Mysore
18
scattered clouds

Social Media

ಗುರುವಾರ, 22 ಜನವರಿ 2026
Light
Dark

ಬಾಚಳ್ಳಿ ಆಂಜನೇಯಸ್ವಾಮಿ ಜಾತ್ರೋತ್ಸವಕ್ಕೆ ಸಕಲ ಸಿದ್ಧತೆ

ಎಂ ಯೋಗಾನಂದ್

ಜ.೨೩ರಿಂದ ೨೬ರವರೆಗೆ ಜಾತ್ರಾ ಮಹೋತ್ಸವ; ಮೆರುಗು ನೀಡಲಿರುವ ಗಾಡಿ ಓಡಿಸುವ ಸ್ಪರ್ಧೆ

ಹುಣಸೂರು: ತಾಲ್ಲೂಕಿನ ಬಾಚಳ್ಳಿ ಗ್ರಾಮದಲ್ಲಿ ಜ.೨೩ರಿಂದ ೨೬ರವರೆಗೆ ನಡೆಯಲಿರುವ ೭೪ನೇ ವರ್ಷದ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಆಸ್ಪತ್ರೆ ಕಾವಲ್ ವ್ಯಾಪ್ತಿಯ ಬಾಚಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರೆ ಜ.೨೩ರಿಂದ ೨೬ರವರೆಗೆ ೪ ದಿನಗಳ ಕಾಲ ನಡೆಯಲಿದೆ. ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳು ನೆರವೇರಲಿವೆ.

ಜ.೨೩ರ ಶುಕ್ರವಾರ ಗಣಪತಿ ಹೋಮ ಮತ್ತು ೨೪ರ ಶನಿವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ, ಬಾಚಳ್ಳಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಗುವುದು. ೨೫ರ ಭಾನುವಾರ ಮಧ್ಯಾಹ್ನ ೧.೩೦ಕ್ಕೆ ಬ್ರಹ್ಮ ರಥೋತ್ಸವ ನಡೆಯಲಿದೆ. ಇದೇ ದಿನ ರಾತ್ರಿ ೭.೩೦ಕ್ಕೆ ಭಾರತ್ ಟಿವಿ ಕನ್ನಡ ಚಾನೆಲ್ ಇವರಿಂದ ಪೌರಾಣಿಕ ಚಲನಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ೨೬ರ ಸೋಮವಾರ ಬೆಳಿಗ್ಗೆ ೮ ಗಂಟೆಗೆ ಆಂಜನೇಯಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.

ಬಾಚಳ್ಳಿ ಗ್ರಾಮದಲ್ಲಿ ೭೪ ವರ್ಷಗಳಿಂದ ಆಂಜನೇಯ ಸ್ವಾಮಿ ರಥೋತ್ಸವವನ್ನು ಕರಿಗೌಡ ಬೀದಿಯ ಯಜಮಾನರುಗಳು ಅದ್ಧೂರಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಬಾಚಳ್ಳಿ ಗ್ರಾಮದ ಸುತ್ತಮುತ್ತಲಿನ ೧೦-೧೫ ಹಳ್ಳಿಗಳಿಂದ ಬರುವ ಭಕ್ತರು ತಮ್ಮ ಮನೆಯಿಂದ ಫಲಾಹಾರ, ತಿಂಡಿಗಳನ್ನು ತಂದು ಜಾತ್ರೆ ಮಾಳಕ್ಕೆ ಹೊಂದಿಕೊಂಡಿರುವ ಕಾಲುವೆಗಳ ಬಳಿ ಮತ್ತು ಜಾತ್ರೆ ಮೈದಾನದಲ್ಲಿ ಸಾಮೂಹಿಕ ಭೋಜನ ಮಾಡುವುದು ಈ ಜಾತ್ರೆಯ ವಿಶೇಷವಾಗಿದೆ.

ಜಾತ್ರೆಯ ಮಾಳದಲ್ಲಿ ಸಿಹಿ ತಿಂಡಿಯ ಅಂಗಡಿಗಳ ಮಾಲೀಕರು ತಿಂಡಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಹತ್ತಾರು ಹಳ್ಳಿಗಳ ರೈತರು ತಮ್ಮ ಬೆಲೆ ಬಾಳುವ ಜೋಡಿ ರಾಸುಗಳೊಡನೆ ಬಂದು ಪ್ರದರ್ಶಿಸುತ್ತಾರೆ. ಉತ್ತಮ ರಾಸುಗಳನ್ನು ಹೊಂದಿರುವವರಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

ಜಾತ್ರೆಗೆ ಬರುವ ಎಲ್ಲ ಭಕ್ತಾದಿಗಳಿಗೆ ಶ್ರೀ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಶನಿವಾರ ಹಾಗೂ ಭಾನುವಾರ ಊಟದ ವ್ಯವಸ್ಥೆ ಹಾಗೂ ಆಂಜನೇಯಸ್ವಾಮಿ ಭಕ್ತಾದಿಗಳ ವತಿಯಿಂದ ಅನ್ನ ಸಂತರ್ಪಣೆಯನ್ನು ಮಾಡಲಾಗು ತ್ತದೆ ಎಂದು ಜಾತ್ರೆ ಸಮಿತಿಯ ಅಧ್ಯಕ್ಷರಾದ ಜಿ.ನಾರಾಯಣಪ್ಪ ತಿಳಿಸಿದ್ದಾರೆ.

ಕರಿಗೌಡರ ಬೀದಿಯ ಯುವಕ ಸಂಘದ ವತಿಯಿಂದ ಮೊದಲನೇ ವರ್ಷದ ಗಾಡಿ ಚಕ್ರ ಕಟ್ಟಿ ಓಡಿಸುವ ಸ್ಪರ್ಧೆ, ಹಾಲು ಹಲ್ಲು ಮತ್ತು ಎರಡು ಹಲ್ಲಿನ ಕರುಗಳ ಚಕ್ಕಡಿ ಪಾಯಿಂಟ್ಗಾಡಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ತೀರ್ಪು ಗಾರರು ಮತ್ತು ಸಂಘದ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ್ (೮೯೭೦೦೦೩೦೫೩) ಮತ್ತು ನಾಗೇಂದ್ರ (೭೭೬೦೪೫೫೩೫೨) ಅವರನ್ನು ಸಂಪರ್ಕಿಸಬಹುದು.

” ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಸುಮಾರು ೭೪ವರ್ಷಗಳಿಂದ ದನಗಳ ಜಾತ್ರೆ ಹಾಗೂ ಹತ್ತಾರು ಹಳ್ಳಿಗಳಿಂದ ಬರುವ ಭಕ್ತರಿಗೆ ನೀರಿನ ವ್ಯವಸ್ಥೆ, ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದೇವೆ. ಜಾತ್ರೆಗೆ ಬರುವ ಎಲ್ಲಾ ರಾಸುಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.”

-ವಿ.ಉಮೇಶ್, ಪುಟ್ಟರಾಜು, ಕಾರ್ಯದರ್ಶಿಗಳು, ಬಾಚಳ್ಳಿ ಆಂಜನೇಯ ಸ್ವಾಮಿ ಟ್ರಸ್ಟ್

Tags:
error: Content is protected !!