ವಿತರಣೆ ಮಾಡುವ ಜತೆಗೆ, ಹೆಚ್ಚುವರಿ ೫ ಕೆಜಿ ಅಕ್ಕಿಯ ಹಣ ಪ್ರತಿ ಕೆಜಿಗೆ ೩೪ ರೂ.ನಂತೆ ೫ ಕೆಜಿಗೆ ೧೭೦ ರೂ. (ಒಂದು ಯೂನಿಟ್‌ಗೆ)ಗಳನ್ನು ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿತ್ತು.

ಬ್ಯಾಂಕ್‌ಗೆ ಫಲಾನುಭವಿಗಳ ಅಲೆದಾಟ: ಡಿಬಿಟಿ ಮೂಲಕ ಬರುತ್ತಿದ್ದ ಹಣ ಬಾರದೆ ಹೋಗಿರುವ ಬಗ್ಗೆ ಫಲಾನುಭವಿಗಳು ಬ್ಯಾಂಕ್‌ಗೆ, ಆಹಾರ ಇಲಾಖೆಗೆ ಹೋಗಿ ವಿಚಾರಿಸುತ್ತಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಬಿಡುಗಡೆಯಾದರೆ ಬರುತ್ತದೆ. ಅಲ್ಲಿಂದ ಬಿಡುಗಡೆಯಾಗಿದ್ದರೆ ನಮಗೆ ಗೊತ್ತಾಗುತ್ತದೆ ಹೊರತು ಬೇರೆ ಯಾವ ಮಾಹಿತಿ ಇಲ್ಲವೆಂದು ಹೇಳಿ ಕಳುಹಿಸುತ್ತಿದ್ದಾರೆ.

” ರಾಜ್ಯ ಸರ್ಕಾರದಿಂದ ಅರ್ಹಪಡಿತರ ಚೀಟಿದಾರರಿಗೆ ನೇರ ನಗದು ವರ್ಗಾವಣೆಯಾಗಲಿದೆ. ರಾಜ್ಯ ಸರ್ಕಾರವೇ ನೇರವಾಗಿ ಪಾವತಿಸುವ ಕಾರಣ ನಮ್ಮದೇನೂ ಪಾತ್ರವಿಲ್ಲ. ಹಣ ಜಮಾ ಆಗುತ್ತಿದ್ದಂತೆ ನಮಗೆ ಮಾಹಿತಿ ಗೊತ್ತಾಗಲಿದೆ. ಎನ್‌ಪಿಸಿಎಲ್‌ನಲ್ಲಿ ಮ್ಯಾಚ್ ಆಗಿದ್ದರೆ ಖಾತೆಗೆ ಜಮಾ ಆಗಲಿರುವುದು ತಿಳಿಯಲಿದೆ.”

 -ಕುಮುದಾ ಶರತ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ.

೭,೯೩೨ ಮಂದಿಗೆ ಸಿಗುತ್ತಿಲ್ಲ ನಗದು:  ಮೈಸೂರು ಜಿಲ್ಲೆಯ ೯ ತಾಲ್ಲೂಕುಗಳಿಂದ ೬,೬೮,೯೪೬ -ಲಾನುಭವಿಗಳಿದ್ದು, ೬,೬೧,೦೧೪ ಪಡಿತರ ಚೀಟಿದಾರರಿಗೆ ಡಿಬಿಟಿ ಮೂಲಕ ಹಣ ಪಾವತಿಯಾಗುತ್ತಿದ್ದರೆ, ಉಳಿದ ೭,೯೩೨ ಮಂದಿಗೆ ಹಣ ಪಾವತಿಯಾಗುತ್ತಿಲ್ಲ. ಡಿಬಿಟಿ ಮಾಡಲು ಬ್ಯಾಂಕ್ ಖಾತೆ ಸಮಸ್ಯೆಯಾಗಿರುವ ಕಾರಣ ಈ ಫಲಾನುಭವಿಗಳಿಗೆ ಸೌಲಭ್ಯ ಸಿಗದಂತಾಗಿದೆ.

 

Tags:
error: Content is protected !!