Mysore
26
overcast clouds

Social Media

ಬುಧವಾರ, 23 ಏಪ್ರಿಲ 2025
Light
Dark

ಆಟೋ ಚಾಲಕನ ಪುತ್ರಿಗೆ ಒಲಿದ ವಿದ್ಯೆ!

ಪ್ರಶಾಂತ್ ಎಸ್.

ಸ್ಕಾಲರ್‌ಶಿಪ್ ಬಳಸಿಕೊಂಡೇ ವ್ಯಾಸಂಗ ಮಾಡಿದ ಮಹಿನ್ ಸರೂರ್ ಸಾಧ

ಮೈಸೂರು: ಬಡತನದ ನಡುವೆಯೂ ಆಟೋ ಚಾಲಕನ ಪುತ್ರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಆಟೋ ಚಾಲಕರಾಗಿ ಕೆಲಸ ಮಾಡುವ ಮುಜೀಬ್ ಅಹಮ್ಮದ್ ಹಾಗೂ ಫೌಜಿಯಾ ಸುಲ್ತಾನ ಅವರ ಪುತ್ರಿ ಮಹಿನ್ ಸರೂರ್ ೫೭೬ ಅಂಕ ಗಳಿಸಿ ಮಹಾರಾಣಿ ಪದವಿಪೂರ್ವ ಕಾಲೇಜಿಗೆ ಈ ಬಾರಿ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಶಿಷ್ಯವೇತನದಲ್ಲೇ ಓದು: ಎಸ್‌ಎಸ್ಎಲ್‌ಎಸಿ ಪರೀಕ್ಷೆಯಲ್ಲಿಯೂ ಶೇ.೯೩ ಫಲಿತಾಂಶ ಪಡೆದಿದ್ದರಿಂದ ಶಿಷ್ಯವೇತನ ಪಡೆದುಕೊಂಡಿದ್ದರು. ಅಂದಿನಿಂದ ಪೋಷಕರಿಗೆ ಹೊರೆಯಾಗದಂತೆ ಮಹಿನ್ ಸರೂರ್ ಅವರು ಸರ್ಕಾರಿ ಸ್ಕಾಲರ್‌ಶಿಪ್ ಅನ್ನೇ ಬಳಸಿಕೊಂಡು ವಿದ್ಯಾಭ್ಯಾಸ ಮಾಡಿದ್ದಾರೆ. ಜೊತೆಗೆ ತಾನು ದುಡಿದು ಓದಿನಲ್ಲಿ ಮೇಲುಗೈ ಸಾಧಿಸಿದ್ದಾರೆ.

ನನಗೆ ನನ್ನ ಕುಟುಂಬವೇ ಸೂರ್ತಿ: ನೋಡಮ್ಮ ನಮಗೆ ಹೆಚ್ಚು ಓದಿಸಲು ಆಗಲ್ಲ. ನೀನು ಚೆನ್ನಾಗಿ ಓದಿದರೆ ನಿನ್ನನ್ನು ಯಾರಾದರೂ ಮುಂದೆ ಓದಿಸುತ್ತಾರೆಂದು ಅಪ್ಪ-ಅಮ್ಮ ಆಗಾಗ ಹೇಳುತ್ತಿರುವಾಗ ತುಂಬಾ ದುಃಖವಾಗುತ್ತಿತು. ಈ ಮಾತುಗಳೇ ನನ್ನ ಓದಿಗೆ ಸೂರ್ತಿಯಾಯಿತು ಎಂದು ಓದಿನ ಅನುಭವವನ್ನು ಹಂಚಿಕೊಂಡಿದ್ದಾರೆ.

” ಮನೆಯಲ್ಲಿ ಬಡತನವಿದ್ದರೂ ನನ್ನ ತಂದೆ ಆಟೋ ಓಡಿಸುತ್ತಾ ಬಂದಂತಹ ಹಣವನ್ನು ಕೂಡಿಟ್ಟು ಓದಲು ಸಹಾಯ ಮಾಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರಮಹಾಕಿ ಉನ್ನತ ವಿದ್ಯಾಭ್ಯಾಸ ಮಾಡಿ ನನ್ನ ಗುರಿ ಮುಟ್ಟುತ್ತೇನೆ.”

ಮಹಿನ್ ಸರೂರ್, ವಿದ್ಯಾರ್ಥಿನಿ

” ಮಹಿನ್ ಸರೂರ್ ನಮ್ಮಕಾಲೇಜಿಗೆ ಕೀರ್ತಿ ತಂದಿದ್ದಾಳೆ. ಇದರಿಂದ ನಮ್ಮ ಸಿಬ್ಬಂದಿಗೆ ಬಹಳ ಸಂತಸವಾಗಿದೆ. ಮುಂದಿನ ವಿದ್ಯಾಭ್ಯಾಸಕ್ಕೆ ನಮ್ಮ ಕಾಲೇಜಿನ ಸಿಬ್ಬಂದಿ ವತಿಯಿಂದಲೂ ಸಹಾಯ ಮಾಡುತ್ತೇವೆ.”

ಪಿ.ಸೋಮಣ್ಣ, ಪ್ರಾಂಶುಪಾಲ, ಮಹಾರಾಣಿ ಪದವಿಪೂರ್ವ ಕಾಲೇಜು.

Tags: