Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

3 ಪ್ರವಾಸಿ ತಾಣ; ನಿರೀಕ್ಷೆಗೂ ಮೀರಿ ಪ್ರವಾಸಿಗರ ಆಗಮನ

ಕೆ. ಬಿ. ರಮೇಶನಾಯಕ
ಮೈಸೂರು: ದೇಶ-ವಿದೇಶಗಳಿಂದ ವರ್ಷಪೂರ್ತಿ ಬರುವ ಪ್ರವಾಸಿಗರು ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಮೂಲಸೌಕರ್ಯ ಕಲ್ಪಿಸುವ ಜತೆಗೆ ಪ್ರವಾಸಿತಾಣಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಅರಮನೆ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾ ಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶದ ವಿವಿಧ ರಾಜ್ಯಗಳ ಪ್ರವಾಸಿಗರು ಭೇಟಿ ನೀಡಿದ್ದರೆ, ವಿದೇಶಿಗರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಪ್ರವಾಸೋದ್ಯಮ ಇಲಾಖೆಯು ಗುರುತಿಸಿರುವ ೨೬ ಪ್ರವಾಸಿತಾಣಗಳಿಗೆ ಭಾರತೀಯರು ಭೇಟಿ ನೀಡುತ್ತಿದ್ದರೆ, ಕಳೆದ ಎರಡು ವರ್ಷಗಳಲ್ಲಿ ವಿದೇಶಿಯರು ಹೆಚ್ಚಾಗಿ ಎಂಟು ಸ್ಥಳಗಳಿಗಷ್ಟೇ ಭೇಟಿ ನೀಡಿರುವುದು ಗಮ ನಾರ್ಹವಾಗಿದೆ. ಅದರಲ್ಲೂ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಗಿಂತ, ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ.

ದಸರಾ ಮಹೋತ್ಸವದ ಸಂದರ್ಭದಲ್ಲಿ ಮೈಸೂರಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರೆ, ಉಳಿದ ಅವಧಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೊರಗಿನಿಂದ ಬರುವ ಪ್ರವಾಸಿಗರು ದಿನವಿಡೀ ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಇಲ್ಲೇ ವಾಸ್ತವ್ಯ ಹೂಡುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೈಸೂ ರಿಗೆ ಭೇಟಿ ನೀಡುವವರು ಹತ್ತಿರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಟೂರಿಸ್ಟ್ ಸರ್ಕೀಟ್ ಮಾಡಿ ಏಕರೂಪದ ಟಿಕೆಟ್ ವ್ಯವಸ್ಥೆ ಮಾಡಿ ಸಮಯ ಉಳಿತಾಯ ಮಾಡಲು ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಪ್ಲಾನ್ ಮಾಡಲಾಗಿದೆ.

ಎಂಟೇ ಸ್ಥಳಗಳಿಗೆ ವಿದೇಶಿಗರ ಭೇಟಿ: ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುವ ಭಾರತೀಯರು ಮತ್ತು ವಿದೇಶಿಯರ ಪ್ರಮಾಣದ ಅಂಕಿ ಅಂಶ ಸಂಗ್ರಹಿಸಿದ್ದು, ಅದರಂತೆ ೧೯ ಸ್ಥಳಗಳತ್ತ ವಿದೇಶಿಯರು ತಕೆ ಹಾಕಿಲ್ಲ.

ಜಗತ್ತಿನಲ್ಲೇ ಗಮನ ಸೆಳೆದಿರುವ ಮೈಸೂರಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಆಗಮಿಸಿದರೂ ಕೂಡ ಇದುವರೆಗೆ ೨೬ ಸ್ಥಳಗಳಲ್ಲಿ ಬರೀ ಎಂಟು ಪ್ರವಾಸಿ ತಾಣಗಳಿಗೆ ಮಾತ್ರ ಭೇಟಿ ನೀಡಿದ್ದಾರೆ.

ಮೈಸೂರು ಅರಮನೆ, ಆರ್ಟ್ ಗ್ಯಾಲರಿ, ಶ್ರೀ ಚಾಮ ರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ಸೋಮನಾಥ ಪುರ, ಕಬಿನಿ ಬ್ಯಾಕ್ ವಾಟರ್, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗೋಲ್ಡನ್ ಟೆಂಪಲ್ ಹೊರತುಪಡಿಸಿ ಉಳಿದ ೧೪ ಸ್ಥಳಗಳಿಗೆ ಶೂನ್ಯ ಭೇಟಿಯಾಗಿದೆ. ಅದರಲ್ಲೂ ಅರಮನೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ವಿದೇಶಿಯರ ಸಂಖ್ಯೆ ಎರಡು ಲಕ್ಷ ದಾಟಿದ್ದರೆ, ನಂತರದ ಸ್ಥಾನದಲ್ಲಿ ಸೋಮನಾಥಪುರ ಇದೆ. ತದ ನಂತರ ಚಾಮುಂಡಿಬೆಟ್ಟ ವೀಕ್ಷಿಸಿರುವುದನ್ನು ಗಮನಿಸಬಹುದು.

ಉಳಿದಂತೆ ಇತರೆ ವರುಣಕೆರೆ, ಲಿಂಗಾಂಬುಧಿ ಕೆರೆ, ಕಾವೇರಿ ಮಲ್ಟಿಮೀಡಿಯಾ ಆರ್ಟ್ ಗ್ಯಾಲರಿ, ತಲಕಾಡು, ಗರ್ಗೇಶ್ವರಿ, ಕಾವೇರಿ ರಿವರ್(ನದಿಪಾತ್ರ), ನಂಜನ ಗೂಡು, ತಗಡೂರು ದೇವಸ್ಥಾನ, ಬದನವಾಳು ಗಾಂಽಜಿ ಆಶ್ರಮ, ಖಾರಪುರ, ಗೊಮ್ಮಟಗಿರಿ, ಚಿಕ್ಕಹುಣಸೂರು ಕೆರೆ, ಚುಂಚನಕಟ್ಟೆ ಫಾಲ್ಸ್, ಸಾಲಿಗ್ರಾಮ ದೊಡ್ಡಕೆರೆ, ಚಿಕ್ಕದೇವಮ್ಮ ಬೆಟ್ಟ, ಕಬಿನಿ ಡ್ಯಾಂ, ತಾರಕ ಡ್ಯಾಂ, ನುಗು ಡ್ಯಾಂಗಳಿಗೆ ಭೇಟಿಯೇ ನೀಡಿಲ್ಲ ಎಂಬುದು ದಾಖಲಾಗಿದೆ.

ಹೊರ ರಾಜ್ಯಗಳ ಪ್ರವಾಸಿಗರ ಗಮನ ಸೆಳೆದ ತಾಣಗಳೆಷ್ಟು: ನೆರೆಯ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಮೈಸೂರಿಗೆ ಬರುವ ಪ್ರವಾಸಿಗರನ್ನು ಅನೇಕ ತಾಣಗಳು ಸೆಳೆದಿದ್ದು, ಲಕ್ಷಕ್ಕೂ ಮೀರಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅರಮನೆ, ಆರ್ಟ್ ಗ್ಯಾಲರಿ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ತಲಕಾಡು, ನಂಜನಗೂಡು, ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ, ಸೋಮನಾಥಪುರ, ಬೈಲಕುಪ್ಪೆ ಗೋಲ್ಡನ್ ಟೆಂಪರ್‌ಗೆ ಕನಿಷ್ಠ ಒಂದು ಲಕ್ಷಕ್ಕೂ ಹೆಚ್ಚು ಭಾರತೀಯ ಪ್ರವಾಸಿಗರು ಭೇಟಿ ನೀಡಿದ್ದಾರೆ.

ನಂತರದಲ್ಲಿ ವರುಣಕೆರೆ, ಕಬಿನಿ ಬ್ಯಾಕ್ ವಾಟರ್, ಗೊಮ್ಮಟಗಿರಿ, ಚಿಕ್ಕದೇವಮ್ಮ ಬೆಟ್ಟಕ್ಕೆ ಭೇಟಿ ನೀಡಿದ್ದರೆ, ಉಳಿದಂತೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆಯಲ್ಲಿ ಐದು ಸಾವಿರ ಗಡಿಯನ್ನು ದಾಟಿಲ್ಲ. ಸ್ವದೇಶ್ ದರ್ಶನ್ ೩. ೦ ಯೋಜನೆಯಡಿ ಕೆಲವು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುತ್ತಿದೆ.

ಸ್ವದೇಶ್ ದರ್ಶನ್-೨. ೦ ಯೋಜನೆಯಡಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ೨೪ ಕೋಟಿ ರೂ. ಅನುದಾನದಲ್ಲಿ ಮೃಗಾಲಯ, ಕಾರಂಜಿಕೆರೆ, ಪ್ರಾದೇಶಿಕ ವಸ್ತುಸಂಗ್ರಹಾಲಯದಲ್ಲಿ ಎಕೋ ಟೂರಿಸಂ ಮಾಡಿ, ಏಕ ಟಿಕೆಟ್ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ಮೂರನೇ ಹಂತದಲ್ಲಿ ಹಲವು ಪ್ರವಾಸಿತಾಣಗಳನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಸಿದ್ಧತೆ ನಡೆಸಲಾಗಿದೆ. -ಎಂ. ಕೆ. ಸವಿತಾ, ಜಂಟಿ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

 

Tags:
error: Content is protected !!