Mysore
18
broken clouds

Social Media

ಬುಧವಾರ, 14 ಜನವರಿ 2026
Light
Dark

ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಕಾಣದ ಕೈಗಳ ಪಿತೂರಿ’

ಭೇರ್ಯ ಮಹೇಶ್

೪೦೦ಕ್ಕೂ ಹೆಚ್ಚು ಕಾರುಗಳು, ವಾಹನಗಳಲ್ಲಿ ಧರ್ಮಸ್ಥಳಕ್ಕೆ ಯಾತ್ರೆ ನಡೆಸಿದ ಸಾ.ರಾ.ಮಹೇಶ್ ಆರೋಪ 

ಕೆ.ಆರ್.ನಗರ/ಧರ್ಮಸ್ಥಳ: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ೫೦೦ ಕ್ಕೂ ಹೆಚ್ಚು ಕಾರು ಮತ್ತು ವಾಹನಗಳಲ್ಲಿ ‘ಧರ್ಮಸ್ಥಳ ಪರ ನಾವಿದ್ದೇವೆ’ ಎಂಬ ಘೋಷವಾಕ್ಯದೊಂದಿಗೆ ಧರ್ಮಸ್ಥಳಕ್ಕೆ ಮಾಜಿ ಸಚಿವ ಹಾಗೂ ಜಾ.ದಳ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್ ನೇತೃತ್ವದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಮಹದೇವ್, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಕೆ.ವಿವೇಕಾನಂದ ಹಾಗೂ ಹೆಚ್.ಡಿ.ಕೋಟೆ ಮುಖಂಡ ಕೃಷ್ಣನಾಯಕ ಅವರು ಹಾಜರಿದ್ದರು. ಧರ್ಮಸ್ಥಳಕ್ಕೆ ತೆರಳಿ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರನ್ನು ಭೇಟಿ ಮಾಡಿ ಫಲ-ತಾಂಬೂಲ ನೀಡಿ ಗೌರವ ಸಮರ್ಪಿಸಿ ನೈತಿಕ ಬಲ ತುಂಬಿದರು.

ಈ ವೇಳೆ ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರನ್ನು ಕೇಂದ್ರ ಸರ್ಕಾರ ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನವರೆಗೂ ಕಾಣದ ಕೈಗಳು ಪಿತೂರಿ ಮಾಡುತ್ತಿದ್ದು, ಅವರ ತೇಜೋವಧೆ ಮಾಡುತ್ತಿವೆ ಎಂದು ದೂರಿದರು.

ಧರ್ಮಸ್ಥಳ ಕ್ಷೇತ್ರವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದೆ. ಅಲ್ಲದೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಕಾರ್ಯನಿರ್ವಹಿಸುತ್ತಾ ಅನ್ನದಾಸೋಹದ ಮೂಲಕ ಸೇವೆ ಸಲ್ಲಿಸುತ್ತಾ ಎಲ್ಲರನ್ನೂ ಒಂದೇ ಎಂಬ ಭಾವನೆಯಿಂದ ಕಂಡಿದೆ ಎಂದರು.

ಮಹಿಳೆಯರಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸು ಸಹಾಯ ಮಾಡಿ ಸ್ವಾವಲಂಬಿ ಜೀವನ ನಡೆಸಲು ಸಹಕಾರನೀಡುತ್ತಿದೆ. ನೂರಾರು ದೇವಾಲಯಗಳ ಜೀರ್ಣೋದ್ಧಾರಕ್ಕೆ ಆರ್ಥಿಕ ನೆರವು ನೀಡಿದೆ. ಇಂತಹ ಪುಣ್ಯಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಈ ನಿರಾಧಾರ ಆರೋಪದಿಂದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಆರೋಪ ಮುಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಗತ್ಯವಾಗಿ ಮತ್ತು ಅನವಶ್ಯಕವಾಗಿ ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈಗ ಸದ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ನಂತರ ಸತ್ಯ ಹೊರಬೀಳಲಿದ್ದು, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂದು ನುಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕಳಂಕ ತರುವ ರೀತಿಯಲ್ಲಿ ದೊಡ್ಡ ಮಟ್ಟದಲ್ಲಿ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ದೊಡ್ಡ ಷಡ್ಯಂತ್ರ ಇದೆ ಎಂದಿದ್ದಾರೆ. ಅವರ ಮಾತನ್ನು ನಾವೆಲ್ಲ ಒಪ್ಪುತ್ತೇವೆ ಎಂದರು. ಇಂತಹ ಷಡ್ಯಂತ್ರ ಮಾಡಿದವರನ್ನು ಹಾಗೂ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡುವವರನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ. ವಿವೇಕಾ ನಂದ, ಮಾಜಿ ಶಾಸಕ ಕೆ.ಮಹದೇವ್, ಜಿಪಂ ಮಾಜಿ ಸದಸ್ಯ ದ್ವಾರಕೀಶ್, ಎಂ.ಟಿ.ಕುಮಾರ್, ಕೆ.ಆರ್. ಕ್ಷೇತ್ರದ ಜಾ.ದಳ ಅಧ್ಯಕ್ಷ ಅಮ್ಮ ಸಂತೋಷ್, ಮಾಜಿ ಮೇಯರ್ ಚಿನ್ನಿ ರವಿ, ಲಿಂಗಪ್ಪ, ನಗರಪಾಲಿಕೆ ಮಾಜಿ ಸದಸ್ಯರಾದ ಶೋಭ, ಅಶ್ವಿನಿ, ಜಾ.ದಳ ಮುಖಂಡ ಬೆಳವಾಡಿ ಶಿವಮೂರ್ತಿ, ಜಾ.ದಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ತಾಲ್ಲೂಕು ಜಾ.ದಳ ಅಧ್ಯಕ್ಷರಾದ ಹಂಪಾಪುರ ಕುಮಾರ್, ಮೆಡಿಕಲ್ ರಾಜಣ್ಣ, ಅಣ್ಣಯ್ಯಶೆಟ್ಟಿ, ರಾಜೇಂದ್ರ, ಜಿಲ್ಲಾ ಜಾ.ದಳ ಮುಖಂಡರಾದ ಹೆಚ್.ಕೆ.ಮಧುಚಂದ್ರ,  ಎಸ್.ಪಿ.ಆನಂದ್, ಯುವ ಜಾ.ದಳ ಗ್ರಾಮಾಂತರ ಉಪಾಧ್ಯಕ್ಷ ಕಗ್ಗರೆ ಕುಚೇಲ, ಜಿಲ್ಲಾ ಜಾ.ದಳ ಮಹಿಳಾ ಘಟಕದ ಅಧ್ಯಕ್ಷರಾದ ದಾಕ್ಷಾಯಿಣಿ, ತಾ.ಜಾ.ದಳ ಮಹಿಳಾ ಘಟಕದ ಅಧ್ಯಕ್ಷೆ ರಾಜಲಕ್ಷ್ಮಿ, ಕಾರ್ಯದರ್ಶಿ ಭಾಗ್ಯಲಕ್ಷ್ಮಿ, ಜಿಲ್ಲಾ ಜಾ.ದಳ ಮಹಿಳಾ ಪ್ರಧಾನ ಕಾರ್ಯದರ್ಶಿ ನಂದಿನಿ ರಮೇಶ್, ಪುರಸಭಾ ಸದಸ್ಯ ಸಂತೋಷ್ ಗೌಡ, ಜಾ.ದಳ ಮುಖಂಡರಾದ ಸಿ.ವಿ.ಗುಡಿ ಸಾಗರ್, ಸುನಿಲ್, ಬಾಲಾಜಿ ಗಣೇಶ್, ಸಾತಿಗ್ರಾಮ ಶಂಕರ್, ಡೇರಿ ಮಹೇಶ್, ಡೇರಿ ರಾಜೇಗೌಡ, ರಾಮೇಗೌಡ, ಸಾಲಿಗ್ರಾಮ ಲಾಲೂಸಾಬ್, ಗ್ರಾ.ಪಂ.ಮಾಜಿ ಅಧ್ಯಕ್ಷ ಸತೀಶ್, ಸದಸ್ಯ ಹರೀಶ್, ಜಾ.ದಳ ಮುಖಂಡರಾದ ಸಾಲಿಗ್ರಾಮ ಮಹೇಶ್, ತಿಮ್ಮಗೌಡ, ಹರದನಹಳ್ಳಿ ರಮೇಶ್, ಬಂಡಹಳ್ಳಿ ಕುಚೇಲ, ಕಲ್ಲಹಳ್ಖಿ ರಾಜೇಶ್, ಸಾತಿಗ್ರಾಮ ನಾಗಣ್ಣ ಸಾ.ರಾ.ಜಲೇಂದ್ರ, ಮೈಸೂರು ರಾಮು, ಪಚ್ಚಿ, ಕೊಪ್ಪಲು ಲೋಕೇಶ್, ಮಂಜು, ಡ್ರೈವರ್ ಸೋಮು, ಗುರು, ಅಂಗರಕ್ಷಕರಾದ ಯುವರಾಜ್, ಗೋಪಾಲ್, ಮುಂತಾದವರು ಹಾಜರಿದ್ದರು.

” ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ಶೀಘ್ರವಾಗಿ ತನಿಖೆ ನಡೆಸಿ ಅಂತಹ ಕಿಡಿಗೇಡಿಗಳನ್ನು ಬಂಧಿಸಬೇಕು. ಧಾರ್ಮಿಕ ಭಾವನೆಗಳಿಗೆ ಮತ್ತು ನಂಬಿಕೆಗೆ ಬೆಂಕಿ ಹಚ್ಚುವ ಕೆಲಸ ಮಾಡಿರುವವರನ್ನು ಪತ್ತೆ ಹಚ್ಚಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ನಾವೆಲ್ಲಾ ಶ್ರೀ ಮಂಜುನಾಥಸ್ವಾಮಿ, ಶ್ರೀ ಅಣ್ಣಪ್ಪಸ್ವಾಮಿ ದರ್ಶನ ಮಾಡಿ ಕೊಂಡು, ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ನೈತಿಕ ಬಲ ತುಂಬುತ್ತಿದ್ದೇವೆ.”

ಸಾ.ರಾ.ಮಹೇಶ್, ಮಾಜಿ ಸಚಿವರು

” ಮೈಸೂರು, ಕೆ.ಆರ್.ನಗರ, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ತಿ.ನರಸೀಪುರ ಹಾಗೂ ಮಂಡ್ಯದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿದ್ದರು.”

Tags:
error: Content is protected !!