ಮಂಜು ಕೋಟೆ
ಎಚ್. ಡಿ. ಕೋಟೆ: ಗಿರಿಜನರನ್ನೇ ಹೆಚ್ಚಾಗಿ ಹೊಂದಿರುವ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಎಸ್. ಎಂ. ಕೃಷ್ಣ ಅಪಾರ ಕೊಡುಗೆ ನೀಡಿದ್ದು, ಇಂದಿಗೂ ಕ್ಷೇತ್ರದ ಜನಸಾಮಾನ್ಯರು ಅವರ ಕೆಲಸ ಕಾರ್ಯಗಳನ್ನು ಸ್ಮರಿಸುತ್ತಿದ್ದಾರೆ.
೧೯೯೯ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಕೋಟೆ ಎಂ. ಶಿವಣ್ಣ ಅವರು ಕಾಂಗ್ರೆಸ್‌ನಿಂದ ಶಾಸಕರಾಗಿ ಗೆಲುವು ಸಾಽಸಿದ್ದರು. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಽಕಾರಕ್ಕೆ ಬಂದಿತ್ತು. ಆಗ ಅಂದಿನ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಕ್ಷೇತ್ರದ ಶಾಸಕರಾಗಿದ್ದ ಎಂ. ಶಿವಣ್ಣ ಅವರಿಗೆ ಸಚಿವ ಸ್ಥಾನ ನೀಡಿದ್ದರು. ಸಿಎಂ ಪರಮಾಪ್ತರಾಗಿ ೫ ಖಾತೆಗಳನ್ನು ಶಿವಣ್ಣ ನಿರ್ವಹಿಸಿದ್ದರು.
೨೦೦೦ನೇ ಸಾಲಿನಲ್ಲಿ ರಾಜ್ಯದಲ್ಲೇ ಪ್ರಪ್ರಥಮವಾಗಿ ಗ್ರಾಮೀಣ ಪ್ರದೇಶದ ಕೋಟೆ ಭಾಗದಲ್ಲಿ ಮಿನಿ ಸಚಿವ ಸಂಪುಟ ಸಭೆಯನ್ನು ಎಸ್. ಎಂ.ಕೃಷ್ಣ ಅವರು ನಡೆಸಿ ಆದಿವಾಸಿ ಜನರ ಅಭಿವೃದ್ಧಿಗೆ ಸ್ಪಂದಿಸಿದ್ದರು.
ಮೈಸೂರು-ಮಾನಂದವಾಡಿ ಹೆದ್ದಾರಿ ನಿರ್ಮಾಣ, ಕೋಟೆ ಪಟ್ಟಣಕ್ಕೆ ಕಬಿನಿ ಶುದ್ಧ ಕುಡಿಯುವ ನೀರು ಯೋಜನೆ, ಅನೇಕ ಕಡೆ ಉಪ ವಿದ್ಯುತ್ ಘಟಕಗಳು, ಮಿನಿ ವಿಧಾನಸೌಧ ನಿರ್ಮಾಣ, ಕೆಎಸ್‌ಆರ್‌ಟಿಸಿ ಡಿಪೋ ಘಟಕ ಪ್ರಾರಂಭ, ವಿದ್ಯಾರ್ಥಿಗಳಿಗೆ ಐಟಿಐ ಕಾಲೇಜು, ಆಶ್ರಮ ಶಾಲೆಗಳು, ಗಿರಿಜನರಿಗೆ ನ್ಯಾಯ ಬೆಲೆ ಅಂಗಡಿ, ರೈತರಿಗಾಗಿ ತಾರಕ ಏತ ನೀರಾವರಿ ಯೋಜನೆ, ಪಿಯು ಮತ್ತು ಪದವಿ ಕಾಲೇಜುಗಳು, ತೋಟಗಾರಿಕೆ ಇಲಾಖೆಯ ೩೦ ಎಕರೆ ಜಾಗ ಪುರಸಭೆಗೆ ಸೇರ್ಪಡೆ ಸೇರಿದಂತೆ ಅನೇಕ ಕೆಲಸ ಕಾರ್ಯಗಳನ್ನು ನಡೆಸಿ ೧ ಸಾವಿರ ಕೋಟಿ ರೂ. ಗಳಷ್ಟು ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಕೃಷ್ಣ ಅವರ ಅವಧಿಯಲ್ಲಿ ನೀಡಲಾಗಿತ್ತು.
ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಅವರು ೪-೫ ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿ ಅಭಿವೃದ್ಧಿ ಕೆಲಸಗಳ ಜೊತೆಗೆ ಅಂದು ಉದ್ಭವಿಸಿದ ಕಾವೇರಿ ನೀರಿನ ವಿವಾದದಲ್ಲಿ ಕಬಿನಿ ಗುರುಸ್ವಾಮಿ ಕಬಿನಿಗೆ ಹಾರಿ ಸಾವನಪ್ಪಿದ ಸಂದರ್ಭದಲ್ಲಿ ಉಂಟಾದ ಗಲಾಟೆ ವೇಳೆ ಪ್ರತಿಭಟನಾಕಾರರಿಗೆ ಸ್ಪಂದಿಸಿ ಇಲ್ಲೇ ವಾಸ್ತವ್ಯ ಹೂಡಿದ್ದರು. ಹೀಗಾಗಿ ಅವರು ನೀಡಿದ ಕೊಡುಗೆ, ಅಭಿವೃದ್ಧಿ ಕೆಲಸಗಳು ಕ್ಷೇತ್ರದ ಜನರ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿದ್ದು, ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.





