Mysore
17
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಹಾಸಿಗೆ ಹಿಡಿದ ತಾಯಿ ಸೇವೆ ಮಾಡುತ್ತಲೇ ಡಿಸ್ಟಿಂಕ್ಷನ್‌ ಪಡೆದ ವಿದ್ಯಾರ್ಥಿನಿ !

ಸಾಲೋಮನ್
ಮೈಸೂರು: ಕಾಲು ಕಳೆದುಕೊಂಡು ಹಾಸಿಗೆ ಹಿಡಿದಿರುವ ತಾಯಿಯ ಸೇವೆ ಮಾಡುತ್ತಲೇ ಕುಟುಂಬದ ಜವಾಬ್ದಾರಿ ಹೊತ್ತುಕೊಂಡಿರುವ ವಿದ್ಯಾರ್ಥಿನಿ ಗುಲ್ ಅಫ್ತಾ ಖಾನಂ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ರಾಜೀವ್‌ನಗರ ಬಡಾವಣೆಯ ಮೊದಲ ಹಂತದ ನಿವಾಸಿ ಫರಾನ್ ಹಾಗೂ ಸಬೀನಾ ಖಾನಂ ದಂಪತಿಯ ಏಕೈಕ ಪುತ್ರಿಯಾಗಿರುವ ಗುಲ್ ಅಫ್ತಾ ಖಾನಂ ಎಸ್‌ಎಸ್‌ಎಲ್‌ಸಿಯಲ್ಲಿಯೂ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದು, ಎಂಬಿಎ ಶಿಕ್ಷಣ ಪಡೆಯಬೇಕೆಂಬ ಅಭಿಲಾಷೆಯನ್ನು ಹೊಂದಿದ್ದಾರೆ. ಕಾಲು ಕಳೆದುಕೊಂಡಿ ರುವ ತಾಯಿಯ ಸೇವೆಯನ್ನು ಮಾಡುತ್ತಾ, ಎಲ್ಲಾ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ ತನ್ನ ವಿದ್ಯಾಭ್ಯಾಸದ ಕಡೆಗೂ ಗಮನ ಕೊಟ್ಟಿದ್ದಾರೆ.

ಮನೆ ಕೆಲಸಗಳನ್ನು ಮುಗಿಸಿ ಬಿಡುವು ಸಿಕ್ಕಾಗ ಟಿವಿ, ಮೊಬೈಲ್ ಬಿಟ್ಟು ಓದಿನ ಕಡೆಗೆ ಗಮನಹರಿಸಿದ ಫಲವಾಗಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ‘ನನಗೆ ಬಿಸಿನೆಸ್ ಸ್ಟಡೀಸ್‌ನಲ್ಲಿ ಹೆಚ್ಚು ಆಸಕ್ತಿ ಇದೆ. ಈಗ ಬಿಬಿಎಗೆ ಸೇರುತ್ತೇನೆ. ನಂತರ ಎಂಬಿಎ ಓದಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ ಎನ್ನುತ್ತಾರೆ ಗುಲ್ ಅಫ್ತಾ ಖಾನಂ. ಇವರ ತಂದೆ ಫಾರಾನ್ ಖಾನ್ ಆಟೋ ಚಾಲಕರಾಗಿದ್ದಾರೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳು ಇದ್ದಾಗ್ಯೂ ಮಗಳ ವಿದ್ಯಾಭ್ಯಾಸಕ್ಕೆ ಏನು ತೊಂದರೆಯಾಗದಂತೆ ಬೆನ್ನೆಲುಬಾಗಿ ನಿಂತಿದ್ದಾರೆ. ಗುಲ್ ಅಫ್ತಾ ಖಾನಂ ಬಿಸಿನೆಸ್ ಸ್ಟಡೀಸ್-೯೩, ಅಕೌಂಟೆನ್ಸಿ-೮೫, ಎಕನಾಮಿಕ್ಸ್-೮೫, ಹಿಸ್ಟ್ರಿ-೮೨ ಹಾಗೂ ಇಂಗ್ಲಿಷ್-೭೬ ಸೇರಿ ೫೦೯ ಅಂಕಗಳನ್ನು ಪಡೆದಿದ್ದಾರೆ.

 

Tags:
error: Content is protected !!